10 ವರ್ಷದಲ್ಲಿ ಮೋದಿಯವರು ಸಾಲದ ಪ್ರಮಾಣವನ್ನು 150 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ: ರಾಮಲಿಂಗಾರೆಡ್ಡಿ

2 years ago

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಾಲ ಮಾಡಿ ತುಪ್ಪ ತಿನ್ನು ಎನ್ನುವಂತೆ ದೇಶದ ಜನರನ್ನು ಸಾಲದ ಸುಳಿಗೆ ಸಿಲುಕಿಸುವುದನ್ನು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಮಾಡಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತಾಡಿದ ಅವರು, 1947ರಿಂದ 2017 ರವರೆಗೆ 67 ವರ್ಷಗಳ ಕಾಲ ದೇಶದ ಒಟ್ಟು ಸಾಲ 52 ಲಕ್ಷ ಕೋಟಿ ರೂ. ಮಾತ್ರ. ಅಂದಿನಿಂದ ಈವರೆಗೆ ಕೇವಲ ಹತ್ತು ವರ್ಷದಲ್ಲಿ ನರೇಂದ್ರಮೋದಿಯವರು ಸಾಲದ ಪ್ರಮಾಣವನ್ನು 150 ಲಕ್ಷ ಕೋಟಿಗೆ ಹೆಚ್ಚಿಸಿದ್ದಾರೆ. 11 ಲಕ್ಷ ಕೋಟಿ ರೂ. ಬಡ್ಡಿಯನ್ನೇ ಪಾವತಿಸಬೇಕಾಗುತ್ತದೆ ಎಂದರು.

ಪ್ರತಿಯೊಂದಕ್ಕೂ ಮೋದಿಯವರನ್ನು ವೈಭವೀಕರಿಸಿದವರಿಗೆ ಸಾಲ ಮಾಡಿ ತುಪ್ಪ ತಿನ್ನುತ್ತಿರುವುದು ಕಂಡುಬಂದಿಲ್ಲ. ದೇಶದ ಜನರನ್ನು ಸಾಲದ ಸುಳಿಗೆ ಸಿಲುಕಿಸಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

Leave a Reply