ದಾವಣಗೆರೆ: ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬಿಡಾಡಿ ಹಂದಿಗಳ ಹಾವಳಿ ಹೆಚ್ಚಾಗಿದ್ದು, ನಿಫಾ ವೈರಸ್, ಎಚ್.ಎನ್1 ಹಾಗೂ ಇನ್ನಿತರ ಸಾಂಕ್ರಮಿಕ ಖಾಯಿಲೆಗಳ ಹರಡುವಿಕೆಯನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ, ನಗರದ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಪಾಲಿಕೆ ವ್ಯಾಪ್ತಿಯಲ್ಲಿರುವ ಬಿಡಾಡಿ ಹಂದಿಗಳನ್ನು ನಿಯಂತ್ರಿಸುವುದು ಅವಶ್ಯವಿದೆ.
- ಚುನಾವಣೆಯಲ್ಲಿ ಸೋಲುವ ಭಯದಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ: ಆರ್.ಅಶೋಕ
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
ಮಹಾನಗರ ಪಾಲಿಕೆಯ ಅನುಮತಿಯಿಲ್ಲದೇ ಹಂದಿಗಳ ಸಾಕಣೆ ಮಾಡುವುದು ಹಾಗೂ ಸಾರ್ವಜನಿಕರಿಗೆ ಉಪದ್ರವಕಾರಿಯಾಗುವಂತೆ ಬಿಡಾಡಿಯಾಗಿ ಅಲೆಯಲು ಬಿಡುವುದು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದನ್ವಯ ಉಲ್ಲಂಘನೆಯಾಗಿರುತ್ತದೆ.
ನಗರದಲ್ಲಿ ಸಾರ್ವಜನಿಕರಿಗೆ ಉಪದ್ರವಕಾರಿಯಾಗುವಂತೆ ಬಿಡಾಡಿಯಾಗಿ ಅಲೆಯುತ್ತಿರುವ ಹಂದಿಗಳನ್ನು ಹಿಡಿದು ಸೂಕ್ತ ಸೌಲಭ್ಯಗಳನ್ನು ಒದಗಿಸಿ ಪಾಲಿಕೆ ಅನುಮತಿಯೊಂದಿಗೆ ಸಾಕಣೆ ಮಡಬೇಕು. ತಪ್ಪಿದಲ್ಲಿ ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಠಿಯಿಂದ ಸಾರ್ವಜನಿಕರಿಗೆ ಉಪದ್ರವವಾಗುವಂತೆ ಅಲೆಯುತ್ತಿರುವ ಬಿಡಾಡಿ ಹಂದಿಗಳನ್ನು ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮದನ್ವಯ ಕ್ರಮವಹಿಸಲಾಗುವುದು. ಹಾಗೂ ಇದರಿಂದ ಉಂಟಾಗುವ ಯಾವುದೇ ನಷ್ಟಗಳಿಗೆ ಪಾಲಿಕೆ ಜವಾಬ್ದಾರಿಯಾಗುವುದಿಲ್ಲ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.




