ಧಾರವಾಡ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಸಂಖ್ಯಾಶಾಸ್ತ್ರ ವಿಭಾಗದಲ್ಲಿ 2023-24 ನೇ ಸಾಲಿನ ಪ್ರಥಮ ವರ್ಷದ ಈ ಸೆಮಿಸ್ಟರ್ ನಲ್ಲಿ ಬೋಧಿಸಲು ಇಬ್ಬರು ಸಹಾಯಕ ಪ್ರಾಧ್ಯಾಪಕರನ್ನು ತಾತ್ಕಾಲಿಕವಾಗಿ 179 ದಿನಗಳು ಮೀರದಂತೆ ನೇಮಿಸಿಕೊಳ್ಳಲು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಡಿಸೆಂಬರ್ 29, ರಂದು ಬೆಳಿಗ್ಗೆ 11.00 ಗಂಟೆಗೆ ಸಂದರ್ಶನಕ್ಕೆ ಡೀನ್ ಕಚೇರಿ, ಕೃಷಿ ಮಹಾವಿದ್ಯಾಲಯ, ಧಾರವಾಡದಲ್ಲಿ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೃವಿವಿ ಜಾಲತಾಣ www.uasd.edu ಸಂಪರ್ಕಿಸಬಹುದು.




