ರಾಷ್ಟ್ರೀಯ ಮಟ್ಟದ ವಾಲಿಬಾಲ್ ಪಂದ್ಯಾವಳಿ ವಾಜಪೇಯಿ ಕಪ್-2022

3 years ago

ಬೆಂಗಳೂರು: ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ಜನ್ಮ ದಿನಾಚರಣೆ ಪ್ರಯುಕ್ತ 20ನೇ ವರ್ಷದ ವಾಜಪೇಯಿ ಕಪ್-2022 ರಾಷ್ಟ್ರಮಟ್ಟದ ಪುರುಷ, ಮಹಿಳಾ ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ.

ಮಾಜಿ ಉಪಮಹಾಪೌರ ಎಸ್.ಹರೀಶ್ ವಾಜಪೇಯಿ ಕಪ್-2022ರ ಕುರಿತು ಮಾತನಾಡಿ, ದೇಶ ಕಂಡ ಉತ್ತಮ ರಾಜಕಾರಣಿ, ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿರವರ ಜನ್ಮದಿನೋತ್ಸವ ಪ್ರಯುಕ್ತ ರಾಜಾಜಿನಗರ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಕಳೆದ 19 ವರ್ಷ ವಾಜಪೇಯಿ ಕಪ್ ರಾಷ್ಟ್ರೀಯ ಮಟ್ಟದ ಪುರುಷ ಮತ್ತು ಮಹಿಳೆಯ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ ಎಂದರು.

ಇದೀಗ 20ನೇ ವರ್ಷಕ್ಕೆ ನಮ್ಮ ಸಂಘದ ವತಿಯಿಂದ ವಾಜಪೇಯಿ ಕಪ್-2022 ಪಂದ್ಯಾವಳಿ ನಾಳೆ ಸ್ವಾಮಿ ವಿವೇಕಾನಂದ ಆಟದ ಮೈದಾನ,ಶಂಕರಮಠದಲ್ಲಿ 21-12-2022ರಿಂದ 25-12-2022ರ ಐದು ದಿನಗಳ ಕಾಲ ಹೊನಲು ಬೆಳಕಿನ ನಡುವೆ ಪಂದ್ಯಾವಳಿ ನಡೆಯಲಿದೆ ಎಂದರು.

21ನೇ ತಾರೀಖು ಸಂಜೆ 6 ಗಂಟೆಗೆ 20 ಮಹಿಳಾ ಸಾಧಕಿಯರಿಂದ ವಾಜಪೇಯಿ ಕಪ್-2022ರ ಉದ್ಘಾಟನೆ ನಡೆಯಲಿದೆ. ಈ ಬಾರಿಯ ಪಂದ್ಯಾವಳಿಯಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಒಟ್ಟು ಹತ್ತು ತಂಡಗಳು ಭಾಗವಹಿಸುತ್ತಿವೆ. ಈ ಪೈಕಿ ಪುರುಷ ತಂಡದಲ್ಲಿ ಆರ್‌ಎಸ್‌ಸಿಎ (ಕಂಟಕ, ಕೇರಳ ಪೊಲೀಸ್, ಬಿಪಿಸಿಎಲ್-ಕೇರಳ, ಕೆಎಸ್‌ಇಬಿ- ಕೇರಳ, ಇಂಡಿಯನ್ ನೇವಿನವದೆಹಲಿ ಮತ್ತು ಇಂಡಿಯನ್ ಬ್ಯಾಂಕ್ (ತಮಿಳುನಾಡು) ತಂಡಗಳು ಭಾಗವಹಿಸುತ್ತಿವೆ ಎಂದರು.
ಅದೇ ರೀತಿ ಮಹಿಳಾ ವಿಭಾಗದಲ್ಲಿ ಒಟ್ಟು ನಾಲ್ಕು ತಂಡಗಳು ಪಂದ್ಯದಲ್ಲಿ ಭಾಗವಹಿಸುತ್ತಿದ್ದು, ಕೆಎಸ್‌ಇಬಿ, ಕೇರಳ ಪೊಲಿಸ್, ತಮಿಳುನಾಡು ಮತ್ತು ಆರ್‌ಎಸ್‌ಸಿಎ (ಕರ್ನಾಟಕ) ತಂಡಗಳು ಭಾಗವಹಿಸುತ್ತಿವೆ ಎಂದರು.

ಈ ಬಾರಿಯ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿರುವ ತಂಡಗಳಿಂದ ರೋಚಕ ಪ್ರದರ್ಶನ ನಡೆಯುವ ಬಗ್ಗೆ ವಿಶ್ವಾಸ ಇರಿಸಿಕೊಳ್ಳಲಾಗಿದ್ದು, ಪ್ರತೀ ತಂಡವೂ ವಿಭಿನ್ನ ರೀತಿಯಲ್ಲಿ ತನ್ನದೇ ಆದ ಖ್ಯಾತಿಯನ್ನು ಪಡೆದಿದ್ದು, ಗೆದ್ದ ತಂಡಗಳಿಗೆ ನಗದು ಪುರಸ್ಕಾರವನ್ನು ನೀಡಲಾಗುವುದು ಎಂದರು.

ವಾಲಿಬಾಲ್ ಪಂದ್ಯಾವಳಿಯನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರತೀ ದಿನವೂ ಹೆಸರಾಂತ ಸಾಂಸ್ಕೃತಿಕ ಕಲಾತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.

ಐದು ದಿನಗಳ ಪಂದ್ಯಾವಳಿಯ ಉದ್ಘಾಟನೆಯನ್ನು ಅಬಕಾರಿ ಸಚಿವ ಹಾಗೂ ಮಂಡ್ಯ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ನೆರವೇರಿಸುತ್ತಿದ್ದಾರೆ. ಮಹಿಳಾ, ರಾಜಕಾರಣಿಗಳು, ಮಹಿಳಾ ಕ್ರೀಡಾಪಟುಗಳು, ಅರ್ಜುನ ಪ್ರಶಸ್ತಿ ಮಹಿಳಾ ಪುರಸ್ಕೃತರು, ಅಂತಾರಾಷ್ಟ್ರೀಯ ಪದಕ ಮಹಿಳಾ ವಿಜೇತರು, ಪೊಲೀಸ್ ಅಧಿಕಾರಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಒಟ್ಟು 20 ಮಹಿಳೆಯರು 20ನೇವರ್ಷದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ ಎಂದರು.

ಮಾಜಿ ಮೇಯರ್ ಕೆ.ಶಾಂತಕುಮಾರಿ, ಮಾಜಿ ಉಪ ಮೇಯರ್ ಹೇಮಲತಾ ಗೋಪಾಲಯ್ಯ, ವಿಧಾನ ಪರಿಷತ್‌ ಮಾಜಿ ಸದಸ್ಯೆ ತಾರಾ ಅನುರಾಧಾ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ, ಚಿತ್ರ ನಟಿ ಮಾಳವಿಕಾ, ಇನ್ನರ್‌ ವೀಲ್‌ಕ್ಲಬ್, ಡಿಸ್ಟಿಕ್ಸ್-3194 ಚೇರ್ಮನ್ ವಿನುತಾ ಹರೀಶ್, ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಶೋಭಾ ನಾರಾಯಣ್‌, ಉಮಾದೇವಿ, ಅಂತಾರಾಷ್ಟ್ರೀಯ ಆಟಗಾರರಾದ ಕುಮಾರಿ ರಿತಿಮಾ ವೀರೇಂದ್ರಕುಮಾರ್, ಅಶ್ವಿನಿ ಅಕ್ಕುಂಜಿ, ಪವಿತ್ರ, ಕುಮಾರಿ ರಜನಿ, ಕುಮಾರಿ ಅಂಜಲಿ, ಯುಕ್ತಿ ರಾಜೇಂದ್ರ ಮಹಿಳಾ ಇನ್ಸ್‌ಪೆಕ್ಟರ್‌ಗಳಾದ ರೂಪಾ ಹಡಗಲಿ, ಶಿವರತ್ನ ಸೇರಿದಂತೆ ಅನೇಕರು ಪಂದ್ಯಾವಳಿಯ ಉದ್ಘಾಟನಾ ದಿನದ ಆಕರ್ಷಣೆಯ ಬಿಂದುಗಳಾಗಲಿದ್ದಾರೆ ಎಂದರು.

ಐದು ದಿನಗಳ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ಕೇಂದ್ರ ಸಚಿವರು, ಸಚಿವರು, ಮಾಜಿ ಮೇಯರ್‌ಗಳು, ಮಾಜಿ ಕಾರ್ಪೊರೇಟರ್‌ಗಳು, ಬಿಜೆಪಿ ಪಕ್ಷದ ಮುಖಂಡರುಗಳಿಗೆ ಆಹ್ವಾನ ನೀಡಲಾಗಿದೆ. ಕೇಂದ್ರದ ಕ್ರೀಡಾ ಸಚಿವ ಅನುರಾಗ್ ಠಾಕೂರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ, ಕೇಂದ್ರದ ಮಾಜಿ ಸಚಿವ, ಉತ್ತರ ಲೋಕಸಭಾ ಸದಸ್ಯ ಡಿ.ವಿ. ಸದಾನಂದಗೌಡ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಸಚಿವರಾದ ಆರ್. ಅಶೋಕ್, ಡಾ. ಅಶ್ವತ್‌ನಾರಾಯಣ, ವಿ. ಸೋಮಣ್ಣ, ಸುನೀಲ್‌ ಕುಮಾರ್, ಮುನಿರತ್ನ ನಾಯ್ಡು, ಲೋಕಸಭಾ ಸದಸ್ಯರಾಸ ಪಿ.ಸಿ. ಮೋಹನ್, ತೇಜಸ್ವಿ ಸೂರ್ಯ, ರಾಜ್ಯಸಭಾ ಸದಸ್ಯರಾ ಕೆ. ನಾರಾಯಣ, ಜಗ್ಗೇಶ್ ಮತ್ತು ಲೆಹರ್ ಸಿಂಗ್ ಸೇರಿದಂತೆ ಅನೇಕರು ಪಂದ್ಯಾವಳಿಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.

Leave a Reply