ಬೆಂಗಳೂರು: ಅಕ್ರಮ ನೋಂದಣಿ ಹಾಗೂ ತೆರಿಗೆ ವಂಚನೆಯನ್ನು ತಡೆಯುವ ಸಲುವಾಗಿ ನೋಂದಣಿ ಸಮಯದಲ್ಲಿ ಡಿಜಿಟಲ್ ಇಂಟಿಗ್ರೇಷನ್ ಖಾತಾ ನಿಯಮವನ್ನು ಜಾರಿಗೊಳಿಸಲಾಗಿದೆ ಎಂದರು.
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
- ಕಾಂಗ್ರೆಸ್ಗೆ ಮಹಿಳಾ ಮೀಸಲಾತಿ ಬೇಕಿಲ್ಲ ಎಂಬುದು ಸ್ಪಷ್ಟ: ಬಸವರಾಜ ಬೊಮ್ಮಾಯಿ
- ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎನ್ನುವುದಕ್ಕೆ ಕನ್ನಡಿ: ಆರ್ ಅಶೋಕ್
ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾಹಿತಿ ನೀಡಿದ ಅವರು, ನಿಜವಾದ ಸ್ವತ್ತಿಗೆ ಖಾತೆ ಇಲ್ಲದಿದ್ದರೂ ಕೆಲವರು ಕೇವಲ ಪೇಪರ್ ನಲ್ಲಿ ಖಾತೆ ಪ್ರಿಂಟ್ ಮಾಡಿಸಿ ಅದರ ಮೂಲಕ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್-ಬಿಬಿಎಂಪಿ ನಗರಸಭೆ ಖಾತೆ ಮಾಡಿಸದಿದ್ದರೂ ಇಂತಹ ಬೋಗಸ್ ಖಾತೆ ಮೂಲಕ ಅಕ್ರಮ ನೋಂದಣಿ ಮಾಡಲಾಗುತ್ತಿದೆ. ಇದರಿಂದ ಹಲವು ಅಮಾಯಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನೋಂದಣಿ ಮಾಡಿಸುವಾಗ ಇತರೆ ಎಂಬ ಒಂದು ಕ್ಯಾಟಗರಿ ಇದೆ. ಆಶ್ರಯ ನಿವೇಶನಗಳನ್ನು ನೋಂದಾಯಿಸುವಾಗ ಮಾತ್ರ ಈ ಕ್ಯಾಟಗರಿಯನ್ನು ಬಳಸಲಾಗುತ್ತದೆ. ಇದರಲ್ಲಿ ಮಾರುಕಟ್ಟೆ ಬೆಲೆ (ಗೈಡನ್ಸ್ ವ್ಯಾಲ್ಯೂ) ಕಡಿಮೆ ಇರತ್ತೆ. ನೋಂದಣಿ ಶುಲ್ಕವೂ ಕಡಿಮೆ ಇರುತ್ತದೆ. ಹೀಗಾಗಿ ಹಲವರು ತಮ್ಮದು ಖಾಸಗಿ ಸ್ವತ್ತಾಗಿದ್ರೂ ಇತರೆ ಎಂದು ತೋರಿಸಿ ದೊಡ್ಡ ಪ್ರಮಾಣದಲ್ಲಿ ಕಟ್ಟಬೇಕಿರುವ ವೆಚ್ಚವನ್ನು ಮೋಸ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ನೋಂದಣಿ ಮುಖ್ಯಸ್ಥರಾಗಿದ್ದ ತ್ರಿಲೋಕ್ ಚಂದ್ರ ಅವರು ಈ ಬಗ್ಗೆ ಬೆಂಗಳೂರಿನಲ್ಲಿ ಅಧ್ಯಯನ ನಡೆಸಿ ವರದಿ ನೀಡಿದ್ದಾರೆ. ಅಧ್ಯಯನದ ವೇಳೆ ಬೆಂಗಳೂರಿನ 4 ನೋಂದಣಿ ಕಚೇರಿಯನ್ನು ಆಯ್ಕೆ ಮಾಡಿಕೊಂಡು ಈ ಕಚೇರಿಗಳಲ್ಲಿ ನಕಲಿ ಖಾತೆ ಮೂಲಕ ಎಷ್ಟು ನೋಂದಣಿಯಾಗುತ್ತಿವೆ ಹಾಗೂ ತೆರಿಗೆ ವಂಚನೆ ಪ್ರರಕಣಗಳನ್ನೂ ಗುರುತಿಸಿದ್ದಾರೆ. ಅವರ ಪ್ರಕಾರ 1-7-2018 ರಿಂದ 10-12-2019ರ ಅವಧಿಯಲ್ಲಿ ಬೆಂಗಳೂರು ಒಂದರಲ್ಲೇ ರೂ. 250 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಿದ್ದಾರೆ ಎಂದರು.
ಇನ್ನೂ ನೋಂದಣಿ ಮಾಡುವಾಗ ಸ್ಕೆಚ್ ಕಡ್ಡಾಯ ಬೇಕು. ಆದರೆ ಕೆಲವೆಡೆ ಸ್ಕೆಚ್ ಇಲ್ಲದೆಯೂ ನೋಂದಣಿ ಮಾಡಲಾಗಿದೆ. ಜನವರಿಯಿಂದ ಈಚೆಗೆ 200 ನೋಂದಣಿ ಸ್ಕೆಚ್ ಇಲ್ಲದೆ ಮಾಡಲಾಗಿದೆ. ಸೈಟು ಅಥವಾ ಜಮೀನನನ್ನು ಟಿಡಿಆರ್ ಅಂತೇಳಿ ನೋಂದಣಿ ಮಾಡಿಸಿದ್ದಾರೆ. ಇದರಿಂದ ಅಕ್ರಮದ ಜೊತೆಗೆ ತೆರಿಗೆ ಹಣವೂ ವಂಚಿಸಲಾಗುತ್ತಿದೆ. ಇದನ್ನು ಹೇಗೆ ತಡೆಗಟ್ಟುವುದು ಎಂದು ಕಳೆದ ಎಂಟು ತಿಂಗಳಿನಿಂದ ಯೋಚಿಸಿ ಬೋಗಸ್ ಖಾತಾ ಮೂಲಕ ಆಗುತ್ತಿರುವ ಅಕ್ರಮಗಳಿಗೆ ತಡೆಯೊಡ್ಡಲು, ಅಮಾಯಕರಿಗೆ ನ್ಯಾಯ ಒದಗಿಸಲು ನಿರ್ಧರಿಸಲಾಯಿತು ಎಂದರು.
ಯಾವುದೇ ಖಾತೆ ಇರಲಿ ಪೇಪರ್ ಖಾತೆ ಆಧಾರದಲ್ಲಿ ನೋಂದಣಿಯಾಗುವಾಗ ವೆರಿಫಿಕೇಷನ್ ಗೆ ತಿಂಗಳೇ ಬೇಕು. ಅಲ್ಲಿಯವರೆಗೆ ನೋಂದಣಿಯನ್ನು ಬಾಕಿ ಇಡಲಾಗಲ್ಲ. ಪೇಪರ್ ಅನ್ನು ಯಾರು ಬೇಕಾದರೂ ಮುದ್ರಿಸಬಹುದು. ಅದಕ್ಕೆ ನಾವೀಗ ಒಂದು ತೀರ್ಮಾನ ಮಾಡಿದ್ದೇವೆ. ಗ್ರಾಮ ಪಂಚಾಯತ್- ಮುನಿಸಿಪಾಲಿಟಿ ಬಿಬಿಎಂಪಿ ಬಿಡಿಎ ಯಾರೇ ಇರಬಹುದು, ಎಲ್ಲಾ ಖಾತೆಯನ್ನೂ ಡಿಜಿಟಲ್ ಮಾಡಬೇಕು. ಖಾತೆ ಡಿಜಿಟಲ್ ಆಗಿರಬೇಕು. ರಿಜಿಸ್ಟ್ರೇಷನ್ ಸಮಯದಲ್ಲಿ ನಮ್ಮ ಹಾಗೂ ಅವರ ಸಿಸ್ಟಂ ಲಿಂಕ್ ಮಾಡಿ, ಖಾತೆ ನಂಬರ್ ಹೆಸರು ಹಾಗೂ ವಿಳಾಸ ಹೊಂದಾಣಿಕೆ ಆದ್ರೆ ಆಟೋಮ್ಯಾಟಿಕ್ ಖಾತೆ ಮಾಡಿಕೊಡಲಾಗುವುದು ಎಂದರು.
ಡಿಜಿಟಲ್ ಇಂಟಿಗ್ರೇಷನ್ ಖಾತಾವನ್ನು ಈ ತಿಂಗಳ ಆರಂಭದಲ್ಲೇ ಪ್ರಾಯೋಗಿಕವಾಗಿ 4 ಜಿಲ್ಲೆಗಳಲ್ಲಿ ಜಾರಿ ಮಾಡಲಾಗಿದೆ. ಇಂದಿನಿಂದ 8 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ರಾಜ್ಯದಲ್ಲಿ ಈವರೆಗೆ ಎಲ್ಲೂ ಸಮಸ್ಯೆ ಬಂದಿಲ್ಲ. ಬೆಂಗಳೂರಲ್ಲಿ ಸಮಸ್ಯೆ ಬರಬಹುದು. ಹೀಗಾಗಿ ಫೆಬ್ರವರಿಯಲ್ಲೇ ಬಿಡಿಎ, ಕೆಎಡಿಬಿ, ಕರ್ನಾಟಕ ಹೌಸಿಂಗ್ ಬೋರ್ಡ್, ಕರ್ನಾಟಕ ರಾಜೀವ್ ಗಾಂಧಿ ವಸತಿ ನಿಗಮ ಎಲ್ಲರನ್ನೂ ಕರೆಸಿ ತಮ್ಮ ಖಾತೆಗಳನ್ನು ಡಿಜಿಟಲೀಕರಣಗೊಳಿಸಿ ಎಂದು ತಿಳಿಸಲಾಗಿದೆ ಎಂದರು.
ಬಿಬಿಎಂಪಿಯದ್ದೂ ಮಾಡಬೇಕು. ಅವರಿಗೂ ಸೂಚನೆ ನೀಡಲಾಗಿದೆ. ಮುಂದಿನ ತಿಂಗಳಿನಿಂದ ಬಿಬಿಎಂಪಿಯದ್ದೂ ಇ-ಖಾತಾ ಮೂಲಕವೇ ರಿಜಿಸಸ್ಟ್ರೇಷನ್ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದರಿಂದ ಒಂದು ಕಡೆ ಮಧ್ಯವರ್ತಿಗಳ ಹಾವಳಿಗೆ ಕಡಿವಾಣ, ಬಹಳ ಮುಖ್ಯವಾಗಿ ಅಕ್ರಮಗಳಿಗೆ ಕಡಿವಾಣ, ಅಮಾಯಕರ ಶೋಷಣೆಗೆ ಕಡಿವಾಣ, ಸರ್ಕಾರಕ್ಕೆ ಬರಬೇಕಾದ ತೆರಿಗೆ ವಂಚನೆ ತಡೆಗೆ ಈ ತೀರ್ಮಾನ ಸಹಕಾರಿಯಾಗಲಿದೆ ಎಂದು ಭರವಸೆ ನೀಡಿದರು.




