ಅಂದಾಜು 10 ಕೋಟಿ ವೆಚ್ಚದಲ್ಲಿ ಕೌನ್ಸಿಲ್ ಸಭಾಂಗಣ ನವೀಕರಣ
ವಿಧಾನಸಭೆ ಮಾದರಿಯಲ್ಲಿ ಕೌನ್ಸಿಲ್ ಸಭೆ ನಿರ್ಮಾಣ
ಬೆಂಗಳೂರು: ಬೆಂಗಳೂರು ನಗರ ಐ.ಟಿ. ಸಿಟಿ, ಗಾರ್ಡನ್ ಸಿಟಿ ಎಂಬ ಖ್ಯಾತಿಗಳಿಸಿದೆ. ಇಡೀ ವಿಶ್ವವೇ ಬೆಂಗಳೂರು ನಗರದಲ್ಲಿ ವಿದ್ಯಮಾನಗಳ ಬಗ್ಗೆ ಗಮನಹರಿಸುತ್ತಾರೆ. ಇಂತಹ ಬೆಂಗಳೂರುನಗರಕ್ಕೆ ವಿಧಾನಸೌಧ ಒಂದು ರೀತಿಯಲ್ಲಿ ಮಾದರಿಯಾಗಿದೆ ಅದೇ ಮಾದರಿಯಲ್ಲಿ ಬಿ.ಬಿ.ಎಂ.ಪಿ. ಕೌನ್ಸಿಲ್ ಸಭಾಂಗಣವು ಇಡೀ ದೇಶದ ಗಮನ ಸೆಳೆಯುವಂತೆ ನವೀಕರಣಗೊಳ್ಳುತ್ತಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ 198ರಿಂದ 243ಸದಸ್ಯರ ಸಂಖ್ಯೆ ಹೆಚ್ಚಳದಿಂದ ಮತ್ತು ಲೋಕಸಭಾ, ರಾಜ್ಯಸಭಾ, ವಿಧಾನಪರಿಷತ್ ಹಾಗೂ ಅಧಿಕಾರಿಗಳಿಗೆ ಕೌನ್ಸಿಲ್ ಸಭೆಯಲ್ಲಿ ಆಸನ ವ್ಯವಸ್ಥೆಗೆ 365 ಸಂಖ್ಯೆ ಆಸನಗಳ ನಿರ್ಮಾಣವಾಗುತ್ತಿದೆ.
ಕೌನ್ಸಿಲ್ ಸಭಾಂಗಣ 365 ಆಸನಗಳ ಪ್ರತಿಯೊಬ್ಬರಿಗೂ ಪ್ರತ್ಯೇಕ ಆಸನಗಳು, ಸಾಮಾಜಿಕ ಅಂತರ ಆಸನಗಳ ನಡುವೆ ಹಾಗೂ ಅತ್ಯಾಧುನಿಕ ಮೈಕ್ ವ್ಯವಸ್ಥೆ, ಬಯೋಮೇಟ್ರಿಕ್ ಬಟನ್ ಒತ್ತುವ ಮೂಲಕ ಮಾತನಾಡಲು ಅವಕಾಶ. ಪ್ರತಿಯೊಂದು ಆಸನಗಳಲ್ಲಿ ಡಿಜಿಟಲ್ ನಾಮಫಲಕಗಳು ಮತ್ತು ಹವಾನಿಯಂತ್ರಣ ವ್ಯವಸ್ಥೆ. ಇಂಗ್ಲೆಂಡ್ ಮಾದರಿಯಲ್ಲಿ ಕೌನ್ಸಿಲ್ ಸಭೆ ನಿರ್ಮಿಸಲಾಗುತ್ತಿದೆ.
ಬೆಂಗಳೂರುನಗರ ಹಲವಾರು ಸಾಧನೆಗಳಿಗೆ ಸಾಕ್ಷಿಯಾಗಿದೆ ಇದೀಗ ಬೆಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭಾಂಗಣ ಸಹ ಸೇರ್ಪಡೆಯಾಗಲಿದೆ. ಅಂದಾಜು 10ಕೋಟಿ ವೆಚ್ಚದಲ್ಲಿ ಕೌನ್ಸಿಲ್ ಸಭಾಂಗಣ ನವೀಕರಣ ಮಾಡಲಾಗುತ್ತಿದೆ.
ದೆಹಲಿ, ಮುಂಬಯಿ, ಚೆನೈ, ಮುಂತಾದ ನಗರಪಾಲಿಕೆ ಮೀರಿಸುವ ಮಾದರಿಯಲ್ಲಿ ಅತ್ಯಾಧುನಿಕ ಕೌನ್ಸಿಲ್ ಸಭಾಂಗಣ ಬಿ.ಬಿ.ಎಂ.ಪಿ. ನಿರ್ಮಾಣವಾಗುತ್ತಿರುವ ಬೆಂಗಳೂರುನಗರ ಹಿರಿಮೆ ಹೆಚ್ಚಲಿದೆ.




