ಏಷಿಯನ್ ಚಾಂಪಿಯನ್ ಸಿಟ್ಟಿಂಗ್ ವಾಲಿಬಾಲ್ ತಂಡದ ತರಬೇತುದಾರರಾಗಿ ಕನ್ನಡಿಗ ವಿ.ನಾಗೇಶ್ವರರಾವ್ ಆಯ್ಕೆ

3 years ago

#Kannadiga #VNageswaraRao #selected #coach #Asian #Champion #Sitting #Volleyball #team

ಬೆಂಗಳೂರು: ಭಾರತೀಯ ಸಿಟ್ಟಿಂಗ್ ವಾಲಿಬಾಲ್ ತಂಡಕ್ಕೆ ತರಬೇತುದಾರರಾಗಿ ಕನ್ನಡಿಗ ವಿ.ನಾಗೇಶ್ವರರಾವ್ ಆಯ್ಕೆಯಾಗಿದ್ದಾರೆ.

WPV ಏಷ್ಯಾ ವಲಯ ಚಾಂಪಿಯನ್‌ಶಿಪ್, ಕಝಾಕಿಸ್ತಾನ್‌ನಲ್ಲಿ 3-8 ಜುಲೈ 2023 ರಿಂದ ಭಾಗವಹಿಸುವ ಭಾರತೀಯ ತಂಡಕ್ಕೆ ತರಬೇತುದಾರರಾಗಿ  ವಿ.ನಾಗೇಶ್ವರರಾವ್ ತೆರಳಿಲಿದ್ದಾರೆ.

ಇದೇ ಸಂದರ್ಭದಲ್ಲಿ ತರಬೇತುದಾರ ವಿ.ನಾಗೇಶ್ವರರಾವ್  ಮಾತನಾಡಿ, ಕ್ರೀಡಾಪಟುಗಳು, ತರಬೇತುದಾರರು ಕರ್ನಾಟಕದಿಂದ ಕನ್ನಡಿಗರು ಹೆಚ್ಚು ಸಂಖ್ಯೆಯಲ್ಲಿ ಆಯ್ಕೆಯಾಗಬೇಕು. ಕ್ರೀಡೆಯಲ್ಲಿ ರಾಜ್ಯದಲ್ಲಿ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ, ಸರಿಯಾದ ಮಾರ್ಗದರ್ಶನ ಸಿಕ್ಕರೆ ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ನಮ್ಮಲ್ಲಿ ತಯಾರುಗುತ್ತಾರೆ ಎಂದು ಹೇಳಿದರು.

ಮುಂದಿನ ತಿಂಗಳು ದಿನಾಂಕ 3-8 ಜುಲೈ 2023 ರಿಂದ ಕಝಾಕಿಸ್ತಾನ್‌ನಲ್ಲಿ 2023 WPV ಸಿಟ್ಟಿಂಗ್ ವಾಲಿಬಾಲ್ ಏಷ್ಯಾ ವಲಯ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಭಾರತೀಯ ತಂಡಕ್ಕೆ  ಕೋಚ್ ಆಗಿ ಆಯ್ಕೆಯಾಗಿದ್ದೇನೆ ಎಂದು ತಿಳಿಸಲು ನಾನು ಸಂತೋಷಪಡುತ್ತೇನೆ. ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ತಂಡವು ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್ 2024 ಗೆ ಅರ್ಹತೆ ಪಡೆಯಲು ಪ್ರದರ್ಶನವನ್ನು ಪರಿಗಣಿಸುತ್ತಿದೆ ಎಂದು ಹೇಳಿದರು.

ಈ ಚಾಂಪಿಯನ್‌ಶಿಪ್‌ನಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಭಾಗವಹಿಸಲಿದ್ದಾರೆ. ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದ ಪ್ರದರ್ಶನಕ್ಕೆ ಭಾರತ ತಂಡಕ್ಕೆ ತರಬೇತುದಾರರಾಗಿ ನನ್ನ ಸಹಾಯ, ಸಹಕಾರ ಇರುತ್ತದೆ ಮತ್ತು  ತರಬೇತುದಾರರಾಗಿ ನನ್ನನು ಆಯ್ಕೆ ಮಾಡಿದ ಭಾರತೀಯ ಪ್ಯಾರ ಓಲಂಪಿಕ್ ಸಂಸ್ಥೆ ಮತ್ತು ಪ್ಯಾರ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯ ಸಂಸ್ಥೆಗಳಿಗೆ ಧನ್ಯವಾದಗಳು. ಭಾರತೀಯ ತಂಡವು 1ನೇ ಜುಲೈ 2023 ರಂದು ಕಝಕಿಸ್ತಾನಕ್ಕೆ ತೆರಳಲಿದೆ ಎಂದು ಹೇಳಿದರು.

Leave a Reply