ವಿಶ್ವದಾಖಲೆ ಬರೆಯುತ್ತಾ ಸಂತೋಷ್ ಕೊಡಂಕೇರಿ ಸಿನಿಮಾ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ?

4 years ago

ಬೆಂಗಳೂರು: ಅದು ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಫಸ್ಟ್ ಲುಕ್ ಬಿಡುಗಡೆಯ ಸಮಯ. ಸ್ಥಳ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋ. ರೇಣುಕಾಂಬ ಸ್ಟುಡಿಯೋದಲ್ಲಿ ಇದುವರೆಗೆ ಸಾವಿರಾರು ಚಿತ್ರಗಳ ಕುರಿತ ಸಮಾರಂಭಗಳು ನಡೆದಿವೆ. ಆದರೆ 5.3.2022ರ ಶನಿವಾರ ನಡೆದ ಕಾರ್ಯಕ್ರಮ ಕನ್ನಡಿಗರ ಅಸೀಮ ಸಾಹಸಕ್ಕೆ ಮತ್ತೊಂದು ಗರಿ ಮೂಡಿಸಿತು. ಹೌದು. ಹೋಮ್ ಸ್ಟೇಯಂತಹ ಬಹುಭಾಷೆಯ ಚಿತ್ರವನ್ನು ನಿರ್ದೇಶಿಸಿರುವ ಸಂತೋಷ್ ಕೊಡಂಕೇರಿಯವರ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಸಿನಿಮಾ ವಿಶ್ವದಾಖಲೆ ಬರೆಯುತ್ತಾ? ಎಂಬ ಪ್ರಶ್ನೆ ಮತ್ತು ಕುತೂಹಲಗಳೆರೆಡೂ ಇಲ್ಲಿ ಗರಿಗೆದರಿದವು.

ಒಬ್ಬ ಕಲಾವಿದ ಇಪ್ಪತ್ತನಾಲ್ಕು ಪಾತ್ರಗಳನ್ನು ನಿರ್ವಹಿಸಿದ ಏಕವ್ಯಕ್ತಿ ಸಿನಿಮಾದ ಫಸ್ಟ್ ಲುಕ್ ಅನ್ನು ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ಜಾಹಿರಾತು ಸಿನಿಮಾ ಜಗತ್ತಿನ ದಿಗ್ಗಜರಾದ ರೋಹಿತ್ ಮಾಂಜ್ರೇಕರ್ ಬಾಲಿವುಡ್ ನ ಖ್ಯಾತ ನಿರ್ದೇಶಕ ಮತ್ತು ಸಂಗೀತ ಸಂಯೋಜಕ ರೋಹಿತ್ ಮಾಂಜ್ರೇಕರ್ ಬಿಡುಗಡೆ ಮಾಡಿ ಮಾತಾಡಿದರು. ಅಲ್ಲಿಂದ ಕನ್ನಡಿಗರ ಅಭೂತಪೂರ್ವ ಸಾಹಸಗಳಿಗೆ ಮತ್ತಷ್ಟು ಸಾಕ್ಷಿ ಸಿಕ್ಕಂತಾಯಿತು.

ದೃಷ್ಟಿ ಮೀಡಿಯಾ ನಿರ್ಮಾಣದ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಚಲನಚಿತ್ರದ ಹೆಗ್ಗಳಿಕೆಯೆಂದರೆ, ಕೋವಿಡ್ ಲಾಕ್ಡೌನ್ ಸಮಯದಲ್ಲಿ ಇದ್ದ ಇತಿಮಿತಿಗಳಲ್ಲೇ ಅತ್ಯಂತ ಕಡಿಮೆ ಮಾನವ ಸಂಪನ್ಮೂಲಗಳನ್ನು ಬಳಸಿಕೊಂಡು ಗುಹಾಂತರ ರೆಸಾರ್ಟ್ ನಲ್ಲಿ ಈ ಪೂರ್ಣ ಪ್ರಮಾಣದ ಚಲನಚಿತ್ರವನ್ನು ನಿರ್ಮಿಸಲಾಗಿದೆ ಎಂದು ಸಂಗೀತ ನಿರ್ದೇಶಕ, ಸಿನಿಮಾ ನಿರ್ದೇಶಕ ಮತ್ತು ಜಾಹಿರಾತು ಸಿನಿಮಾ ಜಗತ್ತಿನ ದಿಗ್ಗಜ ರೋಹಿತ್ ಮಾಂಜ್ರೇಕರ್ ಹೇಳಿದರು.

“ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ” ಚಿತ್ರದ  ಪೋಸ್ಟರ್, ಟ್ರೈಲರ್ ಬಿಡುಗಡೆಗೆ ವೇದಿಕೆ ಸಿದ್ಧ  

ಒಬ್ಬ ಕಲಾವಿದ ಇಪ್ಪತ್ತನಾಲ್ಕು ಪಾತ್ರಗಳನ್ನು ನಿರ್ವಹಿಸಿದ ಏಕವ್ಯಕ್ತಿ ಸಿನಿಮಾದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾತಾಡಿ ಮಾತಾಡಿದ ಅವರು, ಕಠಿಣವಾದ ಸವಾಲೆಂದರೆ ಒಬ್ಬನೇ ವ್ಯಕ್ತಿ ವಿವಿಧ ಪಾತ್ರಗಳಲ್ಲಿ ಪರಸ್ಪರ ಸಂವಾದಿಸಿಕೊಂಡು ಕಟ್ಟಿಕೊಂಡು ಹೋಗುವ ಕತೆಯನ್ನು ಚಿತ್ರೀಕರಿಸುವುದು ಎಂದರು.

ದೃಷ್ಟಿ ಮೀಡಿಯಾ ತಂಡದ ಈ ಸಾಹಸದ ಕುರಿತು ಅಚ್ಚರಿ ವ್ಯಕ್ತಪಡಿಸಿದ ರೋಹಿತ್ ಮಾಂಜ್ರೇಕರ್, ಒಬ್ಬ ಕಲಾವಿದ ಹೆಣ್ಣು, ಗಂಡು, ಮುದುಕ, ಮುದುಕಿ, ಹುಡುಗ, ಯುವತಿ; ಹೀಗೆ ನಾನಾ ಬಗೆಯ ಪಾತ್ರಗಳನ್ನು ಹೋಲಿಕೆಯೇ ಇಲ್ಲದಂತೆ ಅಭಿನಯಿರುವುದನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ಕನ್ನಡದ ಪ್ರಯೋಗಾತ್ಮಕ ಮತ್ತು ಕಲಾತ್ಮಕ ಸಿನಿಮಾಗಳು ಬೇರೆಬೇರೆ ಭಾಷೆಯಲ್ಲಿ ಚರ್ಚೆಗೆ ಒಳಗಾಗುತ್ತಿರುವಾಗ ಮತ್ತು ಪ್ರಶಂಸೆಗೆ ಒಳಗಾಗುತ್ತಿರುವಾಗ ಕನ್ನಡದ ಮಾಧ್ಯಮಗಳು ಮತ್ತು ಸಿನಿಮಾ ವಲಯದವರು ಅದನ್ನು ಚರ್ಚೆಗೆ, ಪ್ರದರ್ಶನಕ್ಕೆ ಮತ್ತು ಅಧ್ಯಯನಕ್ಕೆ ಏಕೆ ಎತ್ತಿಕೊಳ್ಳಬಾರದು ಎಂದು ಅವರು ಪ್ರಶ್ನಿಸಿದರು. ತಮ್ಮ ಮಾತುಗಳಿಗೆ ಅವರು ಕೆಲವು ಉದಾಹರಣೆಗಳ ಸಾಕ್ಷಿಗಳನ್ನು ನೀಡುವ ಮೂಲಕ ವಿವರಿಸಿದರು.

ಆರ್.ಡಿ.ಬರ್ಮನ್ ಅವರನ್ನು ಆರಂಭದಲ್ಲಿ ಕೇಳುವವರೇ ಇರಲಿಲ್ಲ. ಮಹೇಶ್ ಭಟ್ ಅವರ ಮೊದಲ 4 ಸಿನಿಮಾಗಳು ಬಿಡುಗಡೆಯೇ ಆಗಲಿಲ್ಲ. ಇಂತಹ ಅನೇಕ ಉದಾಹರಣೆಗಳಿವೆ. ಸಂತೋಷ್ ಕೊಡಂಕೇರಿಯವರ ಚಿತ್ರ ಪ್ರಯೋಗಾತ್ಮಕವಾಗಿರುವುದರಿಂದ ಪಾಸಿಟಿವ್ ಅಥವಾ ನೆಗೆಟಿವ್ ಫಲಿತಾಂಶ ಬರಬಹುದು ಅಥವಾ ತಟಸ್ಥವಾಗಿರಬಹುದು. ಈ ಮಾದರಿಯಲ್ಲೇ ಇದನ್ನು ನೋಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ನಿರ್ದೇಶಕ ಸಂತೋಷ್ ಕೊಡಂಕೇರಿಯವರು ಮಾತನಾಡಿ, ಸಂಪೂರ್ಣ ಸಿನಿಮಾ ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತು ಗುಣಮಟ್ಟದಲ್ಲಿ ಎಲ್ಲಿಯೂ ರಾಜಿಯಾಗದಂತೆ ರಂಗಪ್ರಯೋಗವನ್ನು ಸೆಲ್ಯುಲಾಯ್ಡ್  ಮಾಧ್ಯಮಕ್ಕೆ ತಂದ ಸಾಹಸದ ಕುರಿತು ಅವರು ಹೇಳಿದರು. ಸ್ಥಳೀಯ ಪ್ರತಿಭೆಗಳಿಗೆ, ಸ್ಥಳೀಯರ ಪ್ರಯೋಗಗಳಿಗೆ ಸ್ಥಳೀಯ ಚಲನಚಿತ್ರ ಉತ್ಸವಗಳು ಮಾನ್ಯತೆ ಕೊಡದಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಜೊತೆಗೆ, ಬಿಡುಗಡೆಯ ಮುಂದಿನ ಕ್ರಮಗಳ ಬಗ್ಗೆ ಹಂತಹಂತವಾಗಿ ಪ್ರಕಟಣೆಗಳನ್ನು ನೀಡುವುದಾಗಿ ಹೇಳಿದರು.

ನಟ, ನಿರ್ದೇಶಕ, ಸಂಗೀತ ಸಂಯೋಜಕ, ಲೇಖಕ ಮತ್ತು ಈ ಸಿನಿಮಾದಲ್ಲಿ ದಾಖಲೆಯ 24 ಪಾತ್ರಗಳನ್ನು ನಿರ್ವಹಿಸಿರುವ ಯೋಗೇಶ್ ಮಾಸ್ಟರ್ ಮಾತನಾಡಿ, ಮುಗ್ಧ ಮನಸುಗಳಿಂದ ಕತೆಗಳನ್ನು ಕೇಳುವ ಮಕ್ಕಳು ತಮ್ಮಿಷ್ಟದ ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳುವುದರ ಬಗ್ಗೆ ಕತೆಗಳ ಪ್ರಭಾವಗಳನ್ನು ವಿಶ್ಲೇಷಿಸಿದರು. ಕೆ.ಹೆಚ್.ಕಲಾಸೌಧದ ಉದ್ಘಾಟನೆಯ ತರುವಾಯ ಮೊದಲ ’ಟಿಕೇಟೆಡ್ ಶೋ’ಆಗಿದ್ದ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ನಾಟಕ ಸಿನಿಮಾ ಆಗಿರುವುದರ ಬಗ್ಗೆ ಮತ್ತು ಅದಕ್ಕೆ ತಾವು ಮಾಡಿಕೊಂಡ ತಯಾರಿಗಳನ್ನು ವಿವರಿಸಿದರು.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಚಿತ್ರವನ್ನು ಆಯ್ಕೆ ಮಾಡದ ನಿಲುವಿನ ಬಗ್ಗೆ ಸಂತೋಷ್ ಕೊಡಂಕೇರಿ ವ್ಯಕ್ತಪಡಿಸಿದ ಬೇಸರವನ್ನು ಮುಂದುವರಿಸಿ, ಯಾವ ಮಾನದಂಡಗಳಲ್ಲಿ ಚಿತ್ರಗಳನ್ನು ಅಳೆಯುತ್ತಾರೆ ಎಂಬುದರ ಬಗ್ಗೆ ಒಂದು ಸ್ಪಷ್ಟತೆಯನ್ನು ಅವರು ಸಾರ್ವಜನಿಕಗೊಳಿಸುವ ಅಗತ್ಯವಿದೆ ಎಂದರು.

ಜೊತೆಗೆ, ಅವರವರ ಇಷ್ಟ ಬಂದಂತೆ ಆಯ್ಕೆ ಮತ್ತು ತಿರಸ್ಕಾರ ಮಾಡುವುದನ್ನು ಖಂಡಿಸಿದ ಅವರು ಚಲನಚಿತ್ರಗಳ ಆಯ್ಕೆಯ ಮಾನದಂಡಗಳ ಬಗ್ಗೆ ಮತ್ತು ಆಯ್ಕೆ ಮಾಡುವವರ ಮಾನದಂಡಗಳ ಬಗ್ಗೆಯೂ ಸ್ಪಷ್ಟತೆಯನ್ನು ಪ್ರಕಟಿಸುವಂತೆ ಒತ್ತಾಯಿಸಿದರು. ನಿರ್ಮಾಪಕ ಪುಟ್ಟರಾಜು, ಛಾಯಾಗ್ರಾಹಕ ಜೀವನ್ ಗೌಡ, ಸಂಕಲನಕಾರ ರಘು ಹಾಗೂ ಇತರ ತಂತ್ರಜ್ಞರು ಮತ್ತು ಚಿ.ನಾ.ರಾಮು ಮೊದಲಾದವರು ಉಪಸ್ಥಿತರಿದ್ದರು.

ಚಿತ್ರದ ವಿಶೇಷ

ಸಂತೋಷ್ ಕೊಡಂಕೇರಿ ನಿರ್ದೇಶಿಸಿರುವ ಈ ಸಿನಿಮಾದ ಮೂಲ ಕತೆ ರವೀಂದ್ರನಾಥ್ ಠಾಗೋರ್ ಅವರದು. ಚಿತ್ರಕತೆ, ಸಂಭಾಷಣೆ, ಸಾಹಿತ್ಯ ಮತ್ತು ಸಂಗೀತದ ಹೊಣೆ ಹೊತ್ತಿರುವ ಯೋಗೇ॑ಶ್ ಮಾಸ್ಟರ್ ತಾವೇ ಅಭಿನಯಿಸಿದ್ದಾರೆ. ಇಪ್ಪತ್ತು ವರ್ಷಗಳ ಹಿಂದಿನ ತಮ್ಮದೇ ಏಕವ್ಯಕ್ತಿ ರಂಗಪ್ರಯೋಗದ ಅನುಭವವನ್ನು ಸಿನಿಮಾದಲ್ಲಿನ ಅಭಿನಯಕ್ಕೆ ಬದಲಿಸಿಕೊಂಡಿದ್ದಾರೆ.

ಕಮಲ್ ಹಾಸನ್ ದಶಾವತಾರಂ ಚಿತ್ರದಲ್ಲಿ ಹತ್ತು ಪಾತ್ರಗಳನ್ನು ಒಬ್ಬರೇ ನಿರ್ವಹಿಸಿದಂತೆ ಒಬ್ಬನೇ ವ್ಯಕ್ತಿ ಹಲವು ಪಾತ್ರಗಳನ್ನು ನಿರ್ವಹಿಸಿರುವ ಹಲವಾರು ಉದಾಹರಣೆಗಳು ಇರುವುದಾದರೂ ಅವರಿಗೆ ಇತರ ಪಾತ್ರಧಾರಿಗಳ ಆಸರೆ ಇದ್ದವು. ಹಾಗೆಯೇ ಏಕವ್ಯಕ್ತಿ ಅಭಿನಯದ ಶಾಂತಿಯಂತಹ ಸಿನಿಮಾದಲ್ಲಿ ಭಾವನಾ ಕಾಣಿಸಿಕೊಂಡಿದ್ದಾರೆ.  ಆದರೆ ಒಂದಾನೊಂದು ಕಾಲದಲ್ಲಿ ಒಬ್ಬ ರಾಜ ಇದ್ದ ಸಿನಿಮಾದಲ್ಲಿ ಯೋಗೇಶ್ ಮಾಸ್ಟರ್ ಇಪ್ಪತ್ತನಾಲ್ಕು ಪಾತ್ರಗಳಲ್ಲಿ ಯಾವುದೇ ಸಹಕಲಾವಿದರ ನೆರವಿಲ್ಲದೇ ಇಡೀ ಚಿತ್ರದ ಪೂರ್ತಿ ಆವರಿಸಿಕೊಂಡಿದ್ದಾರೆ. ಪ್ರಾಯಶಃ ಇದು ದಾಖಲೆಯ ಪ್ರಯತ್ನ. ಒಟ್ಟಿನಲ್ಲಿ ಈ ಚಿತ್ರ ವಿಶ್ವದಾಖಲೆ ಬರೆದರೆ ಕನ್ನಡಿಗರ ಹಿರಿಮೆ, ಗರಿಮೆ ಮತ್ತಷ್ಟು ಎತ್ತರಕ್ಕೆ ವಿಸ್ತರಿಸಿದಂತಾಗಲಿದೆ.

Leave a Reply