ಡಾ.ಬಿ.ಆರ್.ಅಂಬೇಡ್ಕರ್ RSS ವೇದಿಕೆಯಲ್ಲಿ ಭಾಗವಹಿಸಿದ್ದು ನಿಜವೇ?

3 years ago

#true #BRAmbedkar #participated #RSS #forum #factcheck

ಡಾ.ಬಿ.ಆರ್.ಅಂಬೇಡ್ಕರ್ ಅವರು RSS ವೇದಿಕೆಯಲ್ಲಿ ಭಾಗವಹಿಸಿದ್ದರು ಎಂಬ ಪೋಸ್ಟರ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೋಸ್ಟರ್ ನಲ್ಲಿ “(RSS) ಸಂಘದ ವೇದಿಕೆಯಲ್ಲಿ ಬಾಬಾಸಾಹೇಬ್!!” ಎಂದು ಹೇಳಲಾಗಿದ್ದು, “ಅಂಬೇಡ್ಕರ್ ಜಿಯವರಿಗೆ ಸಂಘದ ಮೇಲೆ ಇದ್ದ ಗೌರವ. ಇದು ಅವರ ಅನುಯಾಯಿಗಳಿಗೆ ಇಲ್ಲ!” ಎಂದು ಹೇಳಲಾಗಿದೆ. ಜೊತೆಗೆ, “12/05/1939 ಭಾವೆ ಸ್ಕೂಲ್ ಪುಣೆಯಲ್ಲಿ OTC ಕ್ಯಾಂಪ್ ನ ವೇದಿಕೆಯಲ್ಲಿ ಪರಮ ಪೂಜ್ಯ ಹೆಡ್ಗೇವಾರ್ ಜಿ ಯವರೊಂದಿಗೆ ಅಂಬೇಡ್ಕರ್ ಜಿ” ಎಂಬ ಸಾಲುಗಳನ್ನು ಬರೆಯಲಾಗಿದೆ.

ಆದರೆ ಇದು ಸುಳ್ಳು ಸುದ್ದಿ ಎಂಬುದನ್ನು https://velivada.com/ ವರದಿ ಮಾಡಿದೆ. ಅಂಬೇಡ್ಕರ್ ಅವರು ಸಂವಿಧಾನದ 370ನೇ ಪರಿಚ್ಛೇದದ ವಿರುದ್ಧ ಇದ್ದರು, ನೋಟು ಅಮಾನ್ಯೀಕರಣದ ಪರವಾಗಿದ್ದರು ಎಂಬಂತಹ ಸುಳ್ಳುಗಳಂತೆಯೇ, ಅಂಬೇಡ್ಕರ್ ಅವರು ಆರ್.ಎಸ್.ಎಸ್. ವೇದಿಕೆಯಲ್ಲಿ ಭಾಗವಹಿಸಿದ್ದರು ಎಂಬುದು ಕೂಡ ಸುಳ್ಳು ಸುದ್ದಿ ಎಂದು ವೆಬ್ ಸೈಟ್ ವರದಿ ಮಾಡಿದೆ.

Leave a Reply