ಚಿತ್ರದುರ್ಗ ಧಮ್ಮ ಕೇಂದ್ರ, ವಿಮುಕ್ತಿ ವಿದ್ಯಾ ಸಂಸ್ಥೆಯಲ್ಲಿ ಅದ್ದೂರಿ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

3 years ago

#lavish #IndependenceDay #celebration #Chitradurga #Dhamma #Centre #VimuktiVidyaInstitute

ಚಿತ್ರದುರ್ಗ: ದಿನಾಂಕ 15-8-2023 ರಂದು ಚಿತ್ರದುರ್ಗ ಹೊರ ವಲಯದಲ್ಲಿರುವ ವಿಮುಕ್ತಿ ವಿದ್ಯಾ ಸಂಸ್ಥೆ ಚಿತ್ರದುರ್ಗ, ಮತ್ತು ಕರ್ನಾಟಕ ಶಾಂತಿ ಸೌಹಾರ್ದ ವೇದಿಕೆ ಇವರ ಸಹಯೋಗದಲ್ಲಿ ಧಮ್ಮ ಸಾಂಸ್ಕೃತಿಕ ಕೇಂದ್ರದಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ತ್ರಿವರ್ಣ ಧ್ವಜಾರೋಹಣ ನೆರವೇರಿಸಿ, ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಅನ್ನಪೂರ್ಣ, ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 76 ತುಂಬಿ, 77ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿದ್ದೇವೆ, 1947 ಆಗಸ್ಟ್ 14 ಮಧ್ಯರಾತ್ರಿ ನಮಗೆ ಸ್ವಾತಂತ್ರ್ಯ ಸಿಕ್ತು, ಕೆಲವು ಹೋರಾಟಗಾರರು ಮಾತ್ರ ಮಧ್ಯರಾತ್ರಿ ಆಚರಣೆ ಮಾಡುತ್ತಾರೆ, ಎಲ್ಲರೂ ಸಹ ಸಾಮಾನ್ಯವಾಗಿ, ಆಗಸ್ಟ್ 15ರ ಬೆಳಿಗ್ಗೆ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೇವೆ, ನೆಮ್ಮದಿಯಾದ ಜೀವನ ಮಾಡಲಿಕ್ಕೆ, ಅವಕಾಶ ಕೊಟ್ಟಂತ, ಮಹಾತ್ಮ ಗಾಂಧೀಜಿ ಅವರಿಗೆ, ಜವಾಲಾಲ್ ನೆಹರು, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಬಾಬಾ ಸಾಹೇಬ್ ಅಂಬೇಡ್ಕರ್, ಇನ್ನು ಹಲವಾರು ಮಹಾ ನಾಯಕರಿಗೆ ನಮನಗಳನ್ನು ಅರ್ಪಿಸುತ್ತೇನೆ ಎಂದರು.

ಈ ಭಾರತ ದೇಶದ ಮೂಲ ನಿವಾಸಿಗಳಾದ ಅಲೆಮಾರಿ ಜನಾಂಗ, ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಜನಾಂಗದವರಿಗೆ ಈಗಲೂ ಸಹ ವಾಸ ಮಾಡಲಿಕ್ಕೆ, ಸರಿಯಾದ ಮನೆ, ಕುಡಿಯುವ ನೀರು, ನಿವೇಶನ, ಇನ್ನಿತರೆ ಮೂಲಭೂತ ಸೌಲಭ್ಯಗಳು ಇದುವರೆಗೂ ಸಮರ್ಪಕವಾಗಿ ಸಿಗದೇ ಇರುವುದು ಬೇಸರದ ಸಂಗತಿಯಾಗಿದೆ, ಇಂಥ ಸಂದರ್ಭದಲ್ಲಿ ಸಹ ತುಂಬ ಸಂಭ್ರಮದಿಂದ ಟೆಂಟ್ (ಗುಡಾರ)ದಲ್ಲಿ ವಾಸ ಮಾಡುವ ಅಲೆಮಾರಿ ಜನಗಳು ಈ ಸಂಭ್ರಮಾಚರಣೆಯಲ್ಲಿ ಭಾಗವಹಿಸಿರುವುದು ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.

ಸಂಸ್ಥೆ ನಿರ್ದೇಶಕ ಆರ್ ವಿಶ್ವಸಾಗರ್ ಮಾತನಾಡಿ, ಪರಕೀಯರ ಸ್ವಾಧೀನದಲ್ಲಿದ್ದ ಭಾರತ, ಬ್ರಿಟಿಷರು ಸುಮಾರು 250 ವರ್ಷಗಳ ಕಾಲ ಆಳ್ವಿಕೆ ಮಾಡಿದ ಪರಕೀಯರಿಂದ ಮುಕ್ತಿ ಪಡೆದು, ಶಾಂತಿ, ಸಹನೆ, ಉಪವಾಸ ಸತ್ಯಾಗ್ರಹ ಮೂಲಕ ಸ್ವಾತಂತ್ರ ತಂದುಕೊಟ್ಟ ಮಹಾತ್ಮ ಗಾಂಧೀಜಿ ಮತ್ತು ಅವರ ಅನುಯಾಯಿಗಳನ್ನು ನಾವೆಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕೆಂದು ತಿಳಿಸಿದರು.

ನಮ್ಮ ಮನೆಯಲ್ಲಿ ಹೆಂಡತಿ- ಮಕ್ಕಳಿಗೆ, ನಿಜವಾಗಲೂ ಸ್ವಾತಂತ್ರ್ಯ ಕೊಟ್ಟಿದ್ದಾಗ ಮಾತ್ರ ಈ ಒಂದು ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗುತ್ತದೆ. ಈ ಒಂದು ಸಂದರ್ಭದಲ್ಲಿ ಧಮ್ಮ ಕೇಂದ್ರದಲ್ಲಿ ಟಾಮಿ, ಟಾಬಿ, ಕರ್ಣ, ಕೋಳಿಗಳು, ಮರ ಗಿಡಗಳು, ನಮ್ಮ ಜೊತೆಯಲ್ಲಿದ್ದು ಸಂಭ್ರಮಾಚರಣೆಯಲ್ಲಿ ಭಾಗವಹಿಸಿರುವುದು ಅವಳಿಗೂ ಸಹ ಸ್ವಾತಂತ್ರ್ಯ ಕೊಟ್ಟಂತಾಗಿದೆ, ಅವುಗಳು ಸಹ ಸಮೃದ್ಧವಾಗಿ, ಸಂತೋಷವಾಗಿ, ಸ್ವತಂತ್ರವಾಗಿ ಬದುಕಲೆಂದು ಆಶಿಸುತ್ತೇನೆ ಎಂದು ತಿಳಿಸಿದರು.

ಇದೇ ದಿನ, ಕ್ಯಾಸಾಪುರ, ಮೇದೆಹಳ್ಳಿ, ಎಂ ಆರ್ ನಗರ, ಎಂಕೆ ಹಟ್ಟಿ, ಮಾರುತಿ ನಗರ, ತಮ್ಮಟಕಲ್ಲು, ಬೆಳಗಟ್ಟ ಇನ್ನಿತರ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸ್ವತಂತ್ರ ದಿನಾಚರಣೆಯಲ್ಲಿ ಭಾಗವಹಿಸಿ ಭಾಷಣ, ಪ್ರಬಂಧ, ಮತ್ತು ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ, ಬಹುಮಾನ ಸೇರಿದಂತೆ ಒಟ್ಟು 63 ಬಹುಮಾನಗಳನ್ನು ಮಕ್ಕಳಿಗೆ ವಿತರಿಸಲಾಯಿತು.

Leave a Reply