ಕನ್ಯಾಕುಮಾರಿಯಿಂದ ಕಾಶ್ಮೀರದವರಗೆ ಬೈಕ್ ರೈಡ್ ಗೆ ಚಾಲನೆ
ಹರ್ ಘರ್ ತಿರಂಗಾ ನಡಿಗೆ ಜಾಥಾ
20000 ತ್ರಿವರ್ಣ ಧ್ವಜಾ ವಿತರಣೆ ಕಾರ್ಯಕ್ರಮ
ಬೆಂಗಳೂರು: ವಿಜಯನಗರ ವಿಧಾನಸಭಾ ಕ್ಷೇತ್ರದ ಅತ್ತಿಗುಪ್ಪೆ ವಾರ್ಡಿನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನದ ಜಾಥಾ, 20000 ತ್ರಿವರ್ಣ ಧ್ವಜ ವಿತರಣೆ ಮಾಡಲಾಯಿತು.
ಲಿಮ್ಕಾ ದಾಖಲೆ ಮುರಿದ ಬೈಕ್ ರೈಡರ್ ಚಿರಂತನ್ ಗೌಡ ಮತ್ತೊಮ್ಮೆ ಕನ್ಯಾಕುಮಾರಿ ಇಂದ ಕಾಶ್ಮೀರದವರೆಗೂ ಸೋಲೊ ರೈಡ್ ಮಾಡಲಿದ್ದಾರೆ (ಸುಮಾರು 22,000 ಕಿಲೋಮೀಟರ್). ಈ ಯಾತ್ರೆಗೆ ಸಂಗೀತ ನಿರ್ದೇಶಕ, ಗುರುಕಿರಣ್ ಮತ್ತು ಬಿ.ಬಿ.ಎಂ.ಪಿ. ಮಾಜಿ ಸದಸ್ಯರಾದ ಕೆ.ಉಮೇಶ್ ಶೆಟ್ಟಿ ಚಾಲನೆ ನೀಡಿದರು.
ಸಂಗೀತ ನಿರ್ದೇಶಕ ಗುರುಕಿರಣ್ ಮಾತನಾಡಿ, ಭಾರತ ಪುಣ್ಯ ಭೂಮಿ ಅದರಲ್ಲು ಕರುನಾಡಿನಲ್ಲಿ ಹುಟ್ಟುವುದು ಏಳು ಜನ್ಮ ಪುಣ್ಯ ಪಡೆದಿರಬೇಕು. ಸ್ವಾತಂತ್ರ್ಯದ ಅಮೃತ ಮಹೋತ್ಸವ ದೇಶ, ವಿದೇಶಗಳಲ್ಲಿಯೂ ಸಹ ಅದ್ದೂರಿಯಾಗಿ ಅಚರಿಸಲಾಗುತ್ತಿದೆ. ಭಾರತಮಾತೆ ಎಂದು ಗೌರವದಿಂದ ಕಾಣುವ ದೇಶ ನಮ್ಮದು. ದೇಶ, ನಾಡು, ನುಡಿಯ ಬಗ್ಗೆ ಅಭಿಮಾನ ಎಲ್ಲರಿಗೂ ಇರಬೇಕು ಎಂದು ಹೇಳಿದರು.
ಕೆ.ಉಮೇಶ್ ಶೆಟ್ಟಿ ಮಾತನಾಡಿ, ವಸತಿ ಸಚಿವರಾದ ವಿ.ಸೋಮಣ್ಣರವರ ಮಾರ್ಗದರ್ಶನದಲ್ಲಿ 75ನೇ ಅಮೃತ ಮಹೋತ್ಸವ ಶುಭ ಸಂದರ್ಭದಲ್ಲಿ ಸಾರ್ವಜನಿಕರ ಮನೆ ಮೇಲೆ ತ್ರಿವರ್ಣ ಧ್ವಜ ಹಾರಿಸಲು 20000 ತ್ರಿವರ್ಣ ಧ್ವಜ ವಿತರಿಸಲಾಗಿದೆ. ಭಾರತ ದೇಶ ವಿಶ್ವದ ಬಲಿಷ್ಠ ಪ್ರಧಾನಿ ನರೇಂದ್ರಮೋದಿ ನೇತೃತ್ವದಲ್ಲಿ ದೇಶ ವಿಶ್ವಗುರುವಾಗಿ ಹೊರಹೊಮ್ಮಿದೆ ಎಂದರು.
75ನೇ ವರ್ಷದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ಮಹತ್ವ ಸಂದೇಶಗಳನ್ನು ಸಹ ಮನೆಮನೆಗೆ ತಲುಪಿಸಲಾಗುತ್ತಿದೆ ಎಂದರು.




