ಝೀಕಾ ವೈರಸ್ ಬಗ್ಗೆ ಜಾಗೃತಿ‌‌ ಮೂಡಿಸಲು ಲಕ್ಷ್ಮೀಬಾಯಿ ಎಸ್ ಕಂಬಾರ ಒತ್ತಾಯ

3 years ago

ಯಾದಗಿರಿ: ಝೀಕಾ ವೈರಸ್ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಮತ್ತು ಜನರಲ್ಲಿ‌ ಜಾಗೃತಿ‌‌ ಮೂಡಿಸಬೇಕು ಎಂದು ಕೆಂಭಾವಿ ಪುರಸಭೆ ಸದಸ್ಯೆ ಲಕ್ಷ್ಮೀಬಾಯಿ ಎಸ್. ಕಂಬಾರ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಾಧಿಕಾರಿಗಳಿಗೆ ಮನವಿ‌ ಪತ್ರ ಸಲ್ಲಿಸಿದ ಅವರು, ರಾಜ್ಯದಲ್ಲಿ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಕೋಳಿಕ್ಯಾಂಪ್ ನಲ್ಲಿ ಐದು ವರ್ಷದ ಬಾಲಕನಲ್ಲಿ ಈ ರೋಗ ಲಕ್ಷಣ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಮಾರಕ‌ ಕಾಯಿಲೆಯ ಬಗ್ಗೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕು ಮತ್ತು ಪುರಸಭೆ ವ್ಯಾಪ್ತಿಯ ಎಲ್ಲ ವಾರ್ಡುಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ‌ ಮಾಡಿದರು.

ಈ ಸಂದರ್ಭದಲ್ಲಿ ಶಿವಪ್ಪ ಎಸ್ ಕಂಬಾರ, ಪರಶುರಾಮ ದೊಡ್ಮನಿ, ನಿಂಗಣ್ಣ ಮಡಿಕೆರಿ, ಪರಶುರಾಮ ಮಾಳಳ್ಳಿಕರ, ಸಿದ್ದಪ್ಪ ಎಂಟಮಾನ, ಸಿದ್ದಪ್ಪ ಹಲಗಿ, ತಿಮ್ಮಣ್ಣ ಹೊಸಗೇರಿ, ಬಸವರಾಜ ಹೆಮನೂರ, ಸುರೇಶ್ ಮಾಳಳ್ಳಿಕರ, ಸಿದ್ದಪ್ಪ ಯತ್ನಾಳ, ಯಲ್ಲಪ್ಪ ಭಾವಿಮನಿ, ಮಲ್ಲಿಕಾರರ್ಜುನ ಎಂಟಮಾನ, ಜೆಟ್ಟೆಪ್ಪ ಮುಷ್ಠಳ್ಳಿ, ಮಲ್ಲಣ್ಣ, ನಂದಪ್ಪ ಸೇರಿದಂತೆ ಹಲವರು ಇದ್ದರು.

Leave a Reply