ಊಹಿಸಿಕೊಳ್ಳಿ. ಒಂದು ಬೃಹತ್ ಮುಸ್ಲಿಂ ಸಮಾವೇಶ. ಲಕ್ಷಾಂತರ ಮುಸ್ಲಿಮರು ರಾಜ್ಯದ ಮೂಲೆಮೂಲೆಯಿಂದ ಭಾಗವಹಿಸಿದ್ದಾರೆ. ಅಂತಹ ಕಾರ್ಯಕ್ರಮದಲ್ಲೊಬ್ಬ ಮೌಲ್ವಿ ಹೇಳುತ್ತಾನೆ, “ಮುಸಲ್ಮಾನರು ಬಲಶಾಲಿಗಳಾಗಬೇಕೆಂದರೆ ಇನ್ಮುಂದೆ ಮುಸ್ಲಿಂ ಯುವಕ ಯುವತಿಯರು ಕ್ರಮವಾಗಿ ಇಪ್ಪತ್ತೊಂದು, ಹದಿನೆಂಟು ವರ್ಷಕ್ಕೆ ಮದುವೆಯಾಗಬೇಕು. ಕನಿಷ್ಠ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಹೆರಬೇಕು; ಚಿಂತಿಸಬೇಡಿ, ಆ ಮಕ್ಕಳನ್ನು ಸಾಕಲು ನಿಮಗೆ ಕಷ್ಟವಾದರೆ ಅವರ ಶಿಕ್ಷಣದ ದೇಖಾರೇಖಿಯನ್ನು ನಮ್ಮ ಮದರಸಾಗಳು ನೋಡಿಕೊಳ್ಳುತ್ತವೆ. ಒಟ್ಟು ಹೆಚ್ಚೆಚ್ಚು ಮಕ್ಕಳನ್ನು ಹೆರುವುದಷ್ಟೇ ಮುಖ್ಯ!”
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಈ ಸುದ್ದಿ ಸುವರ್‍ಣ ಅಜಿತನ ಬಾಯಿಗೆ ಸಿಕ್ಕಿದ್ದಿದ್ದರೆ ಅಥವಾ ನಮ್ಮ ಸೋಕಾಲ್ಡ್ ಸೆಕ್ಯುಲರ್ ವಿಶ್ವಾಸಾರ್ಹ ಬೆಳಗಿನ ಪತ್ರಿಕೆಯ ಹೆಡ್ಲೈನಿಗೆ ಸಿಕ್ಕಿದ್ದಿದ್ದರೆ ಇಡೀ ದೇಶ ಎಂತೆಂಥಾ ದಂಗೆಗಳಿಗೆ ಸಾಕ್ಷಿಯಾಗಬೇಕಿತ್ತು. ಕತ್ತಿ, ತಲ್ವಾರ್ , ತ್ರಿಶೂಲಗಳು ನಾಲಿಗೆಯ ತುದಿಯಲ್ಲೆ ಝಳಪಿಸುತ್ತಿದ್ದವು; ಸೋಷಿಯಲ್ ಮೀಡಿಯಾದ ಪುಟಗಳು ರಕ್ತಪಾತದಲ್ಲಿ ಒದ್ದೆಯಾಗುತ್ತಿದ್ದವು; ನಮ್ಮ ನಾನ್-ಬಯಾಲಜಿಕಲ್ ಪ್ರಧಾನಿಗಳು `ಹೆಚ್ಚು ಮಕ್ಕಳನ್ನು ಹೆರುವ ನುಸುಳುಕೋರರ’ ವಿರುದ್ಧ ಮುಗಿಬೀಳುತ್ತಿದ್ದರು. ಅಷ್ಟೆ ಯಾಕೆ…. ನಮ್ಮ ಬಹುರೂಪಿ ಪ್ರಗತಿಪರರೆ “ಥೋ…. ಈ ಸಾಬರಿಗೆ ಎಷ್ಟು ಮಾಡಿದ್ರು ಅಷ್ಟೇ ಕಣ್ರಿ!’ ಎಂಬ ಸ್ವಗತಗಳ ಲಾವಣಿಗಳಾಗುತ್ತಿದ್ದರು.
ಇಲ್ಲಿಗೆ ನಿಮ್ಮ ಊಹೆಯನ್ನು ನಿಲ್ಲಿಸಿಬಿಡಿ. ಯಾಕೆಂದರೆ, ಪುಣ್ಯಕ್ಕೆ ಯಾವ ಮುಸ್ಲಿಂ ಮೌಲ್ವಿಯೂ ಅಂತಹ ದುರಂತದ ಹೇಳಿಕೆ ನೀಡಿಲ್ಲ. ಹಾಗೆ ಹೇಳಿದ್ದು, ನೇರವಾಗಿ ಭಗವಂತನ ನೆತ್ತಿಯಿಂದ ತುಪಕ್ಕನೆ ಅವತರಿಸಿದ ಹವ್ಯಕ ಎಂಬ ಬ್ರಾಹ್ಮಣ ಸಮುದಾಯದ ಸ್ವಾಮೀಜಿ! ಹಾಗಾಗಿ ಸಮಾಜ ಶಾಂತಿಯುತವಾಗಿದೆ. ಯಾವುದೇ ದಂಗೆಗಳ ಸುದ್ದಿಯಿಲ್ಲ. ರಕ್ತಪಾತದ ಮಾತಿಲ್ಲ. ದೇವದೂತರ ಅರಚಾಟವಿಲ್ಲ. ಕೊನೆಗೆ ನಮ್ಮ ಪ್ರಗತಿಪರ ವಲಯದಲ್ಲೂ ದಿವ್ಯ ನಿರ್ಲಕ್ಷ್ಯ.
ಇದು, ನಮ್ಮ ಸಮಾಜದ ಸ್ಪಂದನೆಗೆ ಹೊಡೆದಿರುವ ಪಾರ್ಶ್ವವಾಯುವಿನ ತೀವ್ರತೆಗೆ ಒಂದು ಉದಾಹರಣೆ. ಕೋಮುವಾದವನ್ನು ನಾವು ಬಿಜೆಪಿ-ಆರೆಸ್ಸೆಸ್ಗೆ ಮಾತ್ರ ಸೀಮಿತವಾದ ಒಂದು ರಾಜಕೀಯ ವಿದ್ಯಮಾನದಂತೆ ಅದನ್ನು ಎದುರಿಸಲು ನಾವು ಹೆಣಗಾಡುತ್ತಿದ್ದೇವೆ. ಆದರೆ ವಾಸ್ತವದಲ್ಲಿ, ಅದೊಂದು ಸಾಂಸ್ಕೃತಿಕ-ಸಾಮಾಜಿಕ-ಆರ್ಥಿಕ ಅನಿಷ್ಟ! ಕುವೆಂಪು ಅವರು ಹೇಳಿದಂತೆ ಪುರೋಹಿತಶಾಹಿ ವ್ಯವಸ್ಥೆಯ ನೆತ್ತಿಗೇ ಗುರಿಯಿಟ್ಟು ಹೊಡೆಯಬೇಕೆಂದರೆ, ಮೊದಲು ನಾವು ಈ ಎಲ್ಲಾ ಆಯಾಮದಿಂದ ಕೋಮುವಾದವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಆಗ ಮಾತ್ರ, ನಮ್ಮೊಳಗೇ ಇರುವ ಹಲವು ಗೊಂದಲಗಳಿಂದ ನಾವು ಮುಕ್ತಿ ಪಡೆಯಬಹುದು. ಕೋಮುವಾದದ ವಿರುದ್ಧ ಹೋರಾಡುವುದು ನಂತರದ ಹಂತ.
– ಮಾಚಯ್ಯ ಎಂ ಹಿಪ್ಪರಗಿ, ರಾಜಕೀಯ ವಿಶ್ಲೇಷಕರು



