ಕನ್ನಡಿಗರಿಗಾಗಿ ಟ್ವಿಟರ್ ಖಾತೆ ತೆರೆದ ಗೂಗಲ್: ಕನ್ನಡದಲ್ಲೇ ಸೇವೆಗೆ ಸಿದ್ಧ

4 years ago

ಬೆಂಗಳೂರು: ಅಂತರ್ಜಾಲದಲ್ಲಿ ಕನ್ನಡ ಬಳಕೆ ಕುರಿತ ಜಾಗೃತಿ ಹೆಚ್ಚುತ್ತಿದೆ. ಕೆಲವು ಸಂದರ್ಭಗಳಲ್ಲಿ ಗೂಗಲ್ ಸೇರಿದಂತೆ ತಪ್ಪಾದ ಕನ್ನಡ ಬಳಕೆಯಾಗುತ್ತಿದೆ. ಇದರ ಕುರಿತು ಕನ್ನಡ ಪರ ಮನಸುಗಳು ಆಗಾಗ ಮನವರಿಕೆ ಮಾಡಿಕೊಡುತ್ತಲೇ ಇವೆ. ಇದೇ ಸಂದರ್ಭದಲ್ಲಿ ಕನ್ನಡಿಗರ ಗಮನ ಸೆಳೆಯಲು ಗೂಗಲ್ ಮುಂದಾಗಿದ್ದು, ಕನ್ನಡಿಗರಿಗಾಗಿ ಕನ್ನಡದಲ್ಲೇ ವ್ಯವಹರಿಸುವ ನಿಟ್ಟಿನಲ್ಲಿ ಟ್ವಿಟರ್ ಖಾತೆಯನ್ನು ತೆರೆದಿದೆ. ಕನ್ನಡದಲ್ಲೇ ಗ್ರಾಹಕ ಸೇವೆ ಒದಗಿಸಲು ಗೂಗಲ್ ಮುಂದಾಗಿದೆ.

https://twitter.com/GoogleKannada/status/1508023899870531590?s=20&t=gP7n8WmKCSFxDSUejwVMMQ

ನಿಮ್ಮ ಭಾಷೆಯಲ್ಲಿ ನಮ್ಮ ಗೂಗಲ್ ಎಂದು ಟ್ವೀಟ್ ಮಾಡಿರುವ ಗೂಗಲ್, ನಮ್ಮ ಆಫೀಷಿಯಲ್ ಟ್ವಿಟ್ಟರ್ ಖಾತೆ ಎಂದು ಟ್ವೀಟ್ ಮಾಡಿದೆ. ಇದರೊಂದಿಗೆ ಎರಡು ಚಿತ್ರಗಳನ್ನು ಕೂಡ ಪೋಸ್ಟ್ ಮಾಡಲಾಗಿದೆ.

https://twitter.com/GoogleKannada/status/1508052453769375749?s=20&t=gP7n8WmKCSFxDSUejwVMMQ

Leave a Reply