ಬಾಲಕನ ಕಣ್ಣಿನ ದೋಷಕ್ಕೆ ಸಹಾಯ
4 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಉಚಿತ ಡಯಾಲಿಸಿಸ್ ಚಿಕಿತ್ಸೆ ಪಡೆಯಲು ನೆರವಾದ ವಲರ್ ಮಣಿ
ಬೆಂಗಳೂರು: ರಾಜಾಜಿನಗರ ಶಾಸಕರ ಜನಸಂಪರ್ಕ ಕಛೇರಿಯಲ್ಲಿ ರಾಜಾಜಿನಗರ ಶಾಸಕ ಎಸ್.ಸುರೇಶ್ ಕುಮಾರ್ ಜನರೊಂದಿಗೆ ಜನಸೇವಕ 9ನೇ ವಾರದ ಜನಸ್ಪಂದನೆ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಉಪಮೇಯರ್ ರಂಗಣ್ಣ, ಪಾಲಿಕೆ ಮಾಜಿ ಸದಸ್ಯರಾದ ಎಮ್.ಮುನಿರಾಜು, ಹೆಚ್.ಕೃಷ್ಣಪ್ಪ, ಹೆಚ್.ವಿಜಯಕುಮಾರ್, ದೀಪಾ ನಾಗೇಶ್, ಪ್ರತಿಮಾ ಮೊದಲಾದವರು ಉಪಸ್ಥಿತರಿದ್ದರು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಕುಡಿಯುವ ನೀರು ಸರಬರಾಜು, ಬೀದಿ ದೀಪ, ಪಿ.ಜಿ.ಹಾಸ್ಟಲ್ ಸಮಸ್ಯೆ, ಕಸ ವಿಲೇವಾರಿ ಹಾಗೂ ಫುಟ್ ಪಾತ್ ಒತ್ತುವರಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತ ನಾಗರಿಕರ ಅಹವಾಲು ಆಲಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಸುರೇಶ್ ಕುಮಾರ್, ಪ್ರತಿ ಸೋಮವಾರ ನಾಗರಿಕರರೊಂದಿಗೆ ಜನಸ್ಪಂದನಾ ಕಾರ್ಯಕ್ರಮದಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿದೆ. ಮನೆಯಿಂದ ಬರಲು ಸಾಧ್ಯವಾಗದಿದ್ದರೆ ಪೋನ್ ಕರೆ ಮಾಡಿ ಸಮಸ್ಯೆ ಹೇಳಬಹುದು ಎಂದರು.
ಶಾಲೆಯ ರಜಾದಿನದಲ್ಲಿ ಬೀದಿಯಲ್ಲಿ ಊದಿನ ಕಡ್ಡಿ ಮಾರುತ್ತಿದ್ದ 8ನೇ ತರಗತಿಯ ವಿದ್ಯಾರ್ಥಿಯ ಜೊತೆಯಲ್ಲಿ ಮಾತನಾಡಿದೆ. ಅವನ ಶಿಕ್ಷಣಕ್ಕೆ ಬೇಕಾದ ಸಹಾಯ ಮತ್ತು ಬಾಲಕನ ದೃಷ್ಟಿ ದೋಷವಿರುವುದರಿಂದ ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಬೇಕು, ನಾಳೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೇಸಿಗೆ ಕಾಲ ನೀರಿನ ಸಮಸ್ಯೆ ಹೆಚ್ಚಾಗುತ್ತಿದೆ. ನಾಗರಿಕರು ಅಮೂಲ್ಯವಾದ ನೀರನ್ನು ಮಿತವಾಗಿ ಬಳಸಿ ಎಂದು ಮನವಿ ಮಾಡಿದರು.
ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿರುವುದರಿಂದ ಸಮಿತಿಯಲ್ಲಿ ಶಾಸಕರು ಭಾಗವಹಿಸಲು ಆಗುವುದಿಲ್ಲ. ಇದರಿಂದ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ. ವಿಧಾನಸಭೆಯ ಸಭಾಪತಿಗಳು ಪುನರ್ ಪರಿಶೀಲನೆ ಮಾಡಿ ಅಮಾನತು ಆದೇಶ ಹಿಂಪಡೆಯಬೇಕು, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದರು.
ಮಂಡಲ ಬಿಜೆಪಿ ಅಧ್ಯಕ್ಷ ಸುದರ್ಶನ್, ಬಿಜೆಪಿ ಮುಖಂಡರಾದ ಕಾಮಧೇನು ಸುರೇಶ್, ಕೇಶವಮೂರ್ತಿ, ವಿಶ್ವನಾಥ್, ಟಿ.ಎನ್.ರಮೇಶ್, ಸತೀಶ್ ಭಗವಾನ್, ಯಶಸ್ ನಾಯಕ್, ಅಮಿತ್ ಜೈನ್, ಕಿರಣ್ ಕೃಷ್ಣಮೂರ್ತಿ, ವೆಂಕಟೇಶ್ ಬಾಬು, ಮಂಜುನಾಥ್, ಪುಟ್ಟ, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಜರಿದ್ದರು.








