ಚಾರಿತ್ರಿಕ ಸತ್ಯಗಳು ಧಾರ್ಮಿಕತೆಯ ಅಬ್ಬರದಲ್ಲಿ ಮಾಯವಾಗುತ್ತಿವೆ

2 years ago

ಅಣೆಕಟ್ಟುಗಳನ್ನ ಕಟ್ಟಿದ್ದು ಕೈಗಾರಿಕೆಗಳನ್ನ ಸ್ಥಾಪಿಸಿ ಕೋಟಿ ಕೋಟಿ ಭಾರತೀಯರ ಬದುಕಿಗೆ ಭದ್ರ ಬುನಾದಿಯನ್ನು ಹಾಕಿದ ಸಂಗತಿಗಳು ಮಾಯವಾಗುತ್ತಿವೆ.

ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಶಿಕ್ಷಣವನ್ನು ನೀಡಿದ್ದು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದ್ದು ಉನ್ನತ ಸಂಸ್ಥೆಗಳನ್ನ ಸ್ಥಾಪಿಸಿದ್ದು ಸಂಶೋಧನಾ ಸಂಸ್ಥೆಗಳಿಗೆ ಅಡಿಪಾಯ ಹಾಕಿದ್ದು ಧಾರ್ಮಿಕತೆಯ ಅಬ್ಬರದಲ್ಲಿ ಮಾಯವಾಗುತ್ತಿವೆ.

ಪಂಚವಾರ್ಷಿಕ ಯೋಜನೆಗಳ ಮೂಲಕ ದೇಶದ ಪ್ರಗತಿಗೆ ಚಾಲನೆಯನ್ನ ನೀಡಿದ್ದು ನವ ಭಾರತದ ನಿರ್ಮಾಣಕ್ಕಾಗಿ ಶ್ರಮಿಸಿದ್ದು ಮಾಯವಾಗುತ್ತಿದೆ ಧಾರ್ಮಿಕತೆಯ ಅಬ್ಬರದಲ್ಲಿ

ಬ್ಯಾಂಕುಗಳ ರಾಷ್ಟ್ರೀಕರಣಗೊಳಿಸಿ ಆರ್ಥಿಕತೆಯ ಪ್ರಗತಿಗೆ ದುಡಿದಿದ್ದು ಉಳುವವನಿಗೆ ಭೂಮಿ ಎಂಬ ಕ್ರಾಂತಿಕಾರಿ ಕಾನೂನಿನ ಮೂಲಕ ಕೋಟಿ ಕೋಟಿ ಬಡ ಜನರ ಭೂ ಮಾಲೀಕರನ್ನಾಗಿಸಿದ್ದು ಬಡವರಿಗಾಗಿ ಯೋಜನೆಗಳನ್ನ ಜಾರಿಗೆ ತಂದದ್ದು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸಿದ್ದು ಮಾಯವಾಗುತ್ತಿದೆ ಧಾರ್ಮಿಕತೆಯ ಅಬ್ಬರದಲ್ಲಿ

ಮಾಹಿತಿ ತಂತ್ರಜ್ಞಾನದ ಮೂಲಕ ನವ ಭಾರತವನ್ನು ಕಟ್ಟಲು ಸಂಕಲ್ಪ ಮಾಡಿ ಆಧುನಿಕತೆಯ ಹಾದಿಯಲ್ಲಿ ಭಾರತವನ್ನು ಕಟ್ಟಿದ್ದು ಯುವಜನರ ಬದುಕಿಗೆ ನೆರವಾದದ್ದು ಮಾಯವಾಗುತ್ತಿದೆ ಧಾರ್ಮಿಕತೆಯ ಅಬ್ಬರದಲ್ಲಿ

ಹೊಸ ಆರ್ಥಿಕ ನೀತಿಯ ಮೂಲಕ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ್ದು ವಿದೇಶಿ ಕಂಪನಿಗಳ ಮೂಲಕ ಕೋಟಿ ಕೋಟಿ ಯುವ ಜನರಿಗೆ ಉದ್ಯೋಗದ ಅವಕಾಶವನ್ನು ಕಲ್ಪಿಸಿ ಕೊಟ್ಟದ್ದು ಮಾಯವಾಗುತ್ತಿದೆ ಧಾರ್ಮಿಕತೆಯ ಅಬ್ಬರದಲ್ಲಿ

ಕಡ್ಡಾಯ ಉಚಿತ ಶಿಕ್ಷಣ ಮಾಹಿತಿ ಹಕ್ಕು ಆಧಾರ್ ಉದ್ಯೋಗ ಖಾತ್ರಿ ಯೋಜನೆ ಆಹಾರ ಭದ್ರತೆ ಆರೋಗ್ಯ ಭದ್ರತೆ ಹೊಸ ಹೊಸ ಕ್ರಾಂತಿಕಾರಿ ನಿಲುವಿನ ಆರ್ಥಿಕ ಕಾರ್ಯಕ್ರಮಗಳು ಸಂಕಷ್ಟದಲ್ಲಿ ದೇಶವನ್ನು ಕಾದದ್ದು ಮಾಯವಾಗುತ್ತಿದೆ ಧಾರ್ಮಿಕತೆಯ ಅಬ್ಬರದಲ್ಲಿ

ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಂಡ ಸಂದರ್ಭದಲ್ಲಿನ ಸಂಕಷ್ಟದ ಆತಂಕದ ಬದುಕಿನ ಸಂದರ್ಭದಲ್ಲಿ ಭರವಸೆಯ ಬದುಕಿಗೆ ವಿಶ್ವದಲ್ಲಿಯೇ ಭಾರತದ ಕೀರ್ತಿಯನ್ನು ಎತ್ತರಿಸಿದ ಅನೇಕ ಸಂಗತಿಗಳು ಧಾರ್ಮಿಕತೆಯ ಅಬ್ಬರದಲ್ಲಿ ಮಾಯವಾಗುತ್ತಿದೆ

ಹಿಂದಿನ ತಲೆಮಾರಿನವರ ಹೋರಾಟಗಾರ ತ್ಯಾಗದ ಬದುಕು ಸೇವೆ ಸಮಾಜ ಸುಧಾರಕರ ವಿಚಾರಧಾರೆಗಳು ಮಾಯವಾಗುತ್ತಿದೆ ಧಾರ್ಮಿಕತೆಯ ಅಬ್ಬರದಲ್ಲಿ

ಎಲ್ಲವೂ ನಾನೇ ಎಲ್ಲವೂ ನನ್ನಿಂದಲೇ ಎಲ್ಲ ಪ್ರಗತಿಗೂ ನಾನೇ ಕಾರಣವೆಂಬ ದಾಟಿಯಲ್ಲಿ ಸಾಗುತ್ತಿಹದು ಪ್ರಚಾರದ ವೈಖರಿ ದಿನಕೊಂದು ಕ್ಷಣಕ್ಕೊಂದು ಕಥೆಗಳು ಹುಟ್ಟಿಕೊಳ್ಳುತ್ತಾ ಹಿಂದಿನವರ ಸಾಧನೆ ಸೇವೆ ಕಸದ ಬುಟ್ಟಿಗೆ ಸೇರಿಸುತ್ತಾ ಎಲ್ಲವನ್ನು ಮರೆಸುತ್ತಿದ್ದಾರೆ ಜನ ನಂಬುವಂತೆ ಕೆಲವು ಮಾಧ್ಯಮಗಳು ರಾಯಭಾರಿಗಳಾಗಿ ಹಗಲಿರುವ ದುಡಿಯುತ್ತಿದ್ದಾರೆ

ಎಷ್ಟೇ ಅಬ್ಬರಿಸಿದರು ಇತಿಹಾಸ ಸುಳ್ಳಾಗುವುದಿಲ್ಲ ಚರಿತ್ರೆಯನ್ನು ಅಳಿಸಲು ಆಗುವುದಿಲ್ಲ ಸತ್ಯವನ್ನ ಸಾಯಿಸಲು ಆಗುವುದಿಲ್ಲ ಇಂದಲ್ಲ ನಾಳೆ ಸತ್ಯದ ಅರಿವಾಗುತ್ತದೆ ಜಗದ ಕಣ್ಣು ತೆರೆಯುತ್ತದೆ

  • ಕೆ.ಎಸ್.ನಾಗರಾಜ್, ಬೆಂಗಳೂರು

Leave a Reply