ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ (09.03.2024) ಲಡಾಯಿ ಪ್ರಕಾಶನ ಪ್ರಕಟಿಸಿರುವ ಮಹೇಂದ್ರ ಕುಮಾರ ಅವರ ಆತ್ಮಕಥನವಾದ ನವೀನ ಸೂರಿಂಜೆಯವರ ‘ನಡು ಬಗ್ಗಿಸದ ಎದೆಯ ದನಿ’ ಪುಸ್ತಕದ ಜನಾರ್ಪಣೆ ಕಾರ್ಯಕ್ರಮದಲ್ಲಿ ಗಾಂಧಿಭವನದ ಬಾಪೂಜಿ ಹಾಲ್ ನಲ್ಲಿ ಕುರ್ಚಿಗಳು ಭರ್ತಿಯಾಗಿ ಇಕ್ಕೆಲು ಬದಿ ಮತ್ತು ನಡುವಿನ ಸಾಲು ದ್ವಾರದ ಹಿಂದೆ.. ವೇದಿಕೆಯ ಅಕ್ಕಪಕ್ಕ ಹೀಗೆ ಜನ ಕಿಕ್ಕಿರಿದು ತುಂಬಿತ್ತು..
ದೂರದ ಊರುಗಳಿಂದ ಈ ಪುಸ್ತಕ ಬಿಡುಗಡೆಗೆ ಎಂದೇ ಗೆಳೆಯರು ಬಂದಿದ್ದರು.
ಹಾಗೆ ಜನ ಸೇರಲು ಮುಖ್ಯವಾದ ಸಂಗತಿಯೆಂದರೆ ಕೋಮುವಾದದ ಅನಾಹುತ ಕಂಡವರು ಅದನ್ನು ಬೇರು ಸಮೇತ ಕಿತ್ತೊಗೆಯಬೇಕು ಅನ್ನುವರರೆಲ್ಲ ಕೂಡಿದ್ದರು.
ಬಜರಂಗದಲ್ಲಿ ಇದ್ದು ಅದರ ವಿರಾಟ ರೂಪ ಕಂಡ ಮಹೇಂದ್ರಕುಮಾರ ರೂಪಾಂತರಗೊಂಡು ಅದರ ಮುಖಗಳನ್ನು ಬಿಚ್ಚಿಡುತ್ತಲೇ ಅದರ ವಿರುದ್ಧ ಹೋರಾಡುವ ಗೆಳೆಯರ ತಂಡ ಕಟ್ಟಿದ್ದು..
ಜತೆಗೆ ಇವತ್ತಿನ ಸಂದರ್ಭದಲ್ಲಿ ಅತ್ಯಂತ ದಿಟ್ಟತನದಿಂದ ಮಾತಾಡುವ ಸಂತೋಷ ಲಾಡ, ಪ್ರಕಾಶ ರೈ, ನಿಕೇತರಾಜ್ ಮೌರ್ಯ, ಸುಧೀಂದ್ರ ಮರೋಳ್ಳಿ, ಇದ್ದದ್ದು, ಮುನೀರ ಮತ್ತು ನವೀನ ಅವರ ಯುವಹೋರಾಟಗಾರರ ಜತೆ ನಿಲ್ಲುವ ಮನಸುಗಳು, ನಮ್ಮ ದ್ವನಿ ತಂಡದ ಸಹಭಾಗಿತ್ವ, ಇದರೊಂದಿಗೆ ಲಡಾಯಿ ಪ್ರಕಾಶನದ ಬಳಗವಾಗಿರುವ ಮನಸುಗಳು ಎಲ್ಲವೂ ಸೇರಿ ಗಾಂಧಿಭವನದಲ್ಲಿ ಇಂದು ರಾಶಿಜನ.
ಸಚಿವ ಸಂತೋಷ ಲಾಡ್ ತುಂಬಾ ಚೆನ್ನಾಗಿ ಮಾತಾಡಿದರು. ಸೈದ್ಧಾಂತಿಕ ಪರ್ಯಾಯದೊಂದಿಗೆ ಕೋಮುವಾದಿಗಳನ್ನು ಎದುರಿಸಬೇಕು. ಬಾಬಾಸಾಹೇಬ ಅಂಬೇಡ್ಕರ ಸಿದ್ಧಾಂತದ ಮಾರ್ಗವನ್ನು ಜತೆಗೆ ಇಟ್ಟುಕೊಂಡು ಕೋಮುವಾದಿಗಳನ್ನು ಎದುರುಗೊಳ್ಳಬೇಕು ಎಂದರು.
ಎಂದಿನಂತೆ ನಿಕೇತರಾಜ್ ಮೌರ್ಯ, ಸುಧೀರ ಕುಮಾರ ಮರೊಳ್ಳಿ,. ಹಿರಿಯ ವಕೀಲ ಬಾಲನ್, ಯುವ ಶಾಸಕಿ ನಯನಾ ಮೊಟಮ್ಮ ಚೆನ್ನಾಗಿ ಮಾತಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಕಾಶ ರೈ ಅವರ ಮಾತು ಕೂಡ ಅಷ್ಟೇ ಅದ್ಭುತ.
ಬೋಳವಾರ ಸರ್, ದಿನೇಶ್ ಅಮೀನ ಮಟ್ಟು, ಮಾವಳ್ಳಿ ಶಂಕರ, ಎಂ.ಎಸ್ ಆಶಾದೇವಿ, ಆರ್.ಸುನಂದಮ್ಮ, ಸನತಕುಮಾರ ಬೆಳಗಲಿ, ಸಿರಿಮನೆ ನಾಗರಾಜ , ಸಿ.ಎಸ್. ದ್ವಾರಕನಾಥ, ಕೃಷ್ಣಮೂರ್ತಿ ಶ್ರೀನಾಥ, ಎಸ್. ಸತ್ಯ, ಹರೀಶಕುಮಾರ, ಮಂಜುನಾಥ ಅದ್ದೆ, ಇರ್ಫಾನ್ ಮುದಗಲ್ಲ,ಬಿ. ಕೆ. ಮಂಜುಳಾದೇವಿ, ಯಾದಗಿರಿಯಿಂದ ಬಂದ ಡಿ. ಎಸ್ ನಾಯಕ, ಬೆಳಗಾವಿಯಿಂದ ಅಳಗುಂಡಿ ಅಂದಾನಯ್ಯ, ಸುರೇಂದ್ರರಾವ್, ವಿಮಲಾ, ನಜ್ಮಾ ಬಳಗ, ಶಶಿಧರ ಬಾರಿಘಾಟ್, ಕೃಷ್ಮೇಗೌಡ ಮೊದಲಾದರು ನೆನಪಿಕೊಳ್ಳಲಾಗದಷ್ಟು ಎಷ್ಟೊಂದು ಹೆಸರುಗಳು ಸೇರಿದ್ದು ಖುಷಿಕೊಟ್ಟಿತು. ತುಂಬಿದ ಜನಗಳಲ್ಲಿ ಲಡಾಯಿ ಪ್ರಕಾಶನದ ಪುಸ್ತಕಗಳ ಮೇಲೆ ಮತ್ತದೇ ಪ್ರೀತಿ.
ಕೊನೆ ಮಾತು: ಶೀಘ್ರದಲ್ಲಿ ನಡು ಬಗ್ಗಿಸದ ಎದೆಯ ದನಿ ಎರಡನೇ ಮುದ್ರಣ ಕಾಣಲಿದೆ..
ಪುಸ್ತಕ ಬಿಡುಗಡೆಯ ಸಂದರ್ಭದಲ್ಲಿ ಜತೆಯಾದ ಎಲ್ಲ ಮನಸುಗಳಿಗೆ ಶರಣು ಶರಣಾರ್ಥಿಗಳು.
– ಲಡಾಯಿ ಬಸೂ
***
ಪುಸ್ತಕ ಇನ್ನೂ ಓದದಿದ್ದರೆ ಓದಿ
ಬೆಲೆ:200 ರೂ
20% ರಿಯಾಯಿತಿ
160+30 (ಅಂಚೆವೆಚ್ಚ) =190/- ರೂ
ಲಡಾಯಿ ಪ್ರಕಾಶನ
9480286844




