ಸಾರ್ವಜನಿಕರಿಗೆ ತೊಂದರೆಯಾಗುವ ಯಾವುದೆ ಕೆಲಸವನ್ನು ಇಸ್ಲಾಂ ವಿರೋಧಿಸುತ್ತದೆ. ಪವಿತ್ರ ಇಸ್ಲಾಂ ಧರ್ಮ ದೇಶದ ಕಾನೂನನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸುವ ಕಾರಣ ರಸ್ತೆ ಬ್ಲಾಕ್ ಮಾಡಿ ನಮಾಜ್ ಮಾಡಬಾರದು ಅದು ತಪ್ಪು.
ಪ್ರತಿ ಶುಕ್ರವಾರ ಲಕ್ಷಾಂತರ ಮುಸ್ಲಿಮರು ಮಸೀದಿಗಳಲ್ಲಿ ಶಾಂತಿ ರೀತಿಯ ನಮಾಜ್ ಮಾಡುತ್ತಿದ್ದಾರೆ.
- ಮೈಸೂರು ದಸರಾ: ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ
- ಪೌರಕಾರ್ಮಿಕರ ದಿನಾಚರಣೆ ಪ್ರಯುಕ್ತ ಕಸ ಸಂಗ್ರಹಣೆ ಇಲ್ಲ
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
ಮಂಗಳೂರಿನ ಒಂದು ಮಸೀದಿಯ ಹೊರಗೆ ಶುಕ್ರವಾರದ ನಮಾಝ್ ನಲ್ಲಿ ಜನ ಜಾಸ್ತಿ ಆದಾಗ 10 ರಿಂದ 15 ಜನರು ಮಾತ್ರ 5 ನಿಮಿಷ ಅದೇ ಮಸೀದಿಯ ಗೇಟ್ ನ ಹೊರಗಡೆ ನಮಾಝ್ ಮಾಡಿದ್ದನ್ನೆ ದೊಡ್ಡ ವಿಷಯ ಮಾಡಿ ಇಡೀ ಸಮುದಾಯವೇ ರೋಡಿನಲ್ಲಿ ನಿಂತು ನಮಾಜ್ ಮಾಡಿದರು ಅನ್ನುವ ಹಾಗೆ ಜನರನ್ನು ರೊಚ್ಚಿಗೆಬ್ಬಿಸುವ ಸುದ್ದಿ ಮಾಡಿರುವುದು ಸರಿಯಲ್ಲ.
ಏಕೆಂದರೆ ಎಲ್ಲಾ ದರ್ಮಗಳಲ್ಲಿ ಇಂತಹ ಆಚರಣೆಗಳಿರುವಾಗ ಮುಸ್ಲಿಂರನ್ನು ಮಾತ್ರ ಬೊಟ್ಟು ಮಾಡುವುದು ಕೆಲ ಮಾದ್ಯಮಗಳ ಕುಲ ಕಸುಬಾಗಿ ಹೋಗಿದೆ. ಅಷ್ಟಕ್ಕೂ ಆ ರಸ್ತೆ ಮಾಡಕ್ಕೆ ಜಾಗ ಬಿಟ್ಟು ಕೊಟ್ಟಿದ್ದೇ ಆ ಮಸೀದಿಯ ಆಡಳಿತ ಮಂಡಳಿ. ಅದೇನು ಪ್ರಮುಖ ರಸ್ತೆಯೂ ಅಲ್ಲ ಒಳ ರಸ್ತೆ 5 ನಿಮಿಷದಲ್ಲಿ ನಮಾಝ್ ಮುಗಿಯುತ್ತದೆ.
ಇದು ಸಾರ್ವಜನಿಕರ ಸಮಸ್ಯೆಯಲ್ಲ ನಿಮ್ಮಂತಹ ಗೋಧಿ ಮಿಡಿಯಾದ ಸಮಸ್ಯೆ.
ಮಂಗಳೂರಿನಲ್ಲಿ ಸಾರ್ವಜನಿಕ ಗಣೇಶೋತ್ಸವ ಮಂಗಳಾದೇವಿಯಲ್ಲಿ ನೆಹರು ಮೈದಾನದಲ್ಲಿ ಗೋಕರ್ನಾಥೇಶ್ವರ ಕುದ್ರೋಳಿ ಯಲ್ಲಿ ಸಾರ್ವಜನಿಕ ವಾ ಗಿ ವಾಹನಗಳು ಪ್ರವೇಶಿಸಿದಂತೆ ಹಬ್ಬವು ನಡೆಯುತ್ತೆ ಇಲ್ಲಿ ಯಾವುದೇ ಸಾರ್ವಜನಿಕ ಸಮಸ್ಯೆಯಾಗಿಲ್ಲ ರಾಷ್ಟ್ರೀಯ ಹೆದ್ದಾರಿ ಯ ಅಳಪೆ ಗರೋಡಿ ಜಾತ್ರೆಯು ಒಂದು ದಿನದ ಮಟ್ಟಿಗೆ ರಾಷ್ಟ್ರೀಯ ಹೆದ್ದಾರಿ ಸಂಚಾರ ಬದಲಿಸಿಯೇ ಉತ್ಸವ ನಡೆಯುತ್ತೆ ಆದರೂ ಇಲ್ಲಿ ಸಾರ್ವಜನಿಕ ಸಮಸ್ಯೆಯಾಗಿಲ್ಲ .
ರಾಮ ನವಮಿ ರಸ್ತೆ ಬಂದ್
ಗಣೇಷ ಚತುರ್ಥಿ ರಸ್ತೆ ಬಂದ್
ಹೋಲಿ ರಸ್ತೆ ಬಂದ್
ಕೃಷ್ಣ ಅಸ್ಟಮಿ ರಸ್ತೆ ಬಂದ್
ದೀಪಾವಳಿ ರಸ್ತ ಬಂದ್
ಜಾತ್ರೆಗೆ ರಸ್ತೆ ಬಂದ್
ದಸರಾ ರಸ್ತೆ ಬಂದ್ ಹೀಗೆ ಅದಕ್ಕಿಂತಲೂ ದೊಡ್ಡ ದೊಡ್ಡ ರಸ್ತೆ ತಡೆಗಳು ಇತರ ಧರ್ಮದ ಕಾರ್ಯಕ್ರಮ ದಲ್ಲಿ ನಡೆಯುತ್ತಿರುವಾಗ ಅದ್ಯಾವುದೂ @publictvnews ಕಣ್ಣಿಗೆ ಕಾಣುವುದಿಲ್ಲವೇ?
– ಅಪ್ಸರ್ ಕೊಡ್ಲಿಪೇಟೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌ಡಿಪಿಐ




