ಬೆಂಗಳೂರು: ಪರಿಸರ ತಜ್ಞ ಡಾ.ಡಿ.ಪರಮೇಶ್ ನಾಯಕ್ ರಚಿಸಿರುವ, “ಹಸಿರು ಜಾಗೃತಿ- ಭಾರತದಲ್ಲಿ ಪರಿಸರ ಮಾಲಿನ್ಯ ಮತ್ತು ತ್ಯಾಜ್ಯನಿರ್ವಹಣೆ ನಿಯಂತ್ರಿಸಲು ಸಾರ್ವಜನಿಕರ ಭಾಗವಹಿಸುವಿಕೆಗೆ ಸಜ್ಜುಗೊಳಿಸಿ ವರ್ತನೆಯ ಬದಲಾವಣೆ ತರಲು ಹಸಿರು ಆಂದೋಲನ” ಪುಸ್ತಕವನ್ನು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾನ್ಯ ಸಚಿವ ದಿನೇಶ್ ಗುಂಡುರಾವ್ ಅವರು ಬಿಡುಗಡೆ ಮಾಡಿದರು. ಹಿರಿಯ ರಂಗತಜ್ಞ ಮತ್ತು ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಅದ್ಯಕ್ಷ ಡಾ.ಎ.ಅರ್. ಗೋವಿಂದ ಸ್ವಾಮಿ ಅಧ್ಯಕ್ಷತೆಯನ್ನು ವಹಿಸಿದ್ದರು, ಪ್ರೊ. ಎಸ್. ಎಂ. ಜಯಕರ, ಮಾನ್ಯ ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ, ಪ್ರೊ. ಎಂ.ಎಸ್.ರೆಡ್ಡಿ, ಮಲ್ಲಪ್ಪ ಎಸ್ ಅಂಗಡಿ ಅರ್. ಶ್ರೀಧರ, ಶಿವಕುಮಾರ್ ಬೆಳ್ಳಿತಟ್ಟೆ , ಧರಣೆಶ ಬೂಕನಕೆರೆ ಹಾಗೂ ಇತರರು ಉಪಸ್ಥಿತರಿದ್ದರು.
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
- ನಮ್ಮ ಪ್ರತಿಭೆಗಳು ದೆಹಲಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ಸಂತಸದ ವಿಷಯ: ಕೆ.ಸುಧಾಕರ್
ಹಸಿರು ಜಾಗೃತಿ ಕೃತಿಯನ್ನು ಲೋಕಾರ್ಷಣೆ ಮಾಡಿ ಮಾತನಾಡಿದ ದಿನೇಶ್ ಗುಂಡುರಾವ್, ಕರ್ನಾಟಕ ಸರ್ಕಾರದ ವಿವಧ ಯೋಜನೆಗಳಡಿ ಪರಿಸರ ಅರಿವು, ತ್ಯಾಜ್ಯನಿರ್ವಹಣೆ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಲಿನ್ಯಮತ್ತು ತ್ಯಾಜ್ಯ ನಿರ್ವಹಿಸಲು ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಬಗ್ಗೆ ಇನ್ಸಿನಿರೇಷನ್ ಘಟಕಗಳನ್ನು ಎಲ್ಲಾ ಆಸ್ಪತ್ರೆ ಮತ್ತು ವೈದ್ಯಕೀಯ ಆಸ್ಪತ್ರೆಗಲಲ್ಲಿ ಸ್ತಾಪಿಸಲಾಗಿರುತ್ತದೆ. ಸರ್ಕಾರವು ಪರಿಸರ ಮತ್ತು ಅರನ್ಯ ಇಲಾಖೆ ಮುಖಾಂತರವು ಸಹ ಹಲವಾರು ಯೋಜನೆಗಳನ್ನು ಕಾರ್ಯಗೊಳಿಸುತ್ತಾ ಇದ್ದು ಪೆಇಸರ ಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆ ಬಗ್ಗೆ ಪ್ರತಿಯೊಬ್ಬ ನಾಗರೀಕರು ಸಹ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳೊಂಧಗೆ ಕೈಜೋಡಿಸಿ ಉತ್ತಮ ಪರಿಸರವನ್ನು ಸ್ಥಾಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ ಎಂದರು.
ನಮ್ಮ ದೇಶದಲ್ಲಿ ಕೈಗಾರಿಕೆಗಳ ಬೆಳವಣಿಗೆ ಹೆಚ್ಚಾಗುತ್ತಾ ಇರುವುದರಿಂದ ಹಾಗೂ ಎಲೆಕ್ಟ್ರಾನಿಕ್, ಉಪಕರಣಗಳನ್ನು ಹೆಚ್ಚು ಬಳಸುವುದರಿಂದ ಅವುಗಳಿಂದ ಉಂಟಾಗುವ ತ್ಯಾಜ್ಯ ಹೆಚ್ಚು ದಿಣೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ನ್ಮಮ ಹವಾಮನದಲ್ಲೂ ಸಹ ಹೆಚ್ಚು ಮಾಲಿನ್ಯ ತುಂಬಿದ್ದು, ನಮ್ಮ ಗಾಳಿ ನೀರು ಮತ್ತು ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತಿರುವುದು ನಮ್ಮ ನಿಮ್ಮೆಲ್ಲರಿಗೂ ಗೊತ್ತಿರುವ ವಿಷಯ. ಪರಿಸರದ ಬಗ್ಗೆ ಜಾಗೃತಿ ಸಾರುವ ಕೃತಿ ವೈಜ್ಞಾನಿಕ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಅನಿವಾರ್ಯವಾಗಿ ಪರಿಸರ ನಾಶ ಮಾಡುತ್ತಿದೇವೆ. ಉದಾ: ಇಂದನಕ್ಕಾಗಿ ಕಲ್ಲಿದ್ದಲು ಉರಿಸುವ ಬದಲು ಸೋಲಾರ್ ಬಳಕೆ ಮಾಡುವುದು. ಕುಂಬಮೇಳ ಮಾಲಿನ್ಯನದ ಎಂದು ತಿಳಿದು ಸ್ನಾನ ಮಾಡುವಾಗ ಜಾಗೃತಿ ಅಗತ್ಯ. ಸಾರ್ಜನಿಕರ ಸಹಬಾಗಿತ್ವದಿಂದ ಪರಿಸರ ಉತ್ತಮ ಪಡಿಸಿ ಯುವಕರಿಗೆ ನಮ್ಮ ಮಕ್ಕಳಿಗೆ ಉತ್ತಮ ಪರಿಸರ ಕೊಡೋಣ ಎಂದು ಕರೆ ನೀಡಿದರು.
ಈ ದಿಸೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿಯಾಗಿರುವುದರಿಂದ ಈ ನಿಟ್ಟಿನಲ್ಲಿ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ನಗರ ಪಾಲಿಕೆ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳೊಂದಿಗೆ ಕೈಜೊಡಿಸಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ. ಬೇರೆ ಬೇರೆ ದೇಶಗಳಲ್ಲಿ ದಿನನಿತ್ಯ ತ್ಯಾಜ್ಯದಿದ ವಿದ್ಯುತ್ ಶಕ್ತಿ ಉತ್ಪಾದನೆ ಮಾಡುತ್ತಿದ್ದು ಅದೇ ಮಾದರಿಯಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಇತರೆ ನಗರಗಳ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯದ ಬಗ್ಗೆ ಹೊಸ ಯೋಜನೆಯನ್ನು ರೂಪಿಸುವುದು ಸರ್ಕಾರದ ಆದ್ಯತೆಯಾಗಿರುತ್ತದೆ ಎಂದರು.
ಡಾ. ಡಿ. ಪರಮೇಶ್ವರ ನಾಯಕ್ ರವರು ಬರೆದಿರುವ ಈ ಪುಸ್ತಕದಲ್ಲಿ ಭಾರತದಲ್ಲಿ ನ್ಮಮ ಪರಿಸರ ಮಾಲಿನ್ಯ ನಿಯಂತ್ರಿಸಲು ಸಾರ್ವಾಜನಿಕರಲ್ಲಿ ಹೇಗೆ ಜಾಗೃತಿ ಮೂಡಿಸಬೇಕು ಮತ್ತು ಸರ್ಕಾರದ ಪಾತ್ರ ಇತ್ಯಾದಿಗಳ ಬಗ್ಗೆ ಸವಿವರವಾಗಿ ಪುಸ್ತಕದ ರೂಪದಲ್ಲಿ ಹೊರತಂದಿರುವುದರಿಂದ ನಾನು ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಈ ಪುಸ್ತಕದ ಲೇಖಕರಾದ ಡಾ. ಪರಮೇಶ್ವರ ನಾಯಕ್ ಅವರನ್ನು ಅಭಿನಂದಿಸುತ್ತೇನೆ ಎಂದರು.
ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ ಡಾ. ಎ.ಆರ್.ಗೋವಿಂದಸ್ವಾಮಿ ಮಾತನಾಡಿ, ಪ್ರಸ್ತುತ ಜ್ವಲಂತ ಸಮಸ್ಯೆ ಘನತ್ಯಾಜ್ಯ ವಿಲೇವಾರಿ ಮತ್ತು ವಾಯುಮಾಲಿನ್ಯ ತ್ಯಾಜ್ಯ ನಿರ್ವಹಣೆ ಯಲ್ಲಿ ಸಾರ್ವಜನಿಕರ ವರ್ತನೆ ಬದಲಾವಣೆ ಅಗತ್ಯ. ಸಾರ್ವಜನಿಕರ ವರ್ತನೆ ಬದಲಾಗದಿದ್ದಲ್ಲಿ ಮುಂದಿನ ಪೀಳಿಗೆಗೆ ಮಾರಕವಾಗಿ ಪರಿಣಮಿಸುತ್ತದೆ ಎಂದು ಹೇಳಿದರು.
ಪರಿಸರ ತಜ್ಞ ಡಾ. ಡಿ. ಪರಮೇಶ ನಾಯಕ್ ಅವರ ಹಸಿರು ಜಾಗೃತಿ ಭಾರತದಲ್ಲಿ ಸಾರ್ವಜನಿಕರ ನಡವಳಿಕೆಯು ತಾಜ್ಯ ನಿರ್ವಹಣೆಯಲ್ಲಿ ಹೀಗೆ ಮುಂದುವರಿದರೆ ಭವಿಷ್ಯದ ಯುವ ಪೀಳಿಗೆಯ ಅಕಾಡೆಮಿ ಭವಿಷ್ಯ ನಾಶವಾಗಲಿದೆ ಎಂಬುದನ್ನು ಬಿಂಬಿಸಿದೆ. ಆದ್ದರಿಂದ ತ್ಯಾಜ್ಯ ನಿರ್ವಹಣೆ ಯಲ್ಲಿ ಸಾರ್ವಜನಿಕರ ವರ್ತನೆಯಲ್ಲಿ ಬದಲಾವಣೆ ಅಗತ್ಯವಾಗಿದೆ ಎಂದರು
ಇದಕ್ಕೆ ಸಂಬಂಧಪಟ್ಟ ಇಲಾಖೆಗಳು ತುರ್ತು ಕ್ರಮ ಮತ್ತು ಕಾಳಜಿ ವಹಿಸುವುದು ಅಗತ್ಯ ಹಾಗೂ ಎಲ್ಲಾ ಪಠ್ಯ ಕ್ರಮದಲ್ಲಿ ಅಳವಡಿಸಿ ತ್ಯಾಜ್ಯ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳು ಕಲಿತು ಪಾಲಿಸುವಂತಗಬೇಕು. ತ್ಯಾಜ್ಯ ನಿರ್ವಹಣೆ ಜ್ವಲಂತ ಸಮಸ್ಯೆ ಆಗಿದ್ದು, ಕ್ರಮವಾಗಿ, ಶಿಸ್ತುಭದ್ದವಾಗಿ ಸಾರ್ವಜನಿಕರು ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಘನ ತ್ಯಾಜ್ಯ ನಿರ್ವಹಣೆ ಬಗ್ಗೆ ಗಂಭೀರವಾಗಿ, ಶಿಸ್ತುಭದ್ದವಾಗಿ ಕಾಳಜಿವಹಿಸುತ್ತಾರೆ ಹಾಗೂ ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗಳಿಗೆ ಗೌರವ ನೀಡುವ ಹಾಗೂ ಸಹಕಾರದಲ್ಲಿ ಸುಧಾರಣೆ ಇದೆ. ಮತ್ತು ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗಳಿಗೆ ಮತ್ತು ಸಫಾಯಿ ಕರ್ಮಚಾರಿಗಳಿಗೆ ಉನ್ನತವಾದ, ಅರ್ಥಿಕ, ಸಾಮಾಜಿಕ ಭದ್ರತೆ ಮತ್ತು ಸ್ಥಾನಮಾನಗಳು ಕಲ್ಪಿಸಲಾಗಿದೆ ಪೂರಕ ಸೌಲಭ್ಯಗಳನ್ನು ಸಹ ಒದಗಿಸಲಾಗಿದೆ ಹಾಗಾಗಿ ತ್ಯಾಜ್ಯ ನಿರ್ವಹಣೆಯಲ್ಲಿ ವಿದೇಶಿಯರು ನಮಗಿಂತಲೂ ಯಶಸ್ವಿ ಆಗಿದ್ದಾರೆ ಎಂದರು.
ಭಾರತದಲ್ಲಿರುವ ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗೆ ಹಾಗೂ ಸಪಾಯಿ ಕರ್ಮಚಾರಿಗಳಿಗೆ ಮೂರನೆಯ ದರ್ಜೆಯ ಸಿಬ್ಬಂದಿಯಾಗಿ ಕಾಣುತ್ತೇವೆ ಕನಿಷ್ಟ ಗೌರವವನ್ನು ಸಹ ನಾವು ಕೊಡುವುದಿಲ್ಲ. ಪ್ರತಿ ತಿಂಗಳು ವೇತನಕ್ಕಾಗಿ ಹೊರಾಡುವ ಸ್ಥಿತಿ ಇದೆ. ಇನ್ನು ಸಾರ್ವಜನಿಕರು ತಮ್ಮ ಮನೆಯ ಕಸವನ್ನು ವೈಜ್ಞಾನಿಕವಾಗಿ, ಕ್ರಮಭದ್ದವಾಗಿ ವಿಂಗಡಿಸದೆ ತಮಗೆ ಸಂಬಂದವಿಲ್ಲ ಎಂಬಂತೆ ಕಸವನ್ನು ಬಿದಿಯಲ್ಲೇ ಸುರಿಯುತ್ತಾರೆ ಇಂತಹ ವರ್ತನೆಯನ್ನು ಬದಲಾವಣೆ ಮಾಡಿಕೊಳ್ಳದಿದ್ದರೆ ನೇರವಾಗಿ ನಮ್ಮ ಮಕ್ಕಳ ಭವಿಷ್ಯವನ್ನು ಅಂಧಕಾರಕ್ಕೆ ತಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಪರಿಸರ ತಜ್ಞ ಡಾ. ಡಿ. ಪರಮೇಶ ನಾಯಕ್ ಅತ್ಯಂತ ಕಾಳಜಿ ವಹಿಸಿ ತಮ್ಮ ಸ್ವಂತ ಕರ್ಚಿನಲ್ಲಿ ಸಂಶೋಧನೆ ಕೈಗೊಂಡು. “ಗ್ರೀನ್ ಅವೇಕಿಂಗ್ ಮೊಬಲೈಜಿಂಗ್ ಪಬ್ಲಿಕ್ ವಾರ್ ಬಿಹ್ಹಾವಿರಲ್ ಛೇಂಜಸ್ ಇನ್ ಪಲೂಷನ್ ಕಂಟ್ರೋಲ್ ಆಂಡ್ ವೆಸ್ಟ್ ಮ್ಯಾನೆಜ್ ಮೇಂಟ್ ಇನ್ ಇಂಡಿಯಾ ಕೃತಿ ರಚಿಸಿದ್ದಾರೆ. ಕೃತಿಗೆ ಇಂದು ಅತ್ಯಂತ ಮಹತ್ವ ಇದೆ. ಕಸವಿಂಗಡನೆ ಯಲ್ಲಿ ಸಾರ್ವಜನಿಕರ ವರ್ತನೆ, ನಡವಳಿಕೆ ಯಲ್ಲಿ ಪರಿವರ್ತನೆ ತರುವಂಥಹ ಸಾಮಾಜಿಕ ಜವಾಬ್ದಾರಿಯಿಂದ ಪರಿಸರ ಸಂರಕ್ಷಣೆಗಾಗಿ ಸೇವಕನಂತೆ ತಾವು ರಚಿಸಿರುವ ಕೃತಿಯನ್ನು ““ಹಸಿರು ಜಾಗೃತಿ- ಭಾರತದಲ್ಲಿ ಪರಿಸರ ಮಾಲಿನ್ಯ ಮತ್ತು ತ್ಯಾಜ್ಯನಿರ್ವಹಣೆ ನಿಯಂತ್ರಿಸಲು ಸಾರ್ವಜನಿಕರ ಭಾಗವಹಿಸುವಿಕೆಗೆ ಸಜ್ಜುಗೊಳಿಸಿ ವರ್ತನೆಯ ಬದಲಾವಣೆ ತರಲು ಹಸಿರು ಆಂದೋಲನ” ಎಂಬ ದೊಡ್ಡ ಹೆಸರು ಕೊಟ್ಟಿದ್ದಾರೆ ಎಂದರು.
ಈ ಕೃತಿಯನ್ನು (“GREEN AWAKENING: MOBILIZING PUBLIC PARTICIPATION FOR BEHAVIORAL CHANGES IN POLLUTION CONTROL & WASTE MANAGEMENT IN INDIA”). ಎಲ್ಲರಿಗೂ ಉಚಿತವಾಗಿ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಜಾಗೃತಿಗಾಗಿ ಮತ್ತು ತ್ಯಾಜ್ಯನಿರ್ವಹಣೆ ಬಗ್ಗೆ ಒಂದು ಪ್ರಮಾಣವನ್ನು ಹೀಗೆ ತೆಗೆದುಕೊಳೋಣ ಇದನ್ನು ಪ್ರಸರಿಸೋಣ ಇದು ನನ್ನ ವ್ಯಯಕ್ತಿಕ ಮನವಿ. ಪರಿಸರ ಮಾಲಿನ್ಯ ವಸ್ತುವನ್ನು ನಿರ್ಬಂದಿಸುತ್ತೇನೆ. ಹಾನಿಕಾರಕ ವಸ್ತುಗಳ ಖರೀದಿಯನ್ನು ಕಡಿಮೆಮಾಡುತ್ತೇನೆ. ಅನಿವಾರ್ಯ ತಾಜ್ಯವನ್ನು ಮರುಬಳಕೆಗೆ ಮತ್ತು ಮರುಪರ್ಯಾಯ ಉದ್ದೇಶಕ್ಕೆ ಬಳಸುತ್ತೇನೆ. ತ್ಯಾಜ್ಯ ನಿರ್ವಹಣೆ ಸಿಬ್ಬಂದಿಗಳಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗೆ ಗೌರವದಿಂದ ಕಾಣುತ್ತೇನೆ. ತ್ಯಾಜ್ಯ ನಿರ್ವಹಣೆಯಲ್ಲಿ ಮುಂದಿನಪಿಳಿಗೆಗಾಗಿ ಅತ್ಮಸಾಕ್ಷಿಯಿಂದ ಸ್ವಯಂ ಪ್ರೇರಣೆಯಿಂದ ನನ್ನನ್ನು ನಾನು ನನ್ನ ವರ್ತನೆಯಲ್ಲಿ ಪರಿವರ್ತನೆಯನ್ನು ಮಾಡಿಕೊಳ್ಳುತ್ತೇನೆ. ತ್ಯಾಜ್ಯ ಸೇನಾನಿ (waste warriors) ತ್ಯಾಜ್ಯ ನಿರ್ವಹಣಾ ಸಿಬ್ಬಂದಿಗಳಿಗೆ ಹಾಗೂ ಸಫಾಯಿ ಕರ್ಮಚಾರಿಗಳಿಗಳನ್ನು ಗೌರವಿಸುತ್ತೇನೆ ಎಂದರು.
ಪರಿಸರ ತಜ್ಞ ಡಾ. ಡಿ. ಪರಮೇಶ ನಾಯಕ್ ಕೃತಿಯಲ್ಲಿ ನನಗೆ ಅತ್ಯಂತ ಇಷ್ಟವಾದ ಅಂಶವೆಂದರೆ: ತ್ಯಾಜ್ಯ ವಿಲೇವಾರಿ ಮತ್ತು ವಿಂಗಡಣೆಗೆ ವರ್ತನೆಯ ಬದಲಾವಣೆಗೆ ಶಾಲಾ ಕಾಲೇಜುಗಳಲ್ಲಿ ಪಠ್ಯವಾಗಬೇಕೆಂದು ಸುಚಿಸಿರುವುದು. ಇದು ತಳಹಂತದಿಂದಲೆ ಒಂದು ಚಳವಳಿ ರೂಪದಲ್ಲಿ ಶಿಕ್ಷಕರು, ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು, ಸರ್ಕಾರಗಳು ಮತ್ತು ನಿರ್ವಹಣಾ ಇಲಾಖೆಗಳು ಆಂದೋಲನವನ್ನು ರೂಪಿಸಬೇಕೆಂದು ಸುಚಿಸಿರುವುದು. ಪ್ರಕೃತಿ ದತ್ತವಾಗಿರುವ ಅತ್ಯುತ್ತಮವಾದ ಪರಿಸರವನ್ನು ಅದು ಇರುವ ಹಾಗೆಯೆ ಕಾಪಾಡಿಕೊಂಡು ಅಭಿವೃದ್ಧಿ ಪಡಿಸಿ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕೆಂದು ಕೃತಿಯಲ್ಲಿ ಲೇಖಕರು ತಿಳಿಸಿರುತ್ತಾರೆ. ತಾಜ್ಯ ವಿಲೇವಾರಿ ಮತ್ತು ವಿಂಗಡಣೆಗೆ ತಪ್ಪಿತಸ್ಥರಿಗೆ ಕಾನೂನು ಶಿಕ್ಷೆಗೆ ಒಳಪಡಿಸಲು ಸೂಕ್ತವಾದ ಕಾನೂನು ರೂಪಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ತಿಳಿಸಿರುವುದು ಅಗತ್ಯ ಸಲಹೆಯಾಗಿದೆ ಎಂದರು.
ಸಾರ್ವಜನಿಕರ ಸಹಭಾಗಿತ್ವದಿಂದ ಮಾತ್ರ ಈ ಕಾರ್ಯ ಯಶಸ್ವಿ ಯಾಗುತ್ತದೆ ವಿನಃ ಕೇವಲ ಸರ್ಕಾರಿ ಇಲಾಖೆಗಳು, ಸರ್ಕಾರದಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ ಹಾಗಾಗಿ “ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಭಾಗಿತ್ವ ಒಂದೇ ಭರವಸೆ” ಯಾಗಿದೆ. ಬಡವರು ಮೂಲಭೂತ ಸೌಕರ್ಯದ ಹಾಗೂ ತಿಳುವಳಿಕೆಯ ಕೊರತೆಯಿಂದ ಪ್ಲಾಸ್ಟಿಕನ್ನು ಉರುವಲಾಗಿ (ಸೌದೆಯಾಗಿ) ಬಳಸುತ್ತಿದ್ದಾರೆ. ಇವರಿಗೆ ಕಸ ವಿಲೇವಾರಿ ಮಾಡುವ ವಿಧಾನದ ತಿಳುವಳಿಕೆ ಇಲ್ಲ ಎಂದರು.
ಅಭಿವೃದ್ಧಿ ಹೊಂದಿದ ವಿದ್ಯಾವಂತರು ಸಹ ತಿಳುವಳಿಕೆ ಯಿಲ್ಲದ ಬಡವರು ಹಾಕಿದ ಕಸದ ಜಾಗದಲ್ಲಿಯೇ ಇವರು ಕಸ ಸಹ ಸುರಿಯುತ್ತಾರೆ. ವೈಜ್ಞಾನಿಕ ವಾಗಿ ಕಸವಿಲೇವಾರಿ ಮಾಡಲು ಆಲೋಚನೆಗಳನ್ನು ಮಾಡುತ್ತಿಲ್ಲ ತಮ್ಮ ವರ್ತನೆಯಲ್ಲಿ ಸುಧಾರಣೆಯಾಗದಿರುವುದೇ ದೊಡ್ಡಸಮಸ್ಯೆ ಆಗಿದೆ ನಮ್ಮ ದೇಶದಲ್ಲಿ. ಸಿಲಿಕಾನ್ ಸಿಟಿ, ಗ್ರೀನ್ ಸಿಟಿ ಬೆಂಗಳೂರಿನ ಪರಿಸರದ ಮೇಲೆ ವಿಶ್ವದಾದ್ಯಂತ ಬೃಹತ್ ಅರ್ಥಿಕ ಹೂಡಿಕೆ ಅವಲಂಬಿಸಿದೆ ಎಂದರು.
ತ್ಯಾಜ್ಯ ನಿರ್ವಹಣೆಗೆ, ಮೂಲಭೂತ ಸೌಕರ್ಯಗಳ ಕೊರತೆ, ಸಿಬ್ಬಂದಿ ಕೊರತೆ, ಮರುಬಳಕೆ, ತಂತ್ರಜ್ಞಾನದ ಕೊರತೆ, ತಾಜ್ಯ ಸಾಗಣೆ ಕೊರತೆ, ತಾಜ್ಯ ಲ್ಯಾಂಡ್ ಫಿಲ್ ಕೊರತೆ ಮುಂತಾದ ಅಂಶಗಳ ಮೇಲೆ ಬೆಳಕು ಚೆಲ್ಲಿ ಜಾಗೃತಿ ಮೂಡಿಸುವ ಕೃತಿಯಾಗಿಯು ಸಮಾಜಕ್ಕೆ ಪ್ರಸ್ತುತ ಮತ್ತು ಭವಿಷ್ಯದ ತ್ಯಾಜ್ಯ ನಿರ್ವಹಣೆಗೆ ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಕೃತಿಯ ಲೇಖಕರಾದ ಪರಿಸರ ತಜ್ಞ ಡಾ. ಡಿ. ಪರಮೇಶ ನಾಯಕ್ ಸಮಾಜಕ್ಕೆ ಸವಾಲನ್ನು ಒಡ್ಡಿರುವುದು ಅತ್ಯಂತ ಶ್ಲಾಘನೀಯ ಮತ್ತು ಅಭಿನಂದನಾರ್ಹ ಹಾಗೂ ಸಾಮಾಜಿಕ ಬದ್ಧತೆಯ ಕಾರ್ಯವಾಗಿದೆ ಎಂದರು
ಪ್ರೊ. ಎಸ್. ಎಂ. ಜಯಕರ ಮಾತನಾಡಿ, ನಾನು ಈ ಸಂಜೆ “ಹಸಿರು ಜಾಗೃತಿ: ಭಾರತದಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ವರ್ತನಾತ್ಮಕ ಬದಲಾವಣೆಗಳಿಗಾಗಿ ಸಾರ್ವಜನಿಕ ಭಾಗವಹಿಸುವಿಕೆ” ಎಂಬ ಪ್ರಮುಖ ವಿಷಯದ ಕುರಿತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುತ್ತಿರುವುದಕ್ಕೆ ಅತ್ಯಂತ ಸಂತೋಷವಾಗಿದೆ ಎಂದರು.
ನೀವು ಎಲ್ಲರೂ ತಿಳಿದಿರುವಂತೆ, ನಾವು ಜೀವಿಸುವ ಪರಿಸರ ಅಥವಾ ಪರಿಸರ ವ್ಯವಸ್ಥೆ ಗಂಭೀರ ಸ್ಥಿತಿಯಲ್ಲಿ ಇದೆ, ಅಂದರೆ ನಮ್ಮ ನೀರು, ಮಣ್ಣು ಮತ್ತು ವಾತಾವರಣದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾಲಿನ್ಯಗಳು ಮತ್ತು ತ್ಯಾಜ್ಯ ಪದಾರ್ಥಗಳು ಸೇರುತ್ತಿವೆ. ಇವುಗಳನ್ನು ತಕ್ಷಣವೇ ಶುದ್ಧೀಕರಿಸುವ ಅಗತ್ಯವಿದೆ ಎಂದರು.
ಈ ಪರಿಸರ ಮಾಲಿನ್ಯಗಳನ್ನು ನಿವಾರಿಸುವುದರಿಂದ ನಾವು ಶುದ್ಧ ಕುಡಿಯುವ ನೀರು, ಸ್ವಚ್ಛವಾದ ಗಾಳಿ, ಹಾಗೂ ನಮ್ಮ ತರಕಾರಿಗಳು, ಹಣ್ಣುಗಳು, ಪಶುಮೇವು ಮತ್ತು ಇತರ ಪ್ರಾಣಿಗಳಿಗೆ ಬೇಕಾದ ಸಾವಯವ ಮಣ್ಣನ್ನು ಪಡೆಯಲು ಸಾಧ್ಯವಾಗುತ್ತದೆ. ನಾನು ಇಲ್ಲಿ ಅತ್ಯಂತ ಸಂತೋಷದಿಂದ ಉಲ್ಲೇಖಿಸಲು ಇಚ್ಛಿಸುತ್ತೇನೆ̤ ಈ ದಿಶೆಯಲ್ಲಿ ಪ್ರಸಿದ್ಧ ಪರಿಸರ ತಜ್ಞರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಡಾ. ಡಿ. ಪರಮೇಶ್ ನಾಯಕ್ ಅವರು ಪರಿಸರ ಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಪರಿಣತಿ ಹೊಂದಿದ್ದು, ಮಾನವ ಸಮಾಜ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಸರ ಸಂಬಂಧಿತ ವಿಷಯಗಳ ಕುರಿತ ಸಂಪೂರ್ಣ ಮಾಹಿತಿಯನ್ನು ಒಳಗೊಂಡಂತೆ ಪಸ್ತಕದ ರೂಪದಲ್ಲಿ ಒಂದು ಸಂಗ್ರಹವನ್ನು ಪ್ರಕಟಿಸಿದ್ದಾರೆ ಎಂದರು.
ಶಾಲೆಗಳು ಮತ್ತು ಕಾಲೇಜುಗಳನ್ನು ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸುವ ಅಗತ್ಯತೆ ಬಹಳ ಹೆಚ್ಚು ಇದೆ. ನಾನು ವೈಯಕ್ತಿಕವಾಗಿ ಅನಿಸುವುದೇನೆಂದರೆ, ಸ್ವಚ್ಛ ಮತ್ತು ಹಸಿರು ಪರಿಸರದತ್ತ ಒಲವು ಬೆಳೆಸುವ ಉದ್ದೇಶದಿಂದ ಇದನ್ನು ದೇಶದ ಎಲ್ಲ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕಾಗಿದೆ ಎಂದರು.




