ಆತ್ಮವಿಶ್ವಾಸ, ಸ್ವಾಭಿಮಾನ, ಶ್ರದ್ದೆಯಿಂದ ಕೆಲಸ ಮಾಡಬೇಕು: ಎಸ್.ಸುರೇಶ್ ಕುಮಾರ್

4 years ago

ಬೆಂಗಳೂರು: ಬೃಹತ್ ಉದ್ಯೋಗ ಮೇಳದಲ್ಲಿ ಎಸ್.ಎಸ್.ಎಲ್.ಸಿ., ವಿವಿಧ ಪದವಿ, ಡಿಪ್ಲೋಮೊಗಳ ಉದ್ಯೋಗಕ್ಷಾಂಕಿ ಯುವಕ, ಯುವತಿಯರಿಗೆ ಪ್ರತಿಷ್ಟಿತ Quess corp Ltd ಸಂಸ್ಥೆಯ ಸಹಯೋಗದಲ್ಲಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗ ನೀಡುವ ಬೃಹತ್ ಉದ್ಯೋಗ ಮೇಳವಾಗಿದೆ ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ವಿಶೇಷವಾಗಿ ವಿಕಲಚೇತನರು ಮತ್ತು ತೃತೀಯ ಲಿಂಗಿಗಳಿಗೆ ಉದ್ಯೋಗ ಮೇಳದಲ್ಲಿ ಉದ್ಯೋಗ ನೀಡುವ ಸುರ್ವಣಾವಕಾಶವಿದೆ. ಉದ್ಯೋಗ ಮೇಳದಲ್ಲಿ ಕೊಪ್ಪಳ, ಬಳ್ಳಾರಿ, ಕುಂದಾಪುರ, ಹಾವೇರಿ, ತಿಪಟೂರು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿರುವುದು ಸಂತೋಷದ ಸಂಗತಿ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ 9ನೇ ತರಗತಿಯಿಂದ ಕೌಶಲ್ಯಭಿವೃದ್ದಿ ತರಬೇತಿ ನೀಡಲಾಗುತ್ತಿದೆ. ಯಾವ ಕೆಲಸ ಚಿಕ್ಕದಲ್ಲ, ಯಾವ ಕೆಲಸವು ದೊಡ್ಡದಲ್ಲ. ಅರ್ಹತೆ ತಕ್ಕಂತೆ ಕೆಲಸ ಸ್ವಾಭಿಮಾನದಿಂದ ಮಾಡಬೇಕು. ಆತ್ಮವಿಶ್ವಾಸದಿಂದ, ಶ್ರದ್ದೆಯಿಂದ ಕೆಲಸ ಮಾಡಬೇಕು. ಕೌಶಲ್ಯಭಿವೃದ್ದಿಯಲ್ಲಿ ಹೆಚ್ಚು ಅವಕಾಶವಿದೆ ಎಂದರು.

ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಮಾತನಾಡಿ, ಉದ್ಯೋಗ ಮೇಳದಿಂದ ಬಹಳ ಸುಲಭವಾಗಿ ಉದ್ಯೋಗ ಲಭಿಸಲಿದೆ. ಕೌಶಲ್ಯಭಿವೃದ್ದಿ ತರಬೇತಿ ಕೇಂದ್ರ ಸ್ಥಾಪಿಸಲಾಗಿದೆ. ಇದರಿಂದ ಲಕ್ಷಾಂತರ ಜನ ತರಬೇತಿ ಪಡೆದಿದ್ದಾರೆ. ಮೇಕ್ ಇನ್ ಇಂಡಿಯ ಮೂಲಕ ಲಕ್ಷಾಂತರ ಜನರಿಗೆ ಸ್ವಯಂ ಉದ್ಯೋಗ ಲಭಿಸಿದೆ. ಮುದ್ರಾ ಯೋಜನೆ ಸುಲಭ ಸೌಲಭ್ಯ ದೊರಕಿದೆ. ದೇಶ ಇಂದು ಆರ್ಥಿಕ ಪ್ರಗತಿಯತ್ತ ಸಾಗುತ್ತಿದೆ ಎಂದರು.

ಮಾಜಿ ಮೇಯರ್ ರಂಗಣ್ಣ, ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಣ್ಣ, ದೀಪಾ ನಾಗೇಶ್, ಪ್ರತಿಭಾ, ರವೀಂದ್ರನ್, ಬಿ.ಎನ್.ಶ್ರೀನಿವಾಸ್, ಸತೀಶ್ ಭಗವಾನ್, ಗಂಗಾಧರ್ (ಗೂಳಿ), ಕೇಶವ್, ಕಿರಣ್, ವೆಂಕಟೇಶ್ ಬಾಬು, ಲಕ್ಷ್ಮೀನಾರಾಯಣ್, ಮಂಗಲ್ ರಾಜ್, ಸಂಜಯ್, ರಾಘವೇಂದ್ರ ರಾವ್, Quess ಸಂಸ್ಥೆಯ ರಾಜೀವ್ ಶಾಯಿ, ಗುರುಪ್ರಸಾದ್, ಹರಿಪ್ರಸಾದ್, ಆರ್.ಪಿ.ಎ. ಶಾಲೆಯ ಪ್ರಾಂಶುಪಾಲ ಧನಂಜಯ ಮೊದಲಾದವರು ಹಾಜರಿದ್ದರು.

Leave a Reply