‘ಪಠಾಣ್’ ನಿಜವಾಗಿಯೂ ಎಷ್ಟು ಹಣ ಗಳಿಸಿದೆ’ ಕಾಜೋಲ್ ಪ್ರಶ್ನೆ ಏಳಿಸಿದ ವಿವಾದದ ಕಿಡಿ

3 years ago

#Kajol #sparked #controversy #raising #question #money #Pathan #really #earned #sharukhkhan

ಶಾರುಖ್ ಖಾನ್ ಅಭಿನಯದ ಇತ್ತೀಚಿನ ಚಿತ್ರ ‘ಪಠಾಣ್’ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ತಮಾಷೆಯಾಗಿ ಕೇಳಿದ ನಟಿ ಕಾಜೊಲ್ ಪ್ರಶ್ನೆ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಕಾರಣವಾಗಿದೆ.

ಬಾಲಿವುಡ್‌ನ ಪ್ರಸಿದ್ಧ ಜೋಡಿ ಕಾಜೋಲ್ ಮತ್ತು ಶಾರುಖ್ ಖಾನ್ ಕಳೆದ ಮೂರು ದಶಕಗಳಿಂದ ಮಹತ್ವದ ಹಿಟ್ ಚಿತ್ರಗಳನ್ನು ಕೊಟ್ಟಿದೆ. 30 ವರ್ಷಗಳ ಹಿಂದೆ ತೆರೆಗೆ ಬಂದ ಕಾಜೊಲ್ ಮೊದಲ ಚಿತ್ರ ‘ಬಾಜಿಗರ್’ ನಿಂದಿ ಹಿಡಿದು, ಇತ್ತೀಚೆಗೆ ಬಿಡುಗಡೆಯಾದ0 ‘ದಿಲ್ವಾಲೆ’ (2015) ವರೆಗೆ ಒಟ್ಟು ಏಳು ಚಿತ್ರಗಳಲ್ಲಿ ಈ ಜೋಡಿ ಕೆಮಿಸ್ಟ್ರಿಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ.

ಕಾಜೋಲ್ ಮತ್ತು ಶಾರುಖ್ ಖಾನ್ ಬಾಲಿವುಡ್ ಐಕಾನಿಕ್ ಜೋಡಿಗಳಲ್ಲಿ ಒಬ್ಬರು. ಇತ್ತೀಚೆಗೆ, ಕಾಜೊಲ್ ‘ಪಠಾಣ್’ ಚಿತ್ರ ನಿಜವಾಯಿಯೂ ಎಷ್ಟು ಹಣ ಗಳಿಸಿದೆ ಎಂದು ತಿಳಿದುಕೊಳ್ಳುವ ಆಸಕ್ತಿಯನ್ನು ತಮಾಷೆಯಾಗಿ ವ್ಯಕ್ತಪಡಿಸಿದಾಗ ವಿವಾದ ಎದ್ದಿದೆ.

ಈ ಲಘು ಪ್ರಶ್ನೆ ಶಾರೂಖ್ ಅಭಿಮಾನಿಗಳಲ್ಲಿ ಆಕ್ರೋಶ ಹುಟ್ಟುಹಾಕಿದೆ. ಕೆಲವರು ಈಗ ಅವರ ಸ್ನೇಹ ಮೊದಲಿನಂತೆ ಗಟ್ಟಿಯಾಗಿ ಉಳಿದಿದೆಯೇ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಕೆಲವು ಜಾಲತಾಣಿಗರು ಕಾಜೋಲ್ ಅವರ ಗೊಂದಲದ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದರೆ, ಚಿತ್ರದ ಯೋಜಿತ ಗಳಿಕೆ ಮತ್ತು ಗಲ್ಲಾಪೆಟ್ಟಿಗೆಯಲ್ಲಿ ಅದರ ನಿಜವಾದ ಸಂಗ್ರಹದ ನಡುವಿನ ವ್ಯತ್ಯಾಸವನ್ನು ಸೂಚಿಸಿದ್ದಾರೆ. ಕಾಜೋಲ್ ಅವರ ನಿರ್ಮಾಣ ಸಂಸ್ಥೆಯಾದ ಯಶ್ ರಾಜ್ ಫಿಲ್ಮ್ಸ್ ಚಲನಚಿತ್ರ ನಿರ್ಮಿಸಿದ್ದರಿಂದ ಕಾಜೋಲ್ ತನ್ನ ಸೋದರ ಮಾವ ಆದಿತ್ಯ ಚೋಪ್ರಾ ಅವರಿಂದ ‘ಪಠಾಣ್’ ಬಾಕ್ಸ್ ಆಫೀಸ್ ಅಂಕಿಅಂಶಗಳ ಬಗ್ಗೆ ಕೇಳಬೇಕು ಎಂದು ಕೆಲವರು ತಿರುಗೇಟು ನೀಡಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ, ಪಠಾಣ್, ಭಾರತದಲ್ಲಿ ¹665 ಕೋಟಿಗಳಷ್ಟು ಬೃಹತ್ ಮೊತ್ತವನ್ನು ಗಲ್ಲಾಪೆಟ್ಟಿಗೆಯಲ್ಲಿ ಕೊಳ್ಳೆ ಹೊಡೆದಿದೆ. ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ, ಕಾಜೋಲ್ ಶಾರುಖ್ ಜೊತೆಗಿನ ತನ್ನ ನಿರಂತರ ಸಹಯೋಗದ ಬಗ್ಗೆ ಮನಬಿಚ್ಚಿ ಹಂಚಿಕೊಂಡರು. ತಮ್ಮ ಮೊದಲ ಚಿತ್ರದ ಸಮಯದಲ್ಲಿ ಅವರ ಸ್ನೇಹ ಅರಳಿತು ಮತ್ತು ಮುಂದಿನ ವರ್ಷಗಳಲ್ಲಿ ಹಾಗೆಯೇ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ. ಕಾಜೋಲ್ ತಮ್ಮ ಕೆಲಸದ ಸಂಬಂಧ ಪರಿಪೂರ್ಣ ಸಮತೋಲನ ಹೊಂದಿದೆ ಎಂದು ಹೇಳಿಕೊಂಡಿದ್ದು, ಈ ಸ್ನೇಹದ ಪಯಣ ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಮೊದಲ ಬಾರಿಗೆ ಪಠಾಣ್ ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದಾರೆ ಮತ್ತು ಯಶ್ ರಾಜ್ ಫಿಲ್ಮ್ಸ್ ಬಂಡವಾಳ ಹೂಡಿಕೆ ಮಾಡಿದೆ. ಇದು YRF ಸ್ಪೈ ಯೂನಿವರ್ಸ್‌ನಲ್ಲಿ ನಾಲ್ಕನೇ ಕಂತು ಮತ್ತು ಝೀರೋ (2018) ನಂತರ ಖಾನ್ ಅವರ ಪುನರಾಗಮನದ ಚಿತ್ರವಾಗಿದೆ. ಚಲನಚಿತ್ರ ತಮಿಳು ಮತ್ತು ತೆಲುಗಿನಲ್ಲಿ ಕೂಡ ಡಬ್ಬಿಂಗ್ ಆವೃತ್ತಿಯಲ್ಲಿ ಜನವರಿ 25, 2023 ರಂದು ಬಿಡುಗಡೆಯಾಗಿ ಹೆಸರು ಮಾಡಿದೆ.

Leave a Reply