ಲೀಲಾವತಿ ಅಮರ ಚಲನಚಿತ್ರ ಸಂಗೀತ ಸಂಜೆ ಕಾರ್ಯಕ್ರಮ

2 years ago

ಬೆಂಗಳೂರು: ರಾಜಾಜಿನಗರ ಆರ್.ಪಿ.ಎ. ಶಾಲೆ ಮೈದಾನದಲ್ಲಿ ಶ್ರೀ ಸಂಜೀವಿನಿ ವೀರಾಂಜನೇಯ ಸ್ವಾಮಿ ದೇವಸ್ಥಾನ ವತಿಯಿಂದ ಪಂಚಭಾಷಾ ತಾರೆ ಲೀಲಾವತಿ ಸವಿ ನೆನಪಿನಲ್ಲಿ ಲೀಲಾವತಿ ಅಮರ ಚಲನಚಿತ್ರ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇದೇ ಸಂದರ್ಭದಲ್ಲಿ ಮಾತಾಡಿದ ಮಾಜಿ ಸಚಿವ ವಿ.ಸೋಮಣ್ಣ, ಕನ್ನಡ ಚಲನಚಿತ್ರರಂಗ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳದಿದೆ. ನಾಡಿನ ಹೆಸರಾಂತ ಚಲನಚಿತ್ರ ನಟಿ ಲೀಲಾವತಿ ಅಮ್ಮನವರು ಪಂಚ ಭಾಷೆ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಕೃಷಿ, ಪರಿಸರ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು, ಪರಿಸರದ ನಡುವೆ ವಿಶ್ರಾಂತ ಜೀವನ ಸಾಗಿಸುತ್ತಿದ್ದರು, ಯಾರಿಗೂ ತೊಂದರೆ ಕೊಡದೇ ಸರಳ ಜೀವನ ನಡೆಸಿದರು ಎಂದರು.

ನಾನು ಸಚಿವನಾಗಿದ್ದ ಸಂದರ್ಭದಲ್ಲಿ ನನ್ನ ಕ್ಷೇತ್ರದಲ್ಲಿ ಕನ್ನಡ ಭಾಷೆಗೆ ಮತ್ತು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸೇವೆ ಸಲ್ಲಿಸಿದ ಮಹನೀಯರುಗಳ ಹೆಸರುಗಳನ್ನು ಎಲ್ಲ ಯೋಜನೆಗಳಿಗೆ ಹೆಸರು ಇಡಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸವಿನೆನಪಿನಲ್ಲಿ ಮಲ್ಟಿ ಸೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗಿದೆ. ಲೀಲಾವತಿ ಅವರ ಸಾಧನೆ ಕರ್ನಾಟಕ ಜನರ ಮನಸ್ಸಿನಲ್ಲಿ ಉಳಿದಿದೆ ಎಂದರು.

ಇದೇ ವೇಳೆ ಸಮಾಜ ಸೇವಕ ವಿಶ್ವನಾಥ ರಾವ್ ಅವರನ್ನು ಸನ್ಮಾನಿಸಲಾಯಿತು. ಖ್ಯಾತ ಹಿನ್ನೆಲೆ ಗಾಯಕಿ ಶಮಿತ ಮಲ್ನಾಡ್, ಚಂದನ್ ಶೆಟ್ಟಿ, ನವೀನ್ ಸಜ್ಜು ಅವರಿಂದ ಸಂಗೀತ ಸಂಜೆ ಆಯೋಜಿಸಲಾಗಿತ್ತು.

ಚಲನಚಿತ್ರ ನಟ ವಿನೋದ್ ರಾಜ್, ಚಲನಚಿತ್ರ ನಿರ್ಮಾಪಕರುಗಳಾದ ಚಿನ್ನೇಗೌಡ, ಭಾಮ ಹರೀಶ್, ವಾಣಿಜ್ಯ ಮಂಡಳಿ ಗೌರವ ಕಾರ್ಯದರ್ಶಿ ಭಾಮ ಗಿರೀಶ್, ಬಿಜೆಪಿ ಯುವ ನಾಯಕ ಡಾ.ಅರುಣ್ ಸೋಮಣ್ಣ, ಗೋವಿಂದರಾಜನಗರ ಮಂಡಲ ಬಿಜೆಪಿ ಅಧ್ಯಕ್ಷ ವಿಶ್ವನಾಥಗೌಡ ಮತ್ತು ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಗಂಗಭೈರಯ್ಯ, ರವೀಂದ್ರ, ಕೆ.ಉಮೇಶ್ ಶೆಟ್ಟಿ ಮತ್ತು ಬಿಜೆಪಿ ಮುಖಂಡ ಸಿ.ಎಂ.ರಾಜಪ್ಪ ಮೊದಲಾದವರು ಹಾಜರಿದ್ದರು.

Leave a Reply