ಬೆಂಗಳೂರು: ನಾಟ್ಯಕಲಾ ತರಂಗ, ನಾಟ್ಯಶಾಸ್ತ್ರ ನೃತ್ಯ ಅಕಾಡೆಮಿಯು ಗುರು ವಿದುಷಿ ಮಂಜುಳಾ ರಾವ್ ಎಸ್ ಕೆ ಅವರ ಶಿಷ್ಯೆ ಅಕ್ಷಯಶ್ರೀ ಅವರ ಭರತನಾಟ್ಯ ರಂಗಪ್ರವೇಶವನ್ನು ಮಾರ್ಚ್ 31 ರಂದು “ಕಲಾಗ್ರಾಮ ಆಡಿಟೋರಿಯಂ, ಮಲ್ಲತ್ತಹಳ್ಳಿ”ಯಲ್ಲಿ ಸಂಜೆ 5.30 ಕ್ಕೆ ಆಯೋಜಿಸಲಾಗಿದೆ.
- ಚಕ್ರವರ್ತಿ ಸೂಲಿಬೆಲೆ ಪೋಸ್ಟ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಮುಖಭಂಗ
- ಲ್ಯಾಪ್ಟಾಪ್ನಲ್ಲಿ ವಾಟ್ಸಪ್ ಕಿರಿಕಿರಿ? ನೋಟಿಫಿಕೇಶನ್ ಮ್ಯೂಟ್ ಮಾಡಲು ಇಲ್ಲಿದೆ ಸರಳ ಹಾದಿ!
- ಚುನಾವಣೆಯಲ್ಲಿ ಸೋಲುವ ಭಯದಿಂದ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅನುಮಾನ: ಆರ್.ಅಶೋಕ
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
ಮುಖ್ಯ ಅತಿಥಿಗಳಾಗಿ ಗುರು ಶಾಂತಾ ಪದ್ಮನಾಭನ್ – ನಿವೃತ್ತ ಮುಖ್ಯ ಶಿಕ್ಷಕಿ ಮತ್ತು ನೃತ್ಯ ಶಿಕ್ಷಕಿ, ಜಗಜ್ಯೋತಿ ಬಸವೇಶ್ವರ ಬಾಲಕಿಯರ ಪ್ರೌಢಶಾಲೆ ಹಾಗೂ ವಿದುಷಿ ವಸುಂಧರಾ ಸಂಪತ್ ಕುಮಾರ್ – ಕಲಾತ್ಮಕ ನಿರ್ದೇಶಕರು, ನಟರಾಜ ನೃತ್ಯ ಶಾಲೆ ಹಾಗೂ ಡಾ. ಚಿನ್ಮಯ ಎಂ. ರಾವ್ – ಸಂಸ್ಥಾಪಕರು ಮತ್ತು ಪ್ರಾಂಶುಪಾಲರು, ಸ್ವರಮೇಧಾ ಇಂಟರ್ನ್ಯಾಶನಲ್ ಮ್ಯೂಸಿಕ್ ಅಕಾಡೆಮಿ ಇವರುಗಳ ಉಪಸ್ಥಿತಿ ಇರುತ್ತದೆ.

ಕುಮಾರಿ ಅಕ್ಷಯಶ್ರೀ ಪ್ರಸ್ತುತ ರಾಜರಾಜೇಶ್ವರಿ ನಗರದ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನದಲ್ಲಿ 10ನೇ ತರಗತಿ ಓದುತ್ತಿದ್ದಾಳೆ. ಬಾಲ್ಯದಿಂದಲೂ, ಸಂಗೀತ ಮತ್ತು ನೃತ್ಯ ಎರಡರಲ್ಲೂ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡು ಸಾಧನೆಯಲ್ಲಿ ತೊಡಗಿಸಿಕೊಂಡಿದ್ದಾಳೆ. ಅವಳು ಭಾಗವಹಿಸಿದ ವಿವಿಧ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಗೆದ್ದಿದ್ದಾಳೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತಮ್ಮ ಶಿಷ್ಯೆಯನ್ನು ಪ್ರೋತ್ಸಾಹಿಸಬೇಕೆಂದು ನೃತ್ಯಗುರು ವಿದುಷಿ ಮಂಜುಳಾ ರಾವ್ ಎಸ್ ಕೆ ಅವರು ಮನವಿಮಾಡಿದ್ದಾರೆ.










