ಭಾರತ್ ಬಂದ್ ಗೆ ಜೈ ಎಂದ ಎಡಪಕ್ಷಗಳು

5 years ago

ದೆಹಲಿ: ಕೇಂದ್ರದ ವಿವಾದಿತ 3 ಕೃಷಿ ಮಸೂದೆಗಳ ವಿರುದ್ಧ ಸೆಪ್ಟಂಬರ್ 25ರಂದು ರೈತ ಒಕ್ಕೂಟಗಳು ಕರೆ ನೀಡಿರುವ ಭಾರತ್ ಬಂದ್ ಗೆ ಎಡಪಕ್ಷಗಳಾದ ಸಿಪಿಐ, ಸಿಪಿಎಂ ಮತ್ತು ಫಾರ್ವರ್ಡ್ ಬ್ಲಾಕ್ ಗಳು ಜಂಟಿ ಸುದ್ದಿ ಗೋಷ್ಠಿ ನಡೆಸಿ ಬೆಂಬಲ ಘೋಷಿಸಿವೆ.

ನವೆಂಬರ್ 26, 2020ರಂದು ಕೇಂದ್ರದ ಕೃಷಿ ಮಸೂದೆಗಳ ವಿರುದ್ಧ ಪ್ರತಿಭಟನೆ ಆರಂಭಿಸಿದ ರೈತ ಒಕ್ಕೂಟಗಳು ಹಠ ಬಿಡದೆ ಪ್ರತಿಭಟನೆ ಮುಂದುವರೆಸಿವೆ. ಕೇಂದ್ರ ತನ್ನ ಜಿಗುಟುತನ ಮುಂದುವರೆಸಿದ್ದು, ರೈತರು ಕೂಡ ಛಲ ಬಿಡದೆ ಹೋರಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸೆ. 25ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ. ಭಾರತ್ ಬಂದ್ ಯಶಸ್ವಿಯಾಗಿಸುವ ಹಿನ್ನೆಲೆಯಲ್ಲಿ ಎಡಪಕ್ಷಗಳು ತಮ್ಮ ಸಂಘಟನೆಗಳಿಗೆ ಬೆಂಬಲ ಸೂಚಿಸುವಂತೆ ಕರೆ ನೀಡಿವೆ.

Leave a Reply