ಚಿನ್ನದ ಅಭರಣಗಳಿಂದ ಮಹಿಳೆಯರ ಸೌಂದರ್ಯ ವೃದ್ಧಿ: ಹರ್ಷಿಕಾ ಪೂಣಚ್ಚ

4 years ago

ಬೆಂಗಳೂರು: ಏಷ್ಯಾ ಜ್ಯುವೆಲ್ಸ್ ವತಿಯಿಂದ ಅರಮನೆ ಮೈದಾನ ಗಾಯಿತ್ರಿ ವಿಹಾರ ಸಭಾಂಗಣದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಏಷ್ಯಾ ಜ್ಯುವೆಲ್ಸ್ -2022ಪ್ರದರ್ಶನ ಮತ್ತು ಜುಲೈ 29,30,31ರಂದು ಮಾರಾಟ ಮೇಳವನ್ನು ಮೂರು ದಿನಗಳ ಕಾಲ ನಡೆಯಲಿದೆ.

ಏಷ್ಯಾ ಜ್ಯುವೆಲ್ಸ್ ವತಿಯಿಂದ ವರಮಹಾಲಕ್ಷ್ಮೀ ಹಬ್ಬದ ಮೂರು ದಿನಗಳ ಕಾಲ ಜರುಗುವ ಭಾರತೀಯ ಪಾರಂಪರಿಕ ಅಭರಣ ಮೇಳವನ್ನು ಚಲನಚಿತ್ರ ಹರ್ಷಿಕಾ ಪೂಣ್ಣಚ್ಚ ಮತ್ತು ಖ್ಯಾತ ರೂಪದರ್ಶಿಯರು ಉದ್ಘಾಟನೆ ಮಾಡಿದರು.

ಇದೇ ಸಂದರ್ಭದಲ್ಲಿ ಚಲನಚಿತ್ರ ನಟಿ ಹರ್ಷಿಕಾ ಪೂಣ್ಣಚ್ಚ ಮಾತನಾಡಿ, ಚಿನ್ನದ ಅಭರಣಗಳು ಮಹಿಳೆಯರ ಸೌಂದರ್ಯ ಹೆಚ್ಚಿಸುತ್ತವೆ ಮತ್ತು ಚಿನ್ನದ ಮೌಲ್ಯವು ಪ್ರತಿ ದಿನ ವೃದ್ಧಿಸುತ್ತಾ ಹೋಗುತ್ತದೆ. ಕಳೆದ ಎರಡು ವರ್ಷಗಳಿಂದ ಕೊರೋನ ಕಾರಣದಿಂದ ಮಹಿಳೆಯರಿಗೆ ಹಬ್ಬ ಆಚರಿಸಲು, ಶಾಪಿಂಗ್ ಅನಾನುಕೂಲವಾಗಿತ್ತು ಎಂದರು.

 

ಇದೀಗ ದೇಶದ ಅತಿ ಡೊಡ್ಡ ಏಷ್ಯಾ ಜ್ಯುವೆಲ್ಸ್ ಪ್ರದರ್ಶನ, ಮಾರಾಟ ಮೂರು ದಿನಗಳ ಕಾಲ ನಡೆಯಲಿದೆ. ವರಮಹಾಲಕ್ಷ್ಮೀ ಹಬ್ಬ, ಮುಂಬರುವ ಹಬ್ಬಗಳಿಗೆ ಮಹಿಳೆಯರು ಅಭರಣಗಳನ್ನು ಖರೀದಿಸಲು ಸೂಕ್ತ ಸ್ಥಳವಾಗಿದೆ ಎಂದರು.
ದಕ್ಷಿಣ ಭಾರತ, ಗುಜರಾತ್, ರಾಜಸ್ಥಾನ್ ಮತ್ತು ಬೆಂಗಾಲಿ ಭಾರತೀಯ ಪಾರಂಪರಿಕ ಶೈಲಿಯ ಹಾಗೂ ನವೀನವನ ವಿನ್ಯಾಸದ ಚಿನ್ನದ ಅಭರಣಗಳು,ವಜ್ರ,ಪ್ಲಾಟಿನಂ ಮತ್ತು ಬೆಳ್ಳಿ ವಸ್ತುಗಳು ಏಷ್ಯಾ ಜ್ಯುವೆಲ್ಸ್ ಶೋ ನಲ್ಲಿ ಏರ್ಪಡಿಸಲಾಗಿದೆ ಎಂದರು.

ಭಾರತದ ಪ್ರತಿಷ್ಟಿತ 100ಕ್ಕೂ ಹೆಚ್ಚು ಅಭರಣ ತಯಾರಕರು, ಮಾರಾಟಗಾರರು ಮೇಳದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

Leave a Reply