20,000 ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು
ಬೆಂಗಳೂರು: 4,000 ಕೋಟಿ ರೂಪಾಯಿ ಸಂಪತ್ತು ಒಡೆಯ ನಾನು ,130 ಕೋಟಿ ರೂಪಾಯಿ ಆದಾಯ ತೆರಿಗೆ ಕಟ್ಟುತ್ತೇನೆ ಮತ್ತು ವಾರ್ಷಿಕ 20 ಕೋಟಿ ರೂಪಾಯಿ ಶಿಕ್ಷಣಕ್ಕೆ ಸಹಾಯಧನ ನೀಡುತ್ತಿದ್ದೇನೆ. ಕೋವಿಡ್ ಸಾಂಕ್ರಮಿಕ ರೋಗದಿಂದ ಕಳೆದ ಎರಡು ವರ್ಷಗಳಿಂದ ಶಾಲೆ, ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೋಗುತ್ತಿಲ್ಲ. ಇದೀಗ ಶಾಲಾ, ಕಾಲೇಜು ಆರಂಭವಾದರು ಶುಲ್ಕ ಕಟ್ಟಲು ಅವರ ಬಳಿ ಹಣವಿಲ್ಲ. ಆದ್ದರಿಂದ ಕೋಲಾರ ಜಿಲ್ಲೆಯ 30 ಶಾಲಾಕಾಲೇಜಿನ 20,000 ಮಕ್ಕಳಿಗೆ 8 ಕೋಟಿ ಅನುದಾನ ನೀಡಲಾಗುತ್ತಿದೆ ಎಂದು ಉಮ್ರಾ ಚಾರಿಟಬಲ್ ಫೌಂಡೇಷನ್ ಸಂಸ್ಥಾಪಕ ಹಾಗೂ ಸಮಾಜ ಸೇವಕ ಕೆ.ಜಿ.ಎಫ್ ಬಾಬು ಹೇಳಿದರು.
ಉಮ್ರಾ ಚಾರಿಟಬಲ್ ಫೌಂಡೇಷನ್ ನಿಂದ ಉದ್ಯಮಿ, ಸಮಾಜ ಸೇವಕ ಕೆ.ಜಿ.ಎಫ್ ಬಾಬು ಕೋವಿಡ್‌ನಿಂದ ಕೋಲಾರ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ಆರ್ಥಿಕವಾಗಿ ಹಿಂದುಳಿದ ಸುಮಾರು 2.40 ಲಕ್ಷ ಜನರಿಗೆ ಆರ್ಥಿಕ ನೆರವು ಮತ್ತು ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಿರುವುದಾಗಿ ಬೆಂಗಳೂರಿನ ಪ್ರಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಕೋವಿಡ್ ಕಾರಣದಿಂದ ಕೋಲಾರ ಜಿಲ್ಲೆಯಲ್ಲಿ ಜನರಿಗೆ ಉದ್ಯೋಗವವಿಲ್ಲ ಮತ್ತು ಆರ್ಥಿಕವಾಗಿ ಕುಗ್ಗಿಹೋಗಿದ್ದಾರೆ. ಅಂತಹ ಕುಟುಂಬಗಳಿಗೆ ಸಹಕಾರ, ಸಹಾಯ ಮಾಡಬೇಕೆಂದು ಸರಿ ಸುಮಾರು 2.40 ಲಕ್ಷ ಕುಟುಂಬಗಳಿಗೆ 4 ಮಂದಿ ಇರುವ ಕುಟುಂಬಕ್ಕೆ 2,000 ಮತ್ತು 6 ಸದಸ್ಯರು ಇರುವ ಕುಟುಂಬಕ್ಕೆ 3,000, 8 ಜನ ಇರುವ ಕುಟುಂಬಕ್ಕೆ 4,000 ಮತ್ತು 10 ಸದಸ್ಯರು ಇರುವ ಕುಟುಂಬಕ್ಕೆ 5,000 ನೀಡಲಾಗುವುದು. ನನ್ನ ಜೀವನದ ಮಹಾದಾಸೆ ಕೋಲಾರ ಜಿಲ್ಲೆಯಿಂದ ವಿದ್ಯಾರ್ಥಿ ಐ.ಎ.ಎಸ್.ಮತ್ತು ಐ.ಪಿ.ಎಸ್. ಹಾಗೂ ಸರ್ಕಾರದಲ್ಲಿ ಉನ್ನತ ಸ್ಥಾನಮಾನದಲ್ಲಿ ಇರಬೇಕು ಎಂಬುದು ಎಂದರು.




