ಕೊನೆ ಗಳಿಗೆಯಲ್ಲಿ 13 ಅಭ್ಯರ್ಥಿಗಳ 4ನೇ ಪಟ್ಟಿ ಪ್ರಕಟಿಸಿದ ಜೆಡಿಎಸ್

3 years ago

ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಕೊನೆಯ ಗಂಟೆಯವರೆಗೆ ರಣತಂತ್ರ ರೂಪಿಸಿದ ಜೆಡಿಎಸ್ ಕೊನೆಯ ಗಳಿಗೆಯಲ್ಲಿ 13 ಅಭ್ಯರ್ಥಿಗಳ 4ನೇ ಪಟ್ಟಿಯನ್ನು ಪ್ರಕಟಿಸಿದೆ. ಎಂದಿನಂತೆ ವಲಸಿಗರಿಗೆ ಮಣೆ ಹಾಕಲಾಗಿದೆ.

ಇಂದು ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಶಾಸಕ ಮೊಹಿನ್ ಉದ್ದೀನ್ ಭಾವಾ ಅವರನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ.

ಈಗಾಗಲೇ ಮೂರು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮೊದಲ ಪಟ್ಟಿಯಲ್ಲಿ 93 , ಎರಡನೇ ಪಟ್ಟಿಯಲ್ಲಿ 49 ಹಾಗೂ ಮೂರನೇ ಪಟ್ಟಿಯಲ್ಲಿ 59 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು.
224 ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಬಾಹ್ಯ ಬೆಂಬಲ ಸೂಚಿಸಲಾಗಿದ್ದು, ಮೊದಲೆರಡು ಪಟ್ಟಿಯಲ್ಲಿ ಪ್ರಕಟಿಸಲಾಗಿದ್ದ 12 ಕ್ಷೇತ್ರಗಳ ಅಭ್ಯರ್ಥಿಗಳನ್ನು ಬದಲಾವಣೆ ಮಾಡಿ ಬಹುತೇಕ ಅನ್ಯ ಪಕ್ಷಗಳಿಂದ ವಲಸೆ ಬಂದವರಿಗೆ ಟಿಕೆಟ್ ನೀಡಲಾಗಿದೆ.

ನಾಲ್ಕನೇ ಪಟ್ಟಿ:
ಗೋಕಾಕ್ – ಚಂದನ್‍ಕುಮಾರ್
ಕಿತ್ತೂರು – ಅಶ್ವಿನಿ ಸಿಂಗಯ್ಯ ಪೂಜೇರಾ
ಯಾದಗಿರಿ- ಎ.ಬಿ.ಮಾಲಕರೆಡ್ಡಿ
ಭಾಲ್ಕಿ – ರೌಫ್ ಪಟೇಲ್
ಶಿಗ್ಗಾವ್- ಶಶಿಧರ್ ಚನ್ನಬಸಪ್ಪ ಯಲಿಗಾರ
ಮೊಳಕಾಲ್ಮೂರು -ಮಹದೇವಪ್ಪ
ಪುಲಿಕೇಶಿನಗರ – ಅನುರಾಧ
ಶಿವಾಜಿನಗರ – ಅಬ್ದುಲ್ ಜಫರ್ ಅಲಿ
ಶಾಂತಿನಗರ- ಮಂಜುನಾಥ್ ಗೌಡ
ಬೆಳ್ತಂಗಡಿ- ಅಶ್ರಫ್ ಅಲಿ
ಬಂಟ್ವಾಳ -ಪ್ರಕಾಶ್ ರಫಾಯಲ್ಸ್ ಗೊಮ್ಸ್
ಮಂಗಳೂರು- ಅಲ್ತಾಫ್ ಕುಂಪಾಲ

Leave a Reply