ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಲೋಕಾರ್ಪಣೆಗೆ ಸಜ್ಜು

3 years ago

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ನೂತನ ಟರ್ಮಿನಲ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ.

ದೇಶದಲ್ಲೇ ದೆಹಲಿ ಮತ್ತು ಮುಂಬೈ ಹೊರತುಪಡಿಸಿದರೆ 2ನೇ ಟರ್ಮಿನಲ್ ಹೊಂದಿದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ರಾಜ್ಯದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಲಿದೆ. ಹಲವು ವಿಶಿಷ್ಟತೆಗಳಿಂದ ಗಮನಸೆಳೆದಿರುವ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇದರಿಂದ ಮತ್ತೊಂದು ಮುಕುಟ ಸಿಗಲಿದೆ.

ಟರ್ಮಿನಲ್-2ನ್ನು ಗಾರ್ಡನ್ ಟರ್ಮಿನಲ್ ಎಂದು ನಾಮಕರಣ ಮಾಡಲಾಗಿದೆ. ಉದ್ಯಾನನಗರಿ ಬೆಂಗಳೂರಿನ ಅಭಿವೃದ್ಧಿ ನೀತಿಯನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ವಿಶೇಷವಾಗಿ ಟರ್ಮಿನಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಒಟ್ಟು 13,000 ಕೋಟಿ ರೂ. ವೆಚ್ಚದಲ್ಲಿ 2.55 ಲಕ್ಷ ಚದರ ಮೀ. ಟರ್ಮಿನಲ್-2 ನಿರ್ಮಾಣವಾಗಿದೆ. ಪ್ರತಿ ಗಂಟೆಗೆ 90 ವಿಮಾನಗಳ ಸಂಚಾರದೊಂದಿಗೆ ವಾರ್ಷಿಕ 3.6 ಕೋಟಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ರೂಪುಗೊಳಿಸಲಾಗಿದೆ. ಪ್ರತಿ ಗಂಟೆಗೆ 90 ವಿಮಾನಗಳ ಸಂಚಾರದೊಂದಿಗೆ ವಾರ್ಷಿಕ 3.6 ಕೋಟಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಸಿದ್ದಪಡಿಸಲಾಗಿದೆ

ಈ ಟರ್ಮಿನಲ್ ಸುಮಾರು 4.41 ಲಕ್ಷ ಚದರ ಮೀಟರ್‍ನಷ್ಟು ವಿಶಾಲವಾಗಿದೆ. ಟರ್ಮಿನಲ್ ಆಕರ್ಷಕವಾಗಿ, ವಿನೂತನವಾಗಿ ಕಾಣುವಂತೆ ಮಾಡಲು ಅಮೆರಿಕದ ವಾಸ್ತುಶಿಲ್ಪ ಸಂಸ್ಥೆ ಸ್ಕಿಡ್‍ಮೋರ್, ಓವಿಂಗ್ಸ್ ಮತ್ತು ಮೆರಿಲ್ ಸಂಸ್ಥೆಗಳು ಶ್ರಮಿಸಿವೆ.

Leave a Reply