ದತ್ತಿ ಪ್ರಶಸ್ತಿಗೆ ಕತೆ, ಕಾವ್ಯ, ಕಾದಂಬರಿ, ವಿಮರ್ಶಾ ಕೃತಿಗಳಿಗೆ ಆಹ್ವಾನ

3 years ago

#Invitation #shortstory #poetry #novel #review #works #charity #award

ಬೆಂಗಳೂರು: ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್(ರಿ) ವತಿಯಿಂದ ಕೊಡಮಾಡುವ ಸಾಹಿತಿಗಳು, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕರ್ತರೂ ಆದ ರಾಂ.ಕೆ.ಹನುಮಂತಯ್ಯ ರವರು ಹಾಗೂ ಬೆಮೆಲ್ ನ ಮಾಜಿ ವ್ಯವಸ್ಥಾಪಕ, ಚುಟುಕು ಸಾಹಿತಿ, ಸಮಾಜ ಸೇವಕರಾಗಿದ್ದ ಹೆಬ್ಬಗೋಡಿ ಗೋಪಾಲಪ್ಪ ಅವರುಗಳು ಸ್ಥಾಪಿಸಿರುವ ದತ್ತಿ ಪುಸ್ತಕ ಬಹುಮಾನಕ್ಕೆ 2022–23 ರ ಸಾಲಿನ ಕತೆ, ಕಾವ್ಯ, ಕಾದಂಬರಿ, ವಿಮರ್ಶೆ ಕ್ಷೇತ್ರದಲ್ಲಿ ಪ್ರಕಟಗೊಂಡ ಕೃತಿಗಳನ್ನು ಆಹ್ವಾನಿಸಲಾಗಿದೆ. ಪ್ರಕಟಿತ ಕೃತಿಗೆ ಯಾವುದೇ ಪ್ರಶಸ್ತಿ, ಬಹುಮಾನ ಬರದಿರುವವರು ಮಾತ್ರ ಕೃತಿಗಳನ್ನು ಕಳುಹಿಸಬಹುದು. ಪ್ರಕಟಿತವಾದ ಎರಡು ಪ್ರತಿ, ಪರಿಚಯ, ಒಂದು ಫೋಟೋವನ್ನು ಕಳುಹಿಸಲು ದಿನಾಂಕ 30/08/2023 ಕೊನೆಯ ದಿನ. ಅಂಚೆ ಮತ್ತು ಕೊರಿಯರ್ ಮೂಲಕ ಕಳುಹಿಸಲು ಕೋರಲಾಗಿದೆ.

ಆಯ್ಕೆ ಆದ‌ ಕೃತಿಕಾರರಿಗೆ ಕರೆ ಮಾಡಿ, ವಾಟ್ಸಪ್ ಮೂಲಕ ಮತ್ತು ಪತ್ರ ಮುಖೇನ ತಿಳಿಸಲಾಗುತ್ತದೆ. ಸೆಪ್ಟಂಬರ್ ತಿಂಗಳಲ್ಲಿ ಬಹುಮಾನ ವಿತರಣೆ ಸಮಾರಂಭ ನಡೆಯಲಿದೆ. ಬಹುಮಾನ ನಗದು, ಫಲ, ನೆನಪಿನ ಕಾಣಿಕೆ, ಪ್ರಮಾಣ ಪತ್ರ ನೀಡಿ ಗಣ್ಯರಿಂದ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಳಾಸ: ‌ಡಾ.ರಾಮಲಿಂಗೇಶ್ವರ (ಸಿಸಿರಾ) , #24/16–01, 9ನೇ ಕ್ರಾಸ್, 1ನೇ ಮೈನ್, ದೀಪಾಂಜಲಿನಗರ, ಬಿ.ಹೆಚ್.ಇ.ಎಲ್ ಹಿಂಭಾಗದ ರಸ್ತೆ, ಬೆಂಗಳೂರು—560026 ಅಥವಾ ಖುದ್ದು ತಲುಪಿಸಲಿಚ್ಚಿಸುವವರು: ಡಾ.ಸಿಸಿರಾ, ಕನ್ನಡ ಉಪನ್ಯಾಸಕರು, ಶೇಷಾದ್ರಿಪುರಂ ಪದವಿ ಪೂರ್ವ (ಮೈನ್) ಕಾಲೇಜು, ಶೇಷಾದ್ರಿಪುರಂ, ಬೆಂಗಳೂರು..560026. ಮೊಬೈಲ್ : 9448880985.

Leave a Reply