ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಂಶೋಧನೆ ನಡೆಸುತ್ತಿರುವ ಸಂಶೋಧನಾರ್ಥಿಗಳಿಗೆ ವಿವಿ ವತಿಯಿಂದ ನೀಡುತ್ತಿರುವ ಶಿಷ್ಯ ವೇತನವು ಕಡಿಮೆಯಾಗಿದ್ದು, ಇಲ್ಲಿ ಬಹುತೇಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವುದರಿಂದ ಶಿಷ್ಯವೇತನವನ್ನು ಹೆಚ್ಚಳ ಮಾಡುವ ಬಗ್ಗೆ ಸದನದ ಶೂನ್ಯ ವೇಳೆಯಲ್ಲಿ ನಿಯಮ 351 ರ ಅಡಿಯಲ್ಲಿ ಗಮನ ಸೆಳೆಯುವ ಬಗ್ಗೆ ನಂಜನಗೂಡು ಮೀಸಲು ಕ್ಷೇತ್ರದ ಶಾಸಕ ಬಿ.ಹರ್ಷವರ್ಧನ್ ಅವರು ಪ್ರಶ್ನೆ ಕೇಳಿದ್ದರು. ಸಂಬಂಧಪಟ್ಟ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮತ್ತು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅವರಿಗೂ ಪತ್ರ ಬರೆದಿದ್ದರು.
ಅದಕ್ಕೀಗ ಪ್ರಸ್ತುತ ಮೈಸೂರು ವಿ.ವಿ.ಯ ಸಂಶೋಧನಾರ್ಥಿಗಳಿಗೆ ವಿ.ವಿ. ಸಂಪನ್ಮೂಲದಲ್ಲಿ ಶೀಷ್ಯವೇತನ ಭರಿಸುತ್ತಿದ್ದು, ಎಸ್.ಸಿ.ಪಿ / ಟಿ.ಎಸ್.ಪಿ. ಅಡಿಯಲ್ಲಿ ಇದುವರೆಗೂ ಅನುದಾನ ಹಂಚಿಕೆಯಾಗಿರುವುದಿಲ್ಲ ಎಂಬ ಸ್ಪಷ್ಟ ಉತ್ತರ ವಿವರವಾಗಿ ದೊರಕಿದ್ದು, ಸಂಶೋಧನಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ಅನುದಾನ ಬಿಡುಗಡೆ ಮಾಡಿದ ಬಳಿಕ ರಾಜ್ಯದ ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೂ ಎಸ್.ಸಿ.ಪಿ / ಟಿ.ಎಸ್.ಪಿ. ಅಡಿಯಲ್ಲಿ ಶಿಷ್ಯವೇತನಕ್ಕಾಗಿ ಅನುದಾನ ನೀಡಲಾಗುವುದು ಎಂದು ತಿಳಿಸಲಾಗಿದೆ.
ಶೈಕ್ಷಣಿಕವಾಗಿ ವಿಶೇಷ ಕಾಳಜಿ ಹೊಂದಿರುವ ಶಿಕ್ಷಣ ಪ್ರೇಮಿ ಶಾಸಕರಾದ ಬಿ.ಹರ್ಷವರ್ಧನ್ ಅವರು ಒಬ್ಬ ಅತ್ಯುತ್ತಮ ಆಡಳಿತಗಾರ ಎನ್ನುವುದಕ್ಕೆ ಇದಕ್ಕಿಂತ ಸಾಕ್ಷಿಬೇಕೇ? ಇದು ಸಮುದಾಯದ ಪರ ಇರುವ ನೈಜ ಕಾಳಜಿ. ಮೀಸಲು ಕ್ಷೇತ್ರದ ಜನಪ್ರತಿನಿಧಿಯಾಗಿ ತಮ್ಮ ಶಕ್ತಿ ಮೀರಿ ಶ್ರಮಿಸುತ್ತಿದ್ದಾರೆ. ಇದು ಅವರೊಳಗಿರುವ ಬದ್ಧತೆಗೆ ಹಿಡಿದ ಕೈಗನ್ನಡಿ! ಎಂದು ಹರ್ಷವರ್ಧನ್ ಅಭಿಮಾನಿ ಪ್ರಜ್ವಲ್ ತಗಡೂರು ಅಭಿಪ್ರಾಯ ಪಟ್ಟಿದ್ದಾರೆ.




