ದಕ್ಷಿಣ ಕನ್ನಡ: ಪಕ್ಷಕ್ಕಾಗಿ ದುಡಿದ ಕಾಂಗ್ರೆಸ್ ಕಾರ್ಯಕರ್ತ ರವಿಯವರ ಮನೆಯ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದಿದ್ದು, ಕಾರ್ಯಕರ್ತರ ಸಹಾಯಕ್ಕೆ ನಿಂತ ಜನನಾಯಕ ಕಾವು ಹೇಮನಾಥ ಶೆಟ್ಟಿ ಅರಿಯಡ್ಕ ಜನರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.
ಜಾರತ್ತಾರು ಗ್ರಾಮದ ನಿವಾಸಿ ರವಿಯವರ ಮನೆಯ ಮೇಲ್ಛಾವಣಿ ಕುಸಿತಕ್ಕೆ ಒಳಗಾಗಿದ್ದು ದಿಕ್ಕು ತೋಚದೆ ಇರುವ ಈ ಕುಟುಂಬದ ವಿವರವನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ರಫೀಕ್ ಮೂಲಕ ತಿಳಿದುಕೊಂಡ ಕಾವು ಹೇಮನಾಥ್ ಶೆಟ್ಟಿ ಕೂಡಲೇ ಇವರ ನೋವಿಗೆ ಸ್ಪಂದಿಸಿದ್ದಾರೆ. ಅವರಿಗೆ ಧೈರ್ಯ ತುಂಬಿ ಆರ್ಥಿಕ ಸಹಾಯವನ್ನೂ ನೀಡಿ ಕಾಂಗ್ರೆಸ್ ಕಾರ್ಯಕರ್ತನಿಗೆ ನೆರವಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಸೋಷಿಯಲ್ ಮೀಡಿಯಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ಅಶೋಕ್ ಶೆಟ್ಟಿ, ಇದುವರೆಗೂ ನಾವು ತನಗಾಗಿ ಜೀವಬಿಟ್ಟು ದುಡಿಯುವ ಕಾರ್ಯಕರ್ತ ಸಮೂಹದ ಸಹಾಯಕ್ಕೆ ನಿಲ್ಲುವ ನಾಯಕನನ್ನು ನೋಡಿದ್ದೇವೆ. ಆದರೆ ಇಂತಹ ನಾಯಕನನ್ನು ನೋಡುವುದು ಬಹಳ ವಿರಳ. ಜೊತೆಗಿದ್ದು ನೋಡಿದಾಗ ತಿಳಿಯಿತು ಇಂತಹ ಕಾಂಗ್ರೆಸ್ ನಾಯಕರು ಸಿಗುವುದು ಬಹಳ ವಿರಳ ಎಂದಿದ್ದಾರೆ.
ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ಪುತ್ತೂರು ಬ್ಲಾಕ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಹಾಗೂ ರಫೀಕ್ ಮೊದಲಾದವರು ಹಾಜರಿದ್ದರು.



