ಹರಣಶಿಕಾರಿ ಸಮುದಾಯದ ಮಗಳ ಸಾಧನೆಗೆ ಹಣವೇ ಅಡ್ಡಿ
ವಿಜಯಪುರ: ವಿಜಯಪುರ ಸಮುದಾಯ ಕಲಿಕಾ ಕೇಂದ್ರದ ಹರಣಶಿಕಾರಿ ಸಮುದಾಯದ ವಾಸುದೇವ್ ಕಾಳೆ ಅವರ ಮಗಳು ಅಶ್ವಿನಿ ಕಾಳೆ ರಾಷ್ಟ್ರಮಟ್ಟದ ಮಹಿಳಾ ಕುರಾಸ್ (ಕುಸ್ತಿ) ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದು ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ಈಗ ಅರಬ್ ರಾಷ್ಟ್ರದ ತುರ್ಕಮೇನಿಸ್ತಾನದಲ್ಲಿ 2023-24 ನೇ ಸಾಲಿಗಾಗಿ ನಡೆಯಲಿರುವ ಅಂತರರಾಷ್ಟ್ರೀಯ ಮಹಿಳಾ ಕುರಾಸ್ (ಕುಸ್ತಿ) ಅಂತರರಾಷ್ಟ್ರೀಯ ಕ್ರೀಡಾ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಆದರೆ ಅವರು ಆ ಸ್ಪರ್ಧೆಗೆ ತೆರಳಲು ಪ್ರಯಾಣ ಮತ್ತು ಇತರ ವೆಚ್ಚಗಳನ್ನು ಅವರಿಂದ ಭರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸ್ವತಃ ತಾವೇ ಯಾರಾದರೂ ಅಥವಾ ತಮ್ಮ ಸ್ನೇಹಿತರಿಗೆ ಈ ವಿಷಯವನ್ನು ತಿಳಿಸಿ ತಮಗೆ ಆಗುವ ಸಹಾಯವನ್ನು ಸಹಾಯ ಮಾಡಿಸಿ.
ಅಶ್ವಿನಿ ಕಾಳೆ ಅವರ ಸಾಧನೆಯನ್ನು ಪ್ರೋತ್ಸಾಹಿಸಬೇಕೆಂದು ಸಮುದಾಯ ಕಲಿಕಾ ಕೇಂದ್ರದ ಕೇಂದ್ರ ಸಮಿತಿಯ ಪರವಾಗಿ ಮನವಿ ಮಾಡಿಕೊಂಡಿದ್ದಾರೆ.
2023-24 ನೇ ಸಾಲಿನ ಅಂತರಾಷ್ಟ್ರೀಯ ಮಟ್ಟದ ಮಹಿಳಾ ಕುರಾಸ್ (ಕುಸ್ತಿ) ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಬಡ ಕ್ರೀಡಾಪಟುವಿಗೆ ಹಣಕಾಸು ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ನೆರವು ನೀಡುವವರು ಈ ಕೆಳಗಿನ ಖಾತೆಗೆ ಹಣ ಜಮಾ ಮಾಡಬಹುದು.
Vasudev kale
Karnataka vikasa grameen bank Vijayapur
A/C NO : 89037770432
IFSC: KVGB 0003116
Sr branch Vijayapur 586101.
ಸಂಪರ್ಕ ಸಂಖ್ಯೆ: 98808 82861




