ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ, ಯಾವುದೇ ಅಪರಾಧಗಳು ನಡೆಯುವ ಮೊದಲೇ ಗೊತ್ತಾದರೆ ಸಂಭವಿಸಲು ಬಿಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
- ಗದಗವನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ: ಎಚ್ ಕೆ ಪಾಟೀಲ್
- ತುಳು ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಭಾಷೆಯಾಗಿ ಮಾನ್ಯತೆ: ಸಿದ್ದರಾಮಯ್ಯ
- ಪೆರಿಯಾರ್ ಆಗ್ನೇಯ ಏಷ್ಯಾದ ಸಾಕ್ರೆಟಿಸ್: ಎ.ಜಿ.ಕಾಂಬಳೆ
- ಕೇಂದ್ರ ಸಚಿವ ಸಂಪುಟ ಸಭೆ ಬೇರೆ ರಾಜ್ಯಗಳಲ್ಲಿ ನಡೆಯಲಿ
- ಪಿ.ಪಿ.ಪಿ ಮಾದರಿ ಕೈ ಬಿಡಲು ಒತ್ತಾಯಿಸಿ ಸಚಿವ ಸಂಪುಟ ಸಭೆಗೆ ಮೆರವಣಿಗೆ: ಸಿಪಿಐಎಂ
ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊಲೆಗಳು, ಬ್ಯಾಂಕ್ ದರೋಡೆಗಳು ನಡೆದಿವೆ, ಅಲ್ಲಿರುವ ಲೋಪಗಳನ್ನೂ ನಾವು ಗಮನಿಸಬೇಕು ಎಂದರು.
ಬೀದರ್ನಲ್ಲಿ ಎಟಿಎಂಗೆ ಹಣ ತುಂಬುವ ವಾಹನದಲ್ಲಿ ಆವತ್ತು ಆರ್ಮ್ಡ್ ಗಾರ್ಡ್ ಇರಲಿಲ್ಲ. ಅವರು ಎಚ್ಚರಿಕೆ ವಹಿಸಿಕೊಳ್ಳಬೇಕಿತ್ತು. ಹಾಗಾಗಿ ಆ ರೀತಿ ಆಗಿದೆ. ಬ್ಯಾಂಕ್ ದರೋಡೆ ವೇಳೆ ಬ್ಯಾಂಕ್ ಭದ್ರತಾ ಸಿಬ್ಬಂದಿ ಇರಲಿಲ್ಲ. ಇದಕ್ಕೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳುವುದು ಸರಿಯಲ್ಲ ಎಂದರು.
ಬಿಜೆಪಿ ಅಧಿಕಾರದಲ್ಲಿದ್ದಾಗ ಎಲ್ಲೆಲ್ಲಿ ಇಂತಹ ಘಟನೆಗಳು ಆಗಿದೆ ಎನ್ನುವುದರ ಅಂಕಿ – ಅಂಶ ಕೊಡುತ್ತೇನೆ. ಅವರ ಆಡಳಿತದ ಅವಧಿಯಲ್ಲಿ ಆಗಿರುವ ಘಟನೆಗಳನ್ನು ಮರೆತು ಬಿಟ್ಟಿರಬೇಕು. ಅವರ ಕಾಲದಲ್ಲಿ ಎಷ್ಟು ಕೊಲೆಗಳಾಗಿದ್ದವು, ಎಷ್ಟು ರೇಪ್ ಆಗಿದ್ದವು ಅಂತ ಸಂದರ್ಭ ಬಂದಾಗ ನಾನು ಮಾಹಿತಿ ಕೊಡುತ್ತೇನೆ. ಇದೆಲ್ಲವು ಸಾರ್ವಜನಿಕರಿಗೂ ಗೊತ್ತಾಗಲಿ ಎಂದರು.
ಮುಡಾ ಪ್ರಕಣದಲ್ಲಿ ಇ.ಡಿ ಆಸ್ತಿ ಜಪ್ತಿ, ಬಿಜೆಪಿಯಿಂದ ಸಿಎಂ ರಾಜೀನಾಮೆಗೆ ಒತ್ತಾಯ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಬೇಕಿರುವುದೇ ಸಿಎಂ ರಾಜೀನಾಮೆ. ಮೊದಲಿಂದಲೂ ಅವರು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಇದರಲ್ಲಿ ಹೊಸದೇನಿಲ್ಲವಲ್ಲ. ಇ.ಡಿಯವರು ಕಾನೂನು ಪ್ರಕಾರ ಕ್ರಮ ವಹಿಸಲಿ. ಜಪ್ತಿಯಾಗಿರುವ ಅಸ್ತಿಗಳಲ್ಲಿ ಸಿದ್ದರಾಮಯ್ಯ ಅವರ ಸೈಟ್ ಇದೆಯಾ? ಸುಮ್ನೆ ರಾಜಕೀಯಕ್ಕೆ ಮಾತಾಡುವುದು ಬೇಡ, ದಾಖಲೆ ಇಟ್ಟುಕೊಂಡು ಬಿಜೆಪಿಯವರು ಮಾತಾಡಲಿ. ಸಿದ್ದರಾಮಯ್ಯನವರೇ ಪ್ರಭಾವ ಬೀರಿ ಸೈಟ್ ಪಡೆದಿದ್ದಾರೆ ಅಂತ ಇ.ಡಿಯವರು ಎಲ್ಲೂ ಹೇಳಿಲ್ಲ ಎಂದರು.
ರಾಜ್ಯ ಕಾಂಗ್ರೆಸ್ ನಾಯಕರಿಗೆ ಖರ್ಗೆ ಖಡಕ್ ಎಚ್ಚರಿಕೆಗೆ ಪ್ರತಿಕ್ರಿಯಿಸಿ, ನೀವು ಎಷ್ಟೇ ಕೇಳಿದರೂ ನಾನು ರಾಜಕೀಯ ವಿಚಾರ ಮಾತಾಡಲ್ಲ. ನಮ್ಮ ಎಐಸಿಸಿ ಅಧ್ಯಕ್ಷರು ಕೆಲಸ ಮಾಡಲು ಹೇಳಿದ್ದಾರೆ. ರಾಜಕೀಯ ಪ್ರಶ್ನೆಗಳಿಗೆ ಮಾತಾಡಲ್ಲ. ಕೆಲಸ ಮಾಡುತ್ತೇವೆ ಎಂದರು.




