ದೂರವಾಣಿ ಮೂಲಕ ಸಂಧಾನ ನಡೆಸಿದ ಗೃಹಸಚಿವ
- ಗಮನ ಬೇರೆಡೆ ಸೆಳೆದು ಮತದಾರರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ: ಪ್ರಕಾಶ್ ರಾಜ್
- ಪ್ರಜಾಪ್ರಭುತ್ವದಲ್ಲಿ ಪ್ರಧಾನಿಯೂ ವ್ಯಂಗ್ಯಕ್ಕೆ ಅತೀತರಲ್ಲ
- ಹಾಲಿನ ದರ ಏರಿಕೆ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ: ಡಿ ಕೆ ಶಿವಕುಮಾರ್
- ಒಂದು ತಿಂಗಳ ಸಂಬಳವನ್ನು ಬರ ಪರಿಹಾರ ನಿಧಿಗೆ ನೀಡಿ
- ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ
ಬೆಂಗಳೂರು: ಬೆಂಗಳೂರು ಭೇಟಿ ನಡುವೆಯೇ ಹಿರಿಯ ನಾಯಕ ಈಶ್ವರಪ್ಪ ಅವರಿಗೆ ದೂರವಾಣಿ ಕರೆ ಮಾಡಿ ಕೆಲ ಕಾಲ ಮಾತುಕತೆ ನಡೆಸಿದ ಅಮಿತ್ ಶಾ, ಕೆ.ಎಸ್.ಈಶ್ವರಪ್ಪ ಅವರ ಅಹವಾಲು ಆಲಿಸಿ, ಈ ಕುರಿತು ಹೆಚ್ಚಿನ ಮಾತುಕತೆಗಾಗಿ ದೆಹಲಿಗೆ ಬರುವಂತೆ ಸೂಚಿಸಿದ್ದಾರೆ.
ಇದಕ್ಕೆ ಒಪ್ಪಿದ ಈಶ್ವರಪ್ಪ ದೆಹಲಿಗೆ ಬರುತ್ತೇನೆ. ಆದರೆ ಪಕ್ಷವನ್ನು ಕುಟುಂಬದ ಮುಷ್ಟಿಯಿಂದ ಪಾರು ಮಾಡಬೇಕು ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಇದಕ್ಕಾಗಿಯೇ ನಾನು ಹೋರಾಟ ಮಾಡುತ್ತಿದ್ದೇನೆ. ಹೀಗಾಗಿ ನಾನು ಸ್ಪರ್ಧೆ ಮಾಡುವ ನಿರ್ಧಾರ ಅಚಲ ಎಂದರು.
ಅದಕ್ಕೆ ಅವರು ಎಲ್ಲವನ್ನೂ ಸುದೀರ್ಘವಾಗಿ ಮಾತನಾಡೋಣ ನಾಳೆ ದೆಹಲಿಗೆ ಬನ್ನಿ ಎಂದು ಬಂಡಾಯ ನಾಯಕ ಈಶ್ವರಪ್ಪ ಅವರಿಗೆ ಕರೆನೀಡಿದ್ದಾರೆ.




