ಇದ್ರೀಶ್ ಪಾಶ ಅನುಮಾನಾ‌ಸ್ಪದ ಸಾವು: ಪುನೀತ್ ಕೆರೆಹಳ್ಳಿ ಬಂಧನ

3 years ago

ಬೆಂಗಳೂರು: ಕನಪುರದ ಸಾತನೂರು ಬಳಿ ಗೋ ಸಾಗಾಟ ವೇಳೆ ಚಾಲಕ ಇದ್ರೀಷ್ ಪಾಷ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆ ಕಾರ್ಯಕರ್ತ ಪುನೀತ್ ‌ಕೆರೆಹಳ್ಳಿಯನ್ನು  ಬಂಧಿಸುವಲ್ಲಿ‌ ರಾಮನಗರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದೊಂದು ವಾರದಿಂದ ತಲೆಮರೆಸಿಕೊಂಡಿದ್ದ ಪುನೀತ್ ‌ಕೆರೆಹಳ್ಳಿ ಸೇರಿದಂತೆ ಒಟ್ಟು ಐವರರನ್ನು ಸಾತನೂರು ಠಾಣೆ ಪೊಲೀಸರನ್ನೊಳಗೊಂಡ ರಾಮನಗರ ಪೊಲೀಸರ ವಿಶೇಷ ತಂಡಗಳು ಇಂದು ರಾಜಸ್ಥಾನದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಮಾ.31ರ ಮಧ್ಯರಾತ್ರಿ ಸಾತನೂರು ಪೊಲೀಸ್ ಠಾಣೆ ಮುಂಭಾಗ ಜಾನುವಾರುಗಳನ್ನು ತುಂಬಿದ್ದ ಕ್ಯಾಂಟರ್‌ ವಾಹನವನ್ನು ಅಡ್ಡಗಟ್ಟಿದ್ದ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್‌ ಕೆರೆಹಳ್ಳಿ, ಇತರೆ ನಾಲ್ವರು  ಆರೋಪಿಗಳೊಂದಿಗೆ ತಲೆಮರೆಸಿಕೊಂಡಿದ್ದ. ಏ.2 ರಾತ್ರಿ ವಿಡಿಯೊವೊಂದನ್ನು ಹರಿಬಿಟ್ಟಿದ್ದ ಪುನೀತ್‌, ‘ನಾನೇ ವಿಚಾರಣೆಗೆ ಹಾಜರಾಗುತ್ತೇನೆ’ ಎಂದು ಹೇಳಿಕೊಂಡು  ನಾಪತ್ತೆ ಆಗಿದ್ದ ಆರೋಪಿಯನ್ನು ಬಂಧಿಸುವಲ್ಲಿ‌ ತಂಡಗಳು ಯಶಸ್ವಿಯಾಗಿವೆ

ಪ್ರಕರಣದ ಆರೋಪಿಯು ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರ ಜೊತೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರಿಂದಾಗಿಯೇ ಪೊಲೀಸರು ಆರೋಪಿಗಳ ಬಂಧನಕ್ಕೆ ಹಿಂಜರಿಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದವು.

ಇದ್ರೀಷ್ ಪಾಷಸಾವಿಗೆ ನಿಖರ ಕಾರಣ ಏನೆಂಬುದು ಮರಣೋತ್ತರ ಪರೀಕ್ಷೆ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿ ಬಂದ ಬಳಿಕವಷ್ಟೇ ತಿಳಿಯಲಿದೆ. ಕನಕಪುರದ ವೈದ್ಯರ ತಂಡವು ಇದ್ರೀಷ್ ಅವರ ಮರಣೋತ್ತರ ಪರೀಕ್ಷೆ ನಡೆಸಿದೆ. ಎಫ್‌ಎಸ್‌ಎಲ್‌ ವರದಿಯನ್ನೂ ಪಡೆಯಲಾಗುತ್ತದೆ.

ಮೂರು ಎಫ್‌ಐಆರ್‌: ಪ್ರಕರಣ ಸಂಬಂಧ ಸಾತನೂರು ಠಾಣೆಯಲ್ಲಿ ಮೂರು ಎಫ್‌ಐಆರ್‌ಗಳು ದಾಖಲಾಗಿವೆ. ಮೊದಲಿಗೆ ಅಕ್ರಮ ಗೋವು ಸಾಗಣೆಗೆ ಸಂಬಂಧಿಸಿದಂತೆ ಪುನೀತ್‌ ಕೆರೆಹಳ್ಳಿ ದೂರು ನೀಡಿದ್ದರು. ಗೋವು ಸಂರಕ್ಷಣೆ ನೆಪದಲ್ಲಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ಕ್ಯಾಂಟರ್‌ ಚಾಲಕ ಪ್ರತಿ ದೂರು ನೀಡಿದ್ದರು. ಮರು ದಿನ ಬೆಳಿಗ್ಗೆ 8ರ ಸುಮಾರಿಗೆ ಘಟನೆ ನಡೆದ ಸ್ಥಳದ 100 ಮೀಟರ್‌ ದೂರದಲ್ಲಿ ಇದ್ರೀಷ್‌ ಅವರ ಶವ ಪತ್ತೆ ಆಗಿದ್ದು, ಅವರ ಸಹೋದರ ಯೂನುಸ್‌ ಪಾಷ ನೀಡಿದ ದೂರಿನ ಅನ್ವಯ ಮತ್ತೊಂದು ಎಫ್‌ಐಆರ್‌ ದಾಖಲಿಸಿದ್ದೇವೆ ಎಂದು ಎಸ್ ಪಿ ಕಾರ್ತಿಕ್ ರೆಡ್ಡಿ ತಿಳಿಸಿದ್ದಾರೆ. 

ನೀಡಿರುವ ಬಿಜೆಪಿಯ ನಾಯಕರು ಜೊತೆಗೆ ಅವರು ಅಪೇಕ್ಷೆ ಪಟ್ಟರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವ ಬಗ್ಗೆ ಮತ್ತು ಪಕ್ಷ ಅಧಿಕಾರಕ್ಕೆ ಬಂದರೆ ಸಚಿವರನ್ನಾಗಿ ನೇಮಕ ಮಾಡುವ ಭರವಸೆಯನ್ನು ನೀಡಿದೆ ಎಂದು ಹೇಳಲಾಗಿದೆ. ಇಲ್ಲವೇ, ವಿಧಾನ ಪರಿಷತ್ ಅಥವಾ ರಾಜ್ಯಸಭೆಗೆ ನೇಮಕ ಮಾಡುವ ಪ್ರಸ್ತಾಪವನ್ನು ಸಹ ಬಿಜೆಪಿ ಸುದೀಪ್ ಅವರ ಬಳಿ ಇಟ್ಟಿದೆ ಎಂದು ತಿಳಿದುಬಂದಿದೆ. ಚುನಾವಣೆಯಲ್ಲಿ ಕಿಚ್ಚ ಸುದೀಪ್ ಅವರಿಗೆ ಹಲವಾರು ವಿಧಾನಸಭಾ ಕ್ಷೇತ್ರಗಳ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ನೀಡಲು ಬಿಜೆಪಿ ಉದ್ದೇಶಿಸಿದೆ ಎಂದು ಹೇಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೆಲವು ಸೆಲೆಬ್ರೆಟಿಗಳನ್ನು ಭೇಟಿ ಮಾಡಿದ್ದರು. ಆ ಸಂದರ್ಭದಲ್ಲಿ ಕಿಚ್ಚ ಸುದೀಪ್ ಅವರಿಗೂ ಪ್ರಧಾನಿ ಭೇಟಿಗೆ ಆಹ್ವಾನ ಹೋಗಿತ್ತು. ಆದರೆ ಅನಾರೋಗ್ಯದ ಕಾರಣದಿಂದ ಸುದೀಪ್ ಅವರು ಪ್ರಧಾನಿಯವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.

ಮಂಡ್ಯ ಸಂಸದರಾದ ನಟಿ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದಂತೆ ಕಿಚ್ಚ ಸುದೀಪ್ ಸಹ ಇಂದಿನ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿಗೆ ಸೇರ್ಪಡೆ ಅಥವಾ ಬೆಂಬಲವನ್ನ ಘೋಷಿಸಿ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Leave a Reply