ಬಾಗಲಕೋಟೆ: ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದಲ್ಲಿ ಶ್ರೀ ಕುಮಾರೇಶ್ವರ ಜಾತ್ರೆ ನಿಮಿತ್ತ ಕೃಷ್ಣಾ ನದಿಯಲ್ಲಿ ಜೋಡು ಮೀನುಗಾರರ ಬುಟ್ಟಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ಕುಮಾರೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಷ ಸಾಹುಕಾರ, ಇಂದಿನ ಕಂಪ್ಯೂಟರ್ ಯುಗದಲ್ಲಿ ಜನರು ಮೊಬೈಲ್ ಬಳಕೆಯೊಂದಿಗೆ ಆಯುಷ್ಯ ಕಳೆದುಕೂಳ್ಳುತ್ತಿರುವ ಯುವಕರಿಗೆ ನಮ್ಮೂರಿನ ಸ್ನೇಹಿತರು ಕುಮಾರೇಶ್ವರ ಜಾತ್ರೆಯ ನಿಮಿತ್ತವಾಗಿ ಇಂತಹ ಗ್ರಾಮೀಣ ಕ್ರಿಡೆಯಾದ ಜೋಡು ಮೀನುಗಾರರ ಬುಟ್ಟಿ ಸ್ಪರ್ಧೆಯನ್ನು ಕೃಷ್ಣಾ ನದಿಯಲ್ಲಿ ನಡೆಸುವ ಮೂಲಕ ಯುವ ಪೀಳಿಗೆಗೆ ಶಾರೀರಿಕ ಬೆಳವಣಿಗೆಗೆ ಮತ್ತು ಗ್ರಾಮೀಣ ಪ್ರತಿಭೆಗಳನ್ನು ಬೆಳೆಸಿ ಪ್ರೋತ್ಸಾಹಿಸಿ ಬೆಳೆಸುವ ಮೂಲಕ ನಮ್ಮೂರಿನ ಗೆಳೆಯರು ಮಾಡಿದ್ದಾರೆ ಎಂದರು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ರಾಜು ಮೇಲಿನಕೆರಿ ಹಬ್ಬ ಹರಿದಿನಗಳಲ್ಲಿ ಮತ್ತು ಜಾತ್ರಾ ಮಹೋತ್ಸವಗಳಲ್ಲಿ ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸಿ ಗ್ರಾಮೀಣ ಯುವಕರನ್ನು ರಾಜ್ಯಕ್ಕೆ ಪರಿಚಯಿಸುವ ಕೆಲಸ ನಡೆಯಬೇಕಿದೆ. ಈ ಸ್ಪರ್ಧೆಯನ್ನು ಆಯೋಜಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸದಸ್ಯರಿಗೆ ಅಭಿನಂದನೆಗಳು ಎಂದರು.
ಈ ಸ್ಪರ್ಧೆಯಲ್ಲಿ ಕುಮಾರೇಶ್ವರ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯದರ್ಶಿ ಬಸವರಾಜ ಸಾಹುಕಾರ, ಪಿಕೆಪಿಎಸ್ ಅಧ್ಯಕ್ಷ ಅಶೋಕ ಕೂನಪ್ಪನವರ, ಗ್ರಾಂ ಪಂ ಅಧ್ಯಕ್ಷ ರಾಕೇಶ ಪತ್ತಾರ, ಹಣಮಂತ ಪಾಟೀಲ, ಶಾಂತು ರಾಘಾ, ಸದಾಶಿವ ದೂಡಮನಿ ಶ್ರೀಮಂತ ಹರಿಜನ ಸೇರಿದಂತೆ ಅನೇಕರು ಹಾಜರಿದ್ದರು.




