ಬೆಂಗಳೂರು: ಅಧಿಕಾರ ಹಂಚಿಕೆ ಕುರಿತು ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಬಿಕ್ಕಟ್ಟು ಇತ್ಯರ್ಥವಾಗುತ್ತಿದ್ದಂತೆ ಕಾಂಗ್ರೆಸ್ ನ ಮತ್ತೊಬ್ಬ ಹಿರಿಯ ನಾಯಕ ಪರಮೇಶ್ವರ್ ತಮಗೆ ಉಪಮುಖ್ಯಮಂತ್ರಿ ಹುದ್ದೆ ಕೊಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಸಮುದಾಯ ಬೆಂಬಲದಿಂದಾಗಿಯೇ ಕಾಂಗ್ರೆಸ್ ಹೆಚ್ಚು ಸ್ಥಾನ ಗೆಲ್ಲಲು ಸಾಧ್ಯವಾಗಿದೆ. ಇದನ್ನು ಹೈಕಮಾಂಡ್ ಮನದಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.
ಪರಿಶಿಷ್ಟ ಮೀಸಲು ಕ್ಷೇತ್ರಗಳಲ್ಲಿ 22ರಲ್ಲಿ, ಪರಿಶಿಷ್ಟ ಪಂಗಡದಲ್ಲಿ 15 ಸೇರಿ ಒಟ್ಟು 51 ಕ್ಷೇತ್ರಗಳ ಪೈಕಿ, ಕಾಂಗ್ರೆಸ್ 37ರಲ್ಲಿ ಗೆದ್ದಿದೆ. ಮುಕ್ಕಾಲು ಪಾಲು ಮೀಸಲು ಕ್ಷೇತ್ರಗಳು ಕಾಂಗ್ರೆಸ್ ಪಾಲಾಗಿವೆ. ಇದು ದಲಿತ ಸಮುದಾಯ ಯಾರ ಪರವಾಗಿ ನಿಂತಿದೆ ಎಂಬುದಕ್ಕೆ ಸ್ಪಷ್ಟ ಸೂಚನೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಂಬಲ ದೊರೆತಾದ ಸಮುದಾಯವನ್ನು ನಿರ್ಲಕ್ಷ್ಯ ಮಾಡುವುದು ಸೂಕ್ತವಲ್ಲ ಎಂದರು
ನಾವು ಶಿಸ್ತಿನ ಸಿಪಾಯಿಗಳು. ಲಾಬಿ, ಹೋರಾಟ ಮಾಡಲ್ಲ. ಆದರೆ, ಅವರು (ಹೈಕಮಾಂಡ್) ಅರ್ಥ ಮಾಡಿಕೊಳ್ಳಬೇಕು. ಯಾವ ಸಮುದಾಯದ ಬೆಂಬಲ ದೊರಕಿದೆ ಎಂದು. ರಾಜಸ್ಥಾನದ ರೀತಿ ಇಲ್ಲಿ ಆಗಲು ಬಿಡಲ್ಲ. ಸರ್ಕಾರ ಒಳ್ಳೆಯ ಆಡಳಿತ ನೀಡುವ ನೀರೀಕ್ಷೆ ಜನರಲ್ಲಿದೆ’ ಎಂದೂ ಹೇಳಿದರು.




