ಬೆಂಗಳೂರು: ‘ಜನ ಸ್ಪಂದನೆ’ ಎನ್ನುವುದಕ್ಕೆ ಅರ್ಥ ಗೊತ್ತಿದೆಯೇ BJP Karnataka ಸರ್ಕಾರಕ್ಕೆ? ಅತಿವೃಷ್ಟಿಯ ಸಂತ್ರಸ್ತರು ಮನೆ, ಬೆಳೆ, ಬದುಕು ಎಲ್ಲವನ್ನೂ ಕಳೆದುಕೊಂಡು ವೇದನೆ ಅನುಭವಿಸಿಸುತ್ತಿದ್ದಾರೆ, ಜನರ ನೋವನ್ನು ನಿರ್ಲಕ್ಷಿಸಿದ ಸರ್ಕಾರ ಮಾಡಲು ಹೊರಟಿರುವುದು ಜನಸ್ಪಂದನ ಸಮವೇಶವಲ್ಲ, ಅದು “ಜನವೇದನ” ಸಮಾವೇಶ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದೆ.
ದೊಡ್ಡಬಳ್ಳಾಪುರದ ದೇವನಹಳ್ಳಿಯಲ್ಲಿ ಬಿಜೆಪಿ ನಡೆಸುತ್ತಿರುವ ಜನಸ್ಪಂದನ ಯಾತ್ರೆ ಕುರಿತು ತಕರಾರು ತೆಗೆದಿರುವ ಕೆಪಿಸಿಸಿ, #PuppetCM ಆಡಳಿತದಲ್ಲಿ ಹೊರಬಂದ PSI ಹಗರಣವೇ ನಿಮ್ಮ ಸಾಧನೆಯೇ BJP Karnataka? ಎಂದು ಪ್ರಶ್ನಿಸಿದೆ.
ಸಿಎಂ Basavaraj Bommai ಅವರೇ, PSI ಅಕ್ರಮದಲ್ಲಿ ನಿಮ್ಮ ಸಂಪುಟ ಸಚಿವರು, ಶಾಸಕರ ಕೈವಾಡ ಬಯಲಾದರೂ ಕಣ್ಮುಚ್ಚಿ ಕುಳಿತಿರುವುದನ್ನು, 54,000 ಯುವಕರಿಗೆ ಮೋಸ ಮಾಡಿದ್ದನ್ನು ಸಾಧನೆ ಎಂದು ‘ಜನವೇದನ’ ಸಮಾವೇಶದಲ್ಲಿ ಹೇಳಿಕೊಳ್ಳುವಿರಾ? ರಾಜ್ಯದ 54 ಸಾವಿರ PSI ಅಭ್ಯರ್ಥಿಗಳಿಗೆ ವಂಚಿಸಿದ ಗೃಹ ಸಚಿವ @JnanendraAraga ಅವರದ್ದು ಯಾವ ಸಾಧನೆ? ಎಂದು ಕೇಳಿದೆ.
ತಮ್ಮ ಕಛೇರಿಯೇ ಅಕ್ರಮದ ಅಡ್ಡೆಯಾಗಿದ್ದರೂ ಸದನದಲ್ಲಿ ಸುಳ್ಳು ಹೇಳಿ ನಾಡಿನ ದಿಕ್ಕು ತಪ್ಪಿಸಲು ಯತ್ನಿಸಿದ ಗೃಹಸಚಿವರದ್ದು ‘ಜನಸ್ಪಂದನೆ’ಯ ಸಾಧನೆಯೇ @BJP4Karnataka? ಈ ವಂಚನೆಯನ್ನು ಸಮಾವೇಶದಲ್ಲಿ ಹೇಳುವಿರಾ? ಎಂದು ಕೇಳಿದೆ.
ಒಂದೆಡೆ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ನಮ್ಮದು ಪಾರದರ್ಶಕ ತನಿಖೆ ಎನ್ನುತ್ತಾರೆ ಸಿಎಂ. ಇನ್ನೊಂದೆಡೆ PSI ಅಕ್ರಮದಲ್ಲಿ ಸಚಿವ Dr. Ashwath Narayan ತಮ್ಮ ಸಹೋದರರೊಂದಿಗೆ ಸೇರಿ ಅಕ್ರಮ ನಡೆಸಿದ ಸಂಗತಿ ಬೆಳಕಿಗೆ ಬಂದರೂ ಸಚಿವರ ತನಿಖೆ ಇಲ್ಲ. ಪ್ರಕರಣ ಮುಚ್ಚಿಹಾಕಲು ಯತ್ನಿಸುವುದೇ ನಿಮ್ಮ ಸಾಧನೆಯೇ BJP Karnataka? ಎಂದು ಕೇಳಿದೆ.
ರಾಜ್ಯದ ಇತಿಹಾಸದಲ್ಲೇ ಎಡಿಜಿಪಿಯೊಬ್ಬರು ಅಕ್ರಮದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದು ಇದೇ ಮೊದಲು. ಉನ್ನತ ಮಟ್ಟದ ಅಧಿಕಾರಿಗಳು ಸರ್ಕಾರ ಹಾಗೂ ಮಂತ್ರಿಗಳು ಸಹಕಾರವಿಲ್ಲದೆ ಅಕ್ರಮವನ್ನು ನಡೆಸಲು ಸಾಧ್ಯವೇ ಇಲ್ಲ. ಮಂತ್ರಿಗಳ ವಿಚಾರಣೆ ನಡೆಸದೆ ಭ್ರಷ್ಟರನ್ನು ರಕ್ಷಿಸಿರುವುದೇ BJP Karnataka ಸರ್ಕಾರದ ಸಾಧನೆ ಎಂದಿದೆ.
PSI ಹಗರಣದಲ್ಲೂ #VijayendraServiceTax ಮುಂದುವರೆದಿದೆ. ಸ್ವತಃ ಬಿಜೆಪಿ ಶಾಸಕ ಯತ್ನಾಳ್ ಪರೋಕ್ಷವಾಗಿ ಈ ಸಂಗತಿಯನ್ನು ಬಹಿರಂಗಪಡಿಸಿದರೂ ತನಿಖೆಯಾಗುವುದಿಲ್ಲ. Vijayendra Yeddyurappa ಅವರಿಗೆ ತಮ್ಮ ತಂದೆಯ ಆಡಳಿತದಲ್ಲಿ ಸಿಕ್ಕ “ಸೂಪರ್ ಸಿಎಂ” ಹುದ್ದೆ ನಿಮ್ಮ ಅವಧಿಯಲ್ಲೂ ಮುಂದುವರೆದಿದೆಯೇ Basavaraj Bommai ಅವರೇ? ಎಂದು ಕೇಳಿದೆ.
ರಾಜ್ಯದ ಜನತೆಗೆ ಯಾವ ಸಾಧನೆ, ಯೋಜನೆ, ಸ್ಪಂದನೆ ಮಾದಿದ್ದರೆಂದು ಸರ್ಕಾರ ಸಮಾವೇಶ ಮಾಡುತ್ತಿದೆ? BJP Karnataka ಸರ್ಕಾರ ಕರ್ನಾಟಕದ ಜನತೆಗೆ, ಕನ್ನಡ ನಾಡುನುಡಿಗೆ ಮಾಡಿದ್ದು ಬಿಟ್ಟರೆ ಬೇರೇನು ಮಾಡಿದೆ? ಎಂದು ಕೇಳಿದೆ.
ಪಠ್ಯಪುಸ್ತಕ ಪರಿಷ್ಕರಣೆ ಹೆಸರಲ್ಲಿ ನಾಡಿನ ಸಾಹಿತಿಗಳಿಗೆ ಅವಮಾನಿಸಿದ್ದೇ ನಿಮ್ಮ ಸಾಧನೆಯೇ Basavaraj Bommai ಅವರೇ #PuppetCM ಅವರ ಒಂದು ವರ್ಷದ ವಾರ್ಷಿಕೋತ್ಸವಕ್ಕೆ ಸಜ್ಜಾಗಿರುವ ಸರ್ಕಾರ ತಮ್ಮ ಸಾಧನೆ ಏನು ಎಂದು ನಾಡಿನ ಜನತೆಗೆ ಉತ್ತರಿಸಬೇಕು ಎಂದಿದೆ.
ಪಠ್ಯಪುಸ್ತಕಗಳಲ್ಲಿ ಅವಾಂತರ ಸೃಷ್ಟಿಸಿದ ಸರ್ಕಾರ ಇನ್ನೂ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ ವಿತರಣೆ ಮಾಡಲಾಗಲಿಲ್ಲ. ದೇಶದ್ರೋಹಿಗಳನ್ನು ದೇಶಭಕ್ತರನ್ನಾಗಿ ಬಿಂಬಿಸಿದ್ದೇ ಸಾಧನೆಯೇ? ಎಂದು ಕೇಳಿದೆ.
ಸಾಹಿತ್ಯವನ್ನೇ ಅರಿಯದ, ಸುಳ್ಳು ಹೇಳುವುದನ್ನು, ಇತಿಹಾಸ ತಿರುಚುವುದನ್ನು ಕಾಯಕ ಮಾಡಿಕೊಂಡಿರುವ ಬಿಜೆಪಿಯ ಬಾಡಿಗೆ ಭಾಷಣಕಾರನೂ ಮಕ್ಕಳ ಭವಿಷ್ಯ ರೂಪಿಸುವ ಪಠ್ಯದಲ್ಲಿ ಜಾಗ ಪಡೆದದ್ದಕ್ಕಿಂತ ದುರಂತ ಬೇರೊಂದಿಲ್ಲ. ಪಠ್ಯ ಪುಸ್ತಕ ರಚನೆಗೆ ಅಪ್ರಬುದ್ಧರನ್ನು ಕೂರಿಸಿ ಅವಾಂತರ ಎಬ್ಬಿಸಿದ್ದು ಸರ್ಕಾರದ ಮಹಾ ಸಾಧನೆಗಳಲ್ಲೊಂದು! ಎಂದಿದೆ.
ಮಹಿಳೆಯರಿಗೆ, ಶೋಷಿತರಿಗೆ ಅಕ್ಷರದ ದಾಸೋಹ ನಡೆಸಿದ, “ಅಕ್ಷರದವ್ವ” ಎಂದೇ ಖ್ಯಾತರಾದ ಸಾವಿತ್ರಿ ಬಾ ಪುಲೆ ಅವರ ಪಠ್ಯವನ್ನು ಕೈಬಿಟ್ಟ ಸರ್ಕಾರ ಪಠ್ಯಪುಸ್ತಕಗಳಲ್ಲಿ ಬುಲ್ ಬುಲ್ ಹಕ್ಕಿ ಹಾರಿಸುತ್ತಿದೆ! ಶಿಕ್ಷಣ ವಿರೋಧಿಯಾಗಿ ವರ್ತಿಸಿದ್ದು, ಮಹನೀಯರಿಗೆ ಅವಮಾನಿಸಿದ್ದು ನಿಮ್ಮ ಒಂದು ವರ್ಷದ ಸಾಧನೆಯೇ Basavaraj Bommai ಅವರೇ? ಎಂದು ಕೇಳಿದೆ.
ಮನುಜ ಮತ, ವಿಶ್ವ ಪಥ, ವಿಜ್ಞಾನ ದೃಷ್ಟಿ, ವಿಚಾರ ಬುದ್ದಿ ಇವು ನಮ್ಮ ಹೃದಯದ ನಿತ್ಯ ಮಂತ್ರಗಳಾಗಬೇಕು. – ಕುವೆಂಪು
ದ್ವೇಷ ಬಿತ್ತುವ, ಮೌಡ್ಯ ಸ್ಥಾಪಿಸುವ ಹುನ್ನಾರ ಹೊಂದಿರುವ ಬಿಜೆಪಿಗೆ ಕುವೆಂಪು ಅವರ ವಿಶ್ವಮಾನವ ತತ್ವಗಳು ಅಪಥ್ಯ. ಹಾಗಾಗಿಯೇ ಪಠ್ಯದಲ್ಲಿ ಕುವೆಂಪುರವರ ಘನತೆ ಕುಂದಿಸುವ ಕೆಲಸ ಮಾಡಿತ್ತು ಸರ್ಕಾರ ಎಂದಿದೆ.
ಕಳಬೇಡ ಎಂದವರು ಬಸವಣ್ಣ 40% ಕಳವು ಮಾಡುವುದು – ಬಿಜೆಪಿ
ಕೊಲಬೇಡ ಎಂದರು, ದ್ವೇಷ ಹರಡುವುದು – ಬಿಜೆಪಿ
ಹುಸಿಯ ನುಡಿಯಬೇಡ ಎಂದರು, ಸುಳ್ಳೇ ಜೀವಾಳ – ಬಿಜೆಪಿಗೆ
ಅನ್ಯರಿಗೆ ಅಸಹ್ಯಪಡಬೇಡ ಎಂದರು, ಕೋಮುದ್ವೇಷ ಹರಡುವುದು – ಬಿಜೆಪಿ
ಬಸ್ವತತ್ವ ವಿರೋಧಿಸುವ ಬಿಜೆಪಿಗೆ ಬಸವಣ್ಣನನ್ನು ಸಹಿಸಲು ಸಾಧ್ಯವೇ! ಎಂದಿದೆ.
ಜಾತಿ, ಮತ, ಪಂಥಗಳು ಅದೆಷ್ಟೇ ದ್ವೇಷದ ಗೋಡೆಗಳನ್ನು ಎಬ್ಬಿಸಿದರೂ ನಾವೆಲ್ಲರೂ ಸಹೋದರ ಸಮಾನರು ಎಂಬುದೇ ಸತ್ಯ. – ಶ್ರೀ ನಾರಾಯಣ ಗುರು
ಜಾತಿ, ಧರ್ಮಗಳನ್ನು ಒಡೆದಾಳುವ ಇರಾದೆ ಹೊಂದಿದ ಬಿಜೆಪಿಗೆ ನಾರಾಯಣ ಗುರುಗಳ ತತ್ವಗಳು ತಡೆಗೋಡೆಯಂತೆ ಭಾಸವಾಗುವುದು ಸಹಜ. ಆ ಕಾರಣಕ್ಕಾಗಿಯೇ ಗುರುಗಳಿಗೆ ನಿರಂತರ ಅವಮಾನ ಮಾಡುತ್ತಿದೆ ಎಂದಿದೆ.
‘ಸಂವಿಧಾನ ರಚನೆಯನ್ನು ಅಂಬೇಡ್ಕರ್ರವರು ಮಾಡಿದ್ದಲ್ಲ’ ಎಂದು ಬಿಂಬಿಸುವುದು ಬಿಜೆಪಿಯ ಹಿಡನ್ ಅಜೆಂಡಾ. ಹಿಂದೆ ಶಿಕ್ಷಣ ಇಲಾಖೆಯ ಕೈಪಿಡಿಯಲ್ಲೂ ಈ ಪ್ರಯತ್ನ ಮಾಡಿ ಯೂ ಟರ್ನ್ ಹೊಡೆಯಲಾಗಿತ್ತು, ನಂತರ ಪಠ್ಯಪುಸ್ತಕದಲ್ಲೂ ಅದೇ ಪ್ರಯತ್ನ ಮುಂದುವರೆಸಿದೆ. ಎಷ್ಟಾದರೂ ಸಂವಿಧಾನ ಸುಟ್ಟವರ ಸಂತತಿಯಲ್ಲವೇ ಬಿಜೆಪಿಗರು ಎಂದಿದೆ.
“ಕುಡಿಯುವ ನೀರು ಒದಗಿಸಲೆಂದೇ ಪ್ರತ್ಯೇಕ ಸಚಿವಾಲಯ ಸ್ಥಾಪಿಸುತ್ತೇವೆ” ಎಂದಿದ್ದ ಬಿಜೆಪಿ ಮಾತು ಮರೆತಿದ್ದೇಕೆ? ಡಬಲ್ ಇಂಜಿನ್ ಸರ್ಕಾರವಿದ್ದರೂ ಬೆಂಗಳೂರಿನ ಕುಡಿಯುವ ನೀರಿನ ಸಲುವಾಗಿ ಮೇಕೆದಾಟು ಯೋಜನೆ ಜಾರಿಗೊಳಿಸಲು ಸಾಧ್ಯವಾಗದವರಿಗೆ ಸಚಿವಾಲಯ ಸ್ಥಾಪಿಸಲು ಸಾಧ್ಯವೇ! ಕೊಟ್ಟ ಮಾತು ಮರೆತಿದ್ದೇಕೆ BJP Karnataka? ಎಂದು ಕೇಳಿದೆ.
ಬಿಜೆಪಿ ಆಡಳಿತದಲ್ಲಿ ಸರ್ಕಾರದ ಸ್ಪಂದನೆ ಇಲ್ಲದೆ “ಜನರ ರೋಧನೆ” ನಡೆಯುತ್ತಿದೆ.
�ಸಚಿವರಾದ ಅರವಿಂದ್ ಲಿಂಬಾವಳಿ, ಮಾಧುಸ್ವಾಮಿಯಂತವರಿಂದ “ಜನರ ನಿಂದನೆ” ನಡೆಯುತ್ತಿದೆ.
ನೆರೆ, ಪ್ರವಾಹ, ಬೆಲೆ ಏರಿಕೆಯಂತವುಗಳಿಂದ “ಜನರ ವೇದನೆ” ನೋಡುತ್ತಿದ್ದೇವೆ.
ಬಿಜೆಪಿ ಸಮಾವೇಶಕ್ಕೆ “ಜನವೇದನೆ & ಜನರೋಧನೆ” ಹೆಸರುಗಳೇ ಸೂಕ್ತ.
ಸರ್ಕಾರ ಪರ್ಸೆಂಟೇಜ್ ಮೇಲೆ ನಡೆಯುತ್ತಿದೆಯೇ? ಗುತ್ತಿಗೆದಾರರು, ಜನಸಾಮಾನ್ಯರ ನಂತರ ಹೈಕೋರ್ಟ್ ಕೂಡ 40% ಸರ್ಕಾರದ ಪರ್ಸೆಂಟೇಜ್ ಬಗ್ಗೆ ಮಾತಾಡುತ್ತಿದೆ. Basavaraj Bommai ede, #BJPBrashtotsava ಇಂತಹ ನಾಚಿಕೆಗೇಡಿನ ಸಂಗತಿ ಎದುರಿಟ್ಟುಕೊಂಡು ಯಾವ ಪುರುಷಾರ್ಥಕ್ಕೆ ಸಮಾವೇಶ ನಡೆಸುತ್ತಿದ್ದೀರಿ? ಎಂದು ಕೇಳಿದೆ.
ನಾಡಿನ ಎದುರು ತಲೆ ತಗ್ಗಿಸಬೇಕಾದ ಸಮಯವಿದು. ಬಿಜೆಪಿ ನಡೆಸುತ್ತಿರುವುದು ಜನಸ್ಪಂದನ ಸಮವೇಶವಲ್ಲ “ಕಮಿಷನ್ ಸಮಾವೇಶ” 40% ಕಮಿಷನ್ ಲೂಟಿಯ ಪಾಪದ ಹಣದಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಯಾವ ಸಾಧನೆ ಹೇಳಿಕೊಳ್ಳುವಿರಿ Basavaraj ಅವರೇ? ಎಂದು ಪ್ರಶ್ನಿಸಿದೆ.
ನಿಮ್ಮದೇ ಪಕ್ಷದ ಕಾರ್ಯಕರ್ತ & ಗುತ್ತಿಗೆದಾರ ಸಂತೋಷ್ ಪಾಟೀಲ್ರನ್ನು ಕಮಿಷನ್ ಕಿರುಕುಳದಲ್ಲಿ ಕೊಂದಿದ್ದನ್ನು ಹೇಳಿಕೊಳ್ಳುವಿರಾ? ಗುತ್ತಿಗೆದಾರರು ಸರ್ಕಾರದ ಕಮಿಷನ್ ಕಿರುಕುಳದ ಬಗ್ಗೆ ಪ್ರಧಾನಿಗೆ ಪತ್ರ ಬರೆದರೂ ಪ್ರಯೋಜನವಿಲ್ಲ, ಪತ್ರಿಕಾಗೋಷ್ಠಿ ನಡೆಸಿದರೂ ಉಪಯೋಗವಿಲ್ಲ, 40% ಕಮಿಷನ್ ಲೂಟಿ ನಿಂತೇ ಇಲ್ಲ. ಭ್ರಷ್ಟಾಚಾರವನ್ನೇ ಉಸಿರಾಡುತ್ತಿರುವ ನಿಮ್ಮ ಸರ್ಕಾರದ ಸಾಧನೆ ಏನು Basavaraj Bommai ಅವರೇ? ಅಕ್ರಮಗಳನ್ನು ಮುಚ್ಚಿಕೊಳ್ಳುವುದೇ ಸಾಧನೆಯೇ? ಎಂದು ಕೇಳಿದೆ.
ಇತರೆಡೆಯ ಕಮಿಷನ್ 40% ಆದರೆ, ಬಿಬಿಎಂಪಿಯಲ್ಲಿ ಒಂದು ಹೆಜ್ಜೆ ಮುಂದೆ, ಇಲ್ಲಿ 50%. ಬಿಬಿಎಂಪಿಯ ಭ್ರಷ್ಟಾಚಾರದಲ್ಲಿ “ಸಮಪಾಲು ಸಮಬಾಳು” ಇರುವುದರಿಂದಲೇ ಇಂದು ಬೆಂಗಳೂರು ಮುಳುಗಿರುವುದು, ರಸ್ತೆಗಳು ಗುಂಡಿಮಯವಾಗಿರುವುದು! 50% ಕಮಿಷನ್ ಇರುವಾಗ ಬೆಂಗಳೂರು ಉಸ್ತುವಾರಿಗಾಗಿ ಸಚಿವರ ಪೈಪೋಟಿ ನಡೆಯದಿರುತ್ತದೆಯೇ? ಎಂದು ಪ್ರಶ್ನಿಸಿದೆ.




