ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ಬಂದಿರುವ ಅಕ್ರಮ ಸೈಟುಗಳನ್ನು ಮುಡಾಕ್ಕೆ ಮರಳಿಸಬೇಕು ಹಾಗೂ ಇಡೀ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ ಆಗ್ರಹಿಸಿದರು.
- ಸರಳ, ವೇಗ, ಪಾರದರ್ಶಕ, ಜನಸ್ನೇಹಿ ಆಸ್ತಿ ದಾಖಲೆ ವ್ಯವಸ್ಥೆ ಇ-ಆಸ್ತಿ 2.0: ಕೃಷ್ಣ ಬೈರೇಗೌಡ
- ರೈತರಿಗೆ ನಿರಂತರ 6 ತಾಸು ಸಮರ್ಪಕ ವಿದ್ಯುತ್ ಕುಡಿಯುವ ನೀರು ಪೂರೈಕೆಗೆ ಆದ್ಯತೆ
- ಕೆಟಿವಿಎ ಗೃಹ ಪತ್ರಿಕೆ ಟಿವಿ – ಠೀವಿ ಪುನರಾರಂಭ
- ಸಿಎನ್ಎನ್, ಎಂಎಸ್ಎನ್ಬಿಸಿ, ಪಾಲಿಟಿಕೋಗೆ ಶ್ವೇತಭವನ ಪ್ರವೇಶ ನಿಷೇಧಿಸಿದ ಟ್ರಂಪ್
- ಕೆರೆಗಳ ಪುನಶ್ಚೇತನಕ್ಕೆ ₹150 ಕೋಟಿ ವೆಚ್ಚದ ವಿಶ್ವಬ್ಯಾಂಕ್ ಯೋಜನೆ: ಈಶ್ವರ್ ಖಂಡ್ರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರೇ ನಿಮ್ಮ ಇಬ್ಬರು ಮಕ್ಕಳಲ್ಲಿ ಒಬ್ಬ ಮಗ ಹೋಗಿಬಿಟ್ಟ. ಇರೋ ಇನ್ನೊಬ್ಬ ಮಗನಿಗೆ ಎಷ್ಟು ಅಂತ ಆಸ್ತಿ ಮಾಡುತ್ತೀರಾ? ಹಗರಣಗಳ ಆರೋಪದಡಿ ನೀವು ಉಟ್ಟಿರುವ ಬಿಳಿ ಪಂಚೆ ಕಪ್ಪಾಗುವುದಕ್ಕೆ ಮುನ್ನವೇ ನೀವು ಮುಡಾ ಸೈಟುಗಳನ್ನು ಮುಡಾಕ್ಕೆ ಹಿಂದಿರುಗಿಸಿ ಎಂದು ಸಲಹೆ ನೀಡಿದರು.
ಪರ್ಯಾಯ ನಿವೇಶನ ಪಡೆದಿರುವಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಆದರೆ ನೀವು ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಹೇಳುತ್ತಿದ್ದೀರಿ. ಹಾಗಿದ್ದ ಮೇಲೆ ಈ ಪ್ರಕರಣವನ್ನು ಸಿಬಿಐಗೆ ಕೊಟ್ಟುಬಿಡಿ. ಇಲ್ಲವಾದರೆ, ನಿಮಗೆ ಈಗ ಬಂದಿರುವ ಕೆಟ್ಟ ಹೆಸರು ಶಾಶ್ವತವಾಗಿ ಅಂಟಿಕೊಳ್ಳಲಿದೆ ಎಂದರು.
ನೀವು ಸಮಾಜವಾದಿ ಮೌಲ್ಯಗಳನ್ನು ಪ್ರತಿಪಾದಿಸಿದ್ದೀರಿ. ನಿಮ್ಮ ರಾಜಕೀಯ ಜೀವನದ್ದುದ್ದಕ್ಕೂ ನೀವು ಹಾಗೆಯೇ ನಡೆದುಕೊಂಡು ಬಂದಿರುವ ಹೆಗ್ಗಳಿಕೆಯನ್ನು ಹೊಂದಿದ್ದೀರಿ. ಆದರೆ, ಈಗ ಮುಡಾ ಹಗರಣದಲ್ಲಿ ನಿಮ್ಮ ಕುಟುಂಬದ ಹೆಸರು ಕೇಳಿಬಂದಿದ್ದು, ನೀವು ತಪ್ಪೇ ಆಗಿಲ್ಲ ಎಂದು ವಾದಿಸುತ್ತಿದ್ದೀರಿ. ಆದರೆ, ನಿಮ್ಮ ವಿರುದ್ಧ ಆರೋಪಗಳು ಕೇಳಿಬರುತ್ತಲೇ ಇವೆ ಎಂದರು.




