ಸಚಿನ್ ತೆಂಡೂಲ್ಕರ್ ಶತಕವಂಚಿತರಾಗಿರುವುದು ಎಷ್ಟು ಬಾರಿ ಗೊತ್ತೇ?

2 years ago

#know #howmany #times #SachinTendulkar #missed #score #century #nervousnineties #cricket

ಸಚಿನ್ ತೆಂಡೂಲ್ಕರ್ ಅವರು ಏಕದಿನ ಟೆಸ್ಟ್ ಮತ್ತು ಟ್ವೆಂಟಿ-ಟ್ವೆಂಟಿ ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಅವುಗಳ ಪೈಕಿ ಒಂದು ದಾಖಲೆ ಎಂದರೆ ಅವರು ನರ್ವಸ್ ನೈಂಟೀಸ್‌ನಲ್ಲಿ 17 ಬಾರಿ ಔಟ್ ಆಗಿರುವುದು ಕೂಡ ಒಂದು ಗೊತ್ತೆ?

ಅವರು ನರ್ವಸ್ ನೈಂಟೀಸ್ ನಲ್ಲಿ ಔಟ್ ಆಗಿರುವುದು ಕೂಡ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯಾಗಿದೆ. ಆದರೆ ಸಚಿನ್ ತೆಂಡೂಲ್ಕರ್ ಅವರ ಈ ದಾಖಲೆಯ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ. ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಎಷ್ಟು ಬಾರಿ ಔಟಾದರು ಎಂಬುದನ್ನು ನೋಡಿ:

ಸಚಿನ್ ತೆಂಡುಲ್ಕರ್ 15 ನವೆಂಬರ್ 1989 ರಿಂದ 18 ಮಾರ್ಚ್ 2012 ರವರೆಗೆ ಒಟ್ಟು 463 ಏಕದಿನ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇವುಗಳ ಪೈಕಿ 27 ಫೆಬ್ರವರಿ 1996ರಲ್ಲಿ ಅವರು ನರ್ವಸ್ ನೈಂಟೀಸ್‌ನಲ್ಲಿ ಮೊದಲ ಬಾರಿ ಔಟಾಗಿದ್ದರು. ಈ ಪಂದ್ಯದಲ್ಲಿ ಅವರು ಆಸ್ಟ್ರೇಲಿಯಾ ವಿರುದ್ಧ 90 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದಿದ್ದರು. ಈ ಪಂದ್ಯ ಭಾರತದ ಮುಂಬೈನಲ್ಲಿ ನಡೆದಿತ್ತು. ಸಚಿನ್ ನರ್ವಸ್ ತೊಂಬತ್ತರಲ್ಲಿ 17 ಬಾರಿ ಔಟಾಗಿದ್ದಾರೆ ಮತ್ತು ಒಂದು ಬಾರಿ 104 ಎಸೆತಗಳಲ್ಲಿ 96 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.

ಕ್ರ.ಸಂರನ್ಎಸೆತಔಟ್ಎದುರಾಳಿಸ್ಥಳದಿನಾಂಕ
1.9084ಸ್ಟಂಪ್ಡ್ಆಸ್ಟ್ರೇಲಿಯಾಮುಂಬೈ27 ಫೆಬ್ರವರಿ 1996
2.9187ಸ್ಟಂಪ್ಡ್ಇಂಗ್ಲೆಂಡ್ಶಾರ್ಜಾ11 ಡಿಸೆಂಬರ್ 1997
3.9578ಬೌಲ್ಡ್ಪಾಕಿಸ್ತಾನಢಾಕಾ14 ಜನವರಿ 1998
4.93103ಬೌಲ್ಡ್ಪಾಕಿಸ್ತಾನಹೋಬರ್ಟ್21 ಜನವರಿ 2000
5.9389ಕ್ಯಾಚ್ದಕ್ಷಿಣ ಆಫ್ರಿಕಾನಾಗ್ಪುರ19 ಮಾರ್ಚ್ 2000
6.9395ಕ್ಯಾಚ್ಶ್ರೀಲಂಕಾಢಾಕಾ1 ಜೂನ್ 2000
7.9875ಕ್ಯಾಚ್ಪಾಕಿಸ್ತಾನಸೆಂಚುರಿಯನ್1 ಮಾರ್ಚ್ 2003
8.97120ಕ್ಯಾಚ್ಶ್ರೀಲಂಕಾಜೋಹಾನ್ಸ್‌ಬರ್ಗ್‌10 ಮಾರ್ಚ್ 2003
9.9396ಕ್ಯಾಚ್ಶ್ರೀಲಂಕಾನಾಗ್ಪುರ25 ಅಕ್ಟೋಬರ್ 2005
10.95104ಕ್ಯಾಚ್ಪಾಕಿಸ್ತಾನಲಾಹೋರ್‌13 ಫೆಬ್ರವರಿ 2006
11.99143ರನ್ ಔಟ್ದಕ್ಷಿಣ ಆಫ್ರಿಕಾಬೆಲ್‌ಫಾಸ್ಟ್26 ಜೂನ್ 2007
12.93106ಬೌಲ್ಡ್ದಕ್ಷಿಣ ಆಫ್ರಿಕಾಬೆಲ್‌ಫಾಸ್ಟ್29 ಜೂನ್ 2007
13.99112ಕ್ಯಾಚ್ಇಂಗ್ಲೆಂಡ್ಬ್ರಿಸ್ಟಲ್24 ಆಗಸ್ಟ್ 2007
14.9481ಕ್ಯಾಚ್ಇಂಗ್ಲೆಂಡ್ದಿ ಓವಲ್5 ಸೆಪ್ಟೆಂಬರ್ 2007
15.9991ಕ್ಯಾಚ್ಪಾಕಿಸ್ತಾನಮೊಹಾಲಿ8 ನವೆಂಬರ್ 2007
16.97102ಬೌಲ್ಡ್ಪಾಕಿಸ್ತಾನ್ಗ್ವಾಲಿಯರ್15 ನವೆಂಬರ್ 2007
17.91121ಕ್ಯಾಚ್ಆಸ್ಟ್ರೇಲಿಯಾಬ್ರಿಸ್ಬೇನ್4 ಮಾರ್ಚ್ 2008
18. 96* 104 Notout ಶ್ರೀಲಂಕಾ ಕಟಕ್ 21 ಡಿಸೆಂಬರ್ 2009


Leave a Reply