ಕೂದಲು ಕತ್ತರಿಸಿ, ಹಿಜಾಬ್ ಸುಟ್ಟು ಪ್ರತಿಭಟಸಿದ ಇರಾನಿ ಮಹಿಳೆಯರು

4 years ago

ತೆಹರಾನ್: ಮಹಸ್ ಅಮಿನಿ ಎಂಬ 22 ವರ್ಷದ ಯುವತಿ ಸೆಪ್ಟೆಂಬರ್19 ರಂದು ಸಾವಿಗೀಡಾದ ಹಿನ್ನೆಲೆಯಲ್ಲಿ ಇರಾನಿ ಮಹಿಳೆಯರು ತಮ್ಮ ಕೂದಲು ಕತ್ತರಿಸಿ ಹಿಜಾಬ್ ಸುಡುವ ಮೂಲಕ ಪ್ರತಿಭಟಿಸುತ್ತಿದ್ದಾರೆ.

ಯುವತಿ ತನ್ನ ಕುಟುಂಬದೊಂದಿಗೆ ತೆಹರಾನ್ ವೀಕ್ಷಣೆಯಲ್ಲಿದ್ದಾಗ ಆಕೆ ಹಿಜಾಬ್ ಧರಿಸದ ಕಾರಣ ಪೋಲಿಸರು ಬಂಧಿಸಿದ್ದರು. ಈ ವೇಳೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಪರಿಣಾಮವಾಗಿ ಇರಾನಿ ಮಹಿಳೆಯರು ‘ಹಿಜಾಬ್ ಪೋಲಿಸ್’ ಎಂಬ ಘೋಷವಾಕ್ಯದೊಂದಿಗೆ ಪ್ರತಿಭಟಿಸುತ್ತಿದ್ದಾರೆ.

ಮಸಿಹ್ ಅಲೆನ್ಜಾದ್ ಎಂಬ ಜರ್ನಲಿಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋಗಳನ್ನು ‘Brave women’, ‘Don’t be afraid we are all united’ ಎಂಬ ಘೋಷವಾಕ್ಯದೊಂದಿಗೆ ಹಂಚಿಕೊಂಡಿದ್ದಾರೆ.

Leave a Reply