ನರೇಂದ್ರ ಮೋದಿ ಉಚಿತ ರೀಚಾರ್ಜ್ ಯೋಜನೆ ನಿಜವೇ?

2 years ago

#NarendraModi #freerecharge #scheme #real #reality #fakenews #factcheck #bjplies #modilies

ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಉಚಿತವಾಗಿ 3 ತಿಂಗಳ ರೀಚಾರ್ಜ್ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಒಂದು ಸುದ್ದಿ ಹರಿದಾಡುತ್ತಿದೆ. ಇದರಲ್ಲಿ PM Narendra Modi is giving 3 Months Free recharge to all Indian users so that more and more people can vote for BJP in the 2024 elections and BJP government can be formed again. Click on the link given below to get 3 Months Free Recharge. (Last Date – 31 OCTOBER 2023) ಎಂಬ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಲಿಂಕ್ ಒಂದು ಹರಿದಾಡುತ್ತಿದೆ.

ಇದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ಬಳಸಿಕೊಳ್ಳಲಾಗಿದ್ದು, ನಿಮ್ಮ ಮೊಬೈಲ್ ಸಂಪರ್ಕ ನೆಟ್ವರ್ಕ್ ಕಂಪನಿಯ ಆಯ್ಕೆಯನ್ನು ಆಯ್ಕೆ ಮಾಡಿ ರೀಚಾರ್ಜ್ ಆಗುತ್ತದೆ ಎಂಬ ಸಂದೇಶ ಬರುತ್ತದೆ.

ಒಮ್ಮೆ ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಆಪರೇಟರ್ ಮಾಹಿತಿಯನ್ನು ಹಂಚಿಕೊಂಡ ನಂತರ ಮತ್ತೊಂದು ಪುಟ ತೆರೆದುಕೊಂಡು, ಈ ಲಿಂಕ್ ಅನ್ನು ನಿಮ್ಮ ಸಂಪರ್ಕದಲ್ಲಿರುವ 10 ಗುಂಪುಗಳು ಅಥವಾ ಮೊಬೈಲ್ ನಂಬರ್ ಗೆ ಷೇರ್ ಮಾಡಿ. ಅನಂತರ ನಿಮ್ಮ ಮೊಬೈಲ್ ಗೆ ಮೂರು ತಿಂಗಳ ರೀಚಾರ್ಜ್ ಆಗುತ್ತದೆ ಎಂಬ ಸಂದೇಶ ಬರುತ್ತದೆ.

ವಾಸ್ತವದಲ್ಲಿ ಈ ರೀತಿಯ ಯಾವುದೇ ರೀಚಾರ್ಜ್ ಯೋಜನೆಯು ಅಸ್ತಿತ್ವದಲ್ಲಿ ಇಲ್ಲ. ಇದನ್ನು ಬಿಜೆಪಿ ಮತ್ತು ನರೇಂದ್ರ ಮೋದಿಯವರ ಪರವಾಗಿ ಪ್ರಚಾರಕ್ಕಾಗಿ ಬಳಸಲಾಗುತ್ತಿದೆ. ಸಂದೇಶದಲ್ಲೇ ಉಲ್ಲೇಖಿಸಲಾಗಿರುವಂತೆ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಉದ್ದೇಶ ಮಾತ್ರ ಈ ಸಂದೇಶದಲ್ಲಿದೆ.

Leave a Reply