ಆಕರ್ಷಕ, ವೈವಿಧ್ಯಮಯ ಜ್ಯುವೆಲರಿ ಶೋ

5 years ago

ಬೆಂಗಳೂರು: ಮಹಿಳೆಯರಿಗೆ ಆಭರಣಗಳೆ ಶೃಂಗಾರ ಮದುವೆ ಇರಲಿ, ಹಬ್ಬದ ದಿನಗಳಲ್ಲಿ ಆಭರಣಗಳನ್ನ ಖರೀದಿ ಮಾಡುವುದು ಸಾಮಾನ್ಯ. ವಿವಿಧ ಬಗೆಯ ಮತ್ತು ವೈವಿಧ್ಯ ಶೈಲಿಯ ಮನಮೋಹಕ ಆಭರಣ ಪ್ರದರ್ಶನವಿದೆ. ಮಹಿಳೆಯರು ತಮಗೆ ಇಷ್ಟವಾದ ಆಭರಣಗಳನ್ನು ಖರೀದಿ ಮಾಡಬಹುದು ಎಂದು ವರನಟ ಡಾ. ರಾಜ್ ಪುತ್ರಿ ಲಕ್ಷ್ಮಿ ಗೋವಿಂದರಾಜ್ ಹೇಳಿದರು.

ತಾಜ್ ವೆಸ್ಟ್ ಎಂಡ್ ಹೋಟೆಲ್ ಸಭಾಂಗಣದಲ್ಲಿ ಆಕರ್ಷಕ, ವೈವಿಧ್ಯಮಯ ಆಭರಣಗಳ ಪ್ರದರ್ಶನ ಮತ್ತು ಮಾರಾಟವನ್ನು ದ ಜ್ಯುವೆಲರಿ ಷೋ ಏರ್ಪಡಿಸಿತ್ತು.

ಚಲನಚಿತ್ರ ನಟಿ ಕಾರುಣ್ಯ ರಾಮ್ ಮಾತನಾಡಿ, ದೇಶದ ವಿವಿಧ ರಾಜ್ಯಗಳಿಂದ ಆಭರಣ ಮಳಿಗೆ ಬೆಂಗಳೂರು ನಗರಕ್ಕೆ ಆಗಮಿಸಿ ಪ್ರದರ್ಶನ ಮತ್ತು ಮಾರಾಟ ಮಾಡಲಾಗುತ್ತಿದೆ. ಆಕರ್ಷಕ, ವೈವಿಧ್ಯಮಯ ಆಭರಣಗಳನ್ನ ಮಹಿಳೆಯರು ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂದರು.

ಪಲ್ಲವಿ ಸಿ.ಟಿ.ರವಿ ಅವರು ಮಾತನಾಡಿ, ಮಹಿಳೆಯರಿಗೆ ಚಿನ್ನದ ಆಭರಣಗಳು ಎಂದರೆ ಅಚ್ಚುಮೆಚ್ಚು. ಕಳೆದ ಎರಡು ವರ್ಷಗಳಿಂದ ಕೊರೋನ ಕಾರಣದಿಂದ ಆಭರಣ ಖರೀದಿ ಮಾಡಲು ಆಗಿಲ್ಲ. ಇದೀಗ ಹಬ್ಬಗಳು ಬರುತ್ತಿವೆ. ಮಹಿಳೆಯರು ಆಭರಣಗಳ ಖರೀದಿ ಮಾಡಲು ಸುರ್ವಣಾವಕಾಶ ಎಂದರು.

ಗೋಲ್ಡನ್ ಕ್ರೀಪರ್ ಸಂಸ್ಥೆಯ ಜಗದೀಶ್ ಮಾತನಾಡಿ, ಹೆಸರಾಂತ ಆಭರಣ ಮಳಿಗೆಗಳು ಭಾಗವಹಿಸಲಿರುವ ಈ ಮೇಳದಲ್ಲಿ ವಿಶೇಷ ವಿನ್ಯಾಸಗಳನ್ನೊಳಗೊಂಡ ಆಭರಣಗಳನ್ನು ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿದೆ. ಎಲ್ಲಾ ಚಿನ್ನದ ಆಭರಣಗಳು BIS ಹಾಲ್ ಮಾರ್ಕ್ ಹೊಂದಿರುತ್ತವೆ. ವಜ್ರಾಭರಣಗಳು ಅಂತರರಾಷ್ಟ್ರೀಯ ಗುಣಮಟ್ಟದ GIA/IGI ಪ್ರಮಾಣಿತ ಹೊಂದಿರುತ್ತವೆ. ಆವರಣ ಮಳಿಗೆಗಳ ಸದಸ್ಯರು, ಚಿನ್ನಾಭರಣ ಮತ್ತು ವಜ್ರಾಭರಣದ ಬಗ್ಗೆ ಎಲ್ಲಾ ತರದ ಉಚಿತ ಮಾಹಿತಿಯನ್ನು ನೀಡುತ್ತಾರೆ ಎಂದರು.

ಖರೀದಿದಾರರು ಹಳೇ ಚಿನ್ನವನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ. ಮೇಳದ ನಂತರವೂ ಗ್ರಾಹಕರಿಗೆ ಆಭರಣಗಳಿಗೆ ಸಂಬಂಧಿಸಿದ ಸೇವೆಯನ್ನು ಒದಗಿಸಲಾಗುವುದು, ಬೆಂಗಳೂರಿನ ಸುತ್ತಮುತ್ತಲಿನ ಜನರ ಅಭಿರುಚಿಯನ್ನು ಅರಿತು ಅವರ ಇಚ್ಛೆಗನುಗುಣವಾಗಿ ಆಭರಣಗಳನ್ನು ತಯಾರಿಸಲಾಗಿದೆ. ಮುಂದಿನ ದಿನಗಳಲ್ಲಿ ಬರುವಂತಹ ಹಬ್ಬ ಹರಿದಿನಗಳಿಗೆ ಹಾಗೂ ಮದುವೆ ಸಮಾರಂಭಗಳಿಗೆ ಆಭರಣ ಖರೀದಿಸಲು ಒಂದೇ ವೇದಿಕೆಯಲ್ಲಿ ಭಾರತದ 40 ಹೆಸರಾಂತ ಆಭರಣ ಮಳಿಗೆಗಳು ಕಣ್ಣುಗಳಿಗೆ ರಸದೌತಣ ನೀಡಲಿವೆ ಎಂದರು.

ನಿರ್ಮಾಪಕ ಗೋವಿಂದರಾಜು, ಹೇಮಾ ಜಗದೀಶ್ ಹಾಗೂ ಮಹಿಳಾ ಉದ್ಯಮಿ ಲಾವಣ್ಯ ಕೆ.ಬಂಗಾರಪ್ಪ, ವೈದ್ಯೆ ಶೃತಿ ಚೇತನಗೌಡ, ಸ್ವಪ್ನಾ ರೆಡ್ಡಿ, ಮಹಿಳಾ ಉದ್ಯಮಿ ದೀಕ್ಷಾ, ದೀಪಾ ರಾವ್, ರಶ್ಮಿ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.

Leave a Reply