ಬೆಂಗಳೂರು: ಉತ್ತರಾಖಂಡ್ ನಲ್ಲಿ ಸಿಲುಕಿ ರಕ್ಷಿಸಲ್ಪಟ್ಟಿರುವ ಬೆಂಗಳೂರಿನ ಚಾರಣಿಗರ ಜೊತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಡೆಹ್ರಾಡೂನ್ ನಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು.
- ಕಟ್ಟೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಸೇವೆ ಮನೆ ಬಾಗಿಲಿಗೆ ಮಾದರಿ ಕಾರ್ಯಕ್ರಮ
- ಕನ್ನಡ ಸಿನಿಮಾ: ಮುಳುಗುತ್ತಿರುವ ಟೈಟಾನಿಕ್
- RSS ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ?: ಆರ್. ಅಶೋಕ್
- ಎಸ್ಐಆರ್ ಎನ್ಯೂಮರೇಷನ್ ಪ್ರಕ್ರಿಯೆ ಬಗ್ಗೆ ಗೊಂದಲ ನಿವಾರಣೆ ಅಗತ್ಯ: ಅಪ್ಸರ್ ಕೊಡ್ಲಿಪೇಟೆ
- ಮಾತಾಡದೇ ನನ್ನೊಳಗೇ ಉಳಿದ ವಿಷಯಗಳು ಹೀಗಿವೆ
ಡೆಹ್ರಾಡೂನ್ ಅತಿಥಿ ಗೃಹದಲ್ಲಿ ತಂಗಿರುವ ಎಂಟು ಚಾರಣಿಗರ ಜೊತೆ ಅವರು ಸಂಭಾಷಣೆ ನಡೆಸಿದ್ದು, ಅವರ ಆರೋಗ್ಯ ಸ್ಥಿತಿ ಸಹಜವಾಗಿದೆ. ನಾಳೆ ಮತ್ತೆ ಐವರು ಚಾರಣಿಗರು ಡೆಹ್ರಾಡೂನ್ ತಲುಪಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೃಷ್ಣ ಬೈರೇಗೌಡ ಅವರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಸ್ಥಿತಿಗತಿ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. 9 ಮೃತದೇಹಗಳನ್ನು ಡೆಹ್ರಾಡೂನ್ ಗೆ ತರಲು ಸ್ಥಳೀಯ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಆದಷ್ಟು ಬೇಗ ಮೃತದೇಹಗಳನ್ನು ಬೆಂಗಳೂರಿಗೆ ತರಲು ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಚಾರಣಿಗರ ವಿವರ: ಸೌಮ್ಯ ಕಾನಲೆ, ಸ್ಮೃತಿ ದೊಲಸ್, ಶೀನಾ ಲಕ್ಷ್ಮಿ, ಶಿವ ಜ್ಯೋತಿ, ಅನಿಲ್ ಭಟ್ಟ, ಭರತ್ ಬೊಮ್ಮನಗೌಡರ್, ಮಧು ಕಿರಣ್ ರೆಡ್ಡಿ, ಜಯಪ್ರಕಾಶ್ ಈಗಾಗಲೇ ಡೆಹ್ರಾಡೂನ್ ಗೆ ಕಳುಹಿಸಲಾದ ಚಾರಣಿಗರಾಗಿದ್ದಾರೆ. ಎಸ್.ಸುಧಾಕರ್, ವಿನಯ್, ವಿವೇಕ್ ಶ್ರೀಧರ್, ನವೀನ್, ರಿತ್ತಿಕ ಜಿಂದಾಲ್ ಎಂಬುವವರು ರಕ್ಷಿಸಲ್ಪಟ್ಟ ಚಾರಣಿಗರಾಗಿದ್ದಾರೆ.
ಅವರನ್ನು ಡೆಹ್ರಾಡೂನ್ ಅತಿಥಿ ಗೃಹಕ್ಕೆ ಕಳುಹಿಸಬೇಕಾಗಿದೆ. ಇನ್ನು ಸಿಂದೆ ವಾಕೆಕಲಮ್, ಆಶಾ ಸುಧಾಕರ್, ಸುಜಾತ ಮುಂಗುರ್ವಾಡಿ, ವಿನಾಯಕ್ ಮುಂಗುರ್ವಾಡಿ ಹಾಗೂ ಚಿತ್ರ ಪ್ರಣೀತ್ ಎಂಬುವರು ಮೃತ ದುರ್ದೈವಿಗಳಾಗಿದ್ದಾರೆ ಎಂದು ಪ್ರಕಟಣೆ ಮೂಲಕ ತಿಳಿಸಲಾಗಿದೆ.




