ಶಿವಮೊಗ್ಗ: ಶ್ರೀಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಜಿಲ್ಲಾ ನಿವೃತ್ತ ನೌಕರರ ಸಂಘ ಹಾಗು ಪಿ. ಎನ್.ಆರ್. ಸೊಸೈಟಿ, ಭಾವನಗರ, (ರಿ) ಗುಜರಾತ್ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 14ರಂದು ಬುಧವಾರ ಶಿವಮೊಗ್ಗ ನಗರದ ಜಿಲ್ಲಾ ನಿವೃತ್ತ ನೌಕರ ಸಂಘದ ಆವರಣದಲ್ಲಿ ಮಂಡಿನೋವು ಪಟ್ಟಿ ಚಿಕಿತ್ಸೆ ಶಿಬಿರ ನಡೆಯಲಿದೆ.

ಈ ಶಿಬಿರದಲ್ಲಿ ಕೇಂದ್ರ ಸರ್ಕಾರದ ಪ್ರಶಸ್ತಿ ವಿಜೇತ ಡಾ.ವಿಜಯನಾಯಕ್ ಮಂಡಿನೋವು ಅನುಭವಿಗಳನ್ನು ಪರೀಕ್ಷಿಸಿ ಶಸ್ತ್ರಚಿಕಿತ್ಸೆ ರಹಿತ ಪಟ್ಟಿ ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡುವರು. ಆನಂತರ ಸ್ಥಳದಲ್ಲಿಯೆ ವೈದಕೀಯ ತಂಡದಿಂದ ವರ್ಕ್ ಶಾಪ್ ನಲ್ಲಿ ಪಟ್ಟಿ ತಯಾರಿಸಿ ಅಳವಡಿಸಲಾಗುವುದು.
ಮಂಡಿನೋವು ಅನುಭವಿಸುತ್ತಿರುವವರು ಮತ್ತು ಶಿಬಿರದಲ್ಲಿ ಪಟ್ಟಿ ಅಳವಡಿಸಿಕೊಳ್ಳಬಯಸುವವರು ಆರ್.ಟಿ.ನಟರಾಜ್ ಗೌರವ ಕಾರ್ಯದರ್ಶಿಗಳು ಮೊಬೈಲ್ ನಂ : 9448143165 ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ, ಮೊದಲ ಮಹಡಿ, ಜಿಲ್ಲಾ ನಿವೃತ್ತ ನೌಕರರ ಸಂಘದ ಕಟ್ಟಡ, ಆರ್. ಟಿ. ಒ. ಆಫೀಸ್ ರಸ್ತೆ, ಡಿ. ಸಿ. ಕಚೇರಿ ಆವರಣ, ಶಿವಮೊಗ್ಗ ಇಲ್ಲಿ ಮುಂಗಡವಾಗಿ ಹೆಸರು ನೊಂದಾಯಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು.




