ಅತಿಥಿ ಉಪನ್ಯಾಸಕರೇ ನಮ್ಮ ಹೋರಾಟ ಸರಿಯಾದ ಮಾರ್ಗದಲ್ಲಿದೆ, ಯಾರೂ ತಾಳ್ಮೆ ಕಳೆದುಕೊಳ್ಳಬೇಡಿ

4 years ago

ಅತಿಥಿ ಉಪನ್ಯಾಸಕರೇ ನಮ್ಮ ಹೋರಾಟ ಸರಿಯಾದ ಮಾರ್ಗದಲ್ಲಿದೆ, ಯಾರೂ ತಾಳ್ಮೆ ಕಳೆದುಕೊಳ್ಳಬೇಡಿ

ಆತ್ಮೀಯ ಅತಿಥಿ ಉಪನ್ಯಾಸಕರೇ,
ಪ್ರಸ್ತುತ ಪರಿಸ್ಥಿತಿಯಲ್ಲಿ ಯಾರೂ ಸರ್ಕಾರದ ಒತ್ತಡ ಹಾಗೂ ಒತ್ತಾಯಕ್ಕೆ ಮರುಳಾಗಿ ಮಣಿದು ಅನುಕಂಪದಿ ವಿದ್ಯಾರ್ಥಿಗಳ ಹಿತದೃಷ್ಟಿ ಎಂದು ಕಾಲೇಜ್ ಗಳಿಗೆ ಹೋಗಬೇಡಿ.
ಯಾಕೆಂದರೆ,
1) NEPಯನ್ನು ಅವಸರದಲ್ಲಿ ಜಾರಿ ಮಾಡಿ ಸರ್ಕಾರ ತಾನಾಗೇ ಬಿಕ್ಕಟ್ಟಿಗೆ ಸಿಲುಕಿದೆ. ಹಾಗಾಗಿ ನಮ್ಮ ಹಾಜರಾತಿ ಇಲ್ಲದೇ ಖಾಯಂನವರಿಂದ ಏನೂ ಮಾಡಲು ಅಸಾಧ್ಯ.
2) ಒಂದು ಬಾರಿ NEP ಜಾರಿ ಮಾಡಿದ ಮೇಲೆ ಹಿಂದೆ ಪಡೆಯಲು ಸಾಧ್ಯವಿಲ್ಲ.
3) ಅದೇರೀತಿ ಖಾಯಂನವರು ಹೆಚ್ಚುವರಿ ಅವಧಿಯಲ್ಲಿ ಪಾಠ ಮಾಡಲು ಒಪ್ಪಲ್ಲ.
4) ಈಗಾಗಲೇ ನಾವುಗಳೆಲ್ಲ ಕಾಲೇಜ್ ಗೆ ವರದಿ ಮಾಡಿಕೊಂಡ ಕಾರಣ ನಮ್ಮನ್ನೆಲ್ಲ ಬಿಟ್ಟು ಬೇರೆಯವರನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ.
5) ಆನ್ಲೈನ್ ಪಾಠ ಮಾಡಿ ಮುಂದುವರಿಯಲು ಸರ್ಕಾರ ಹಾಗೂ ವಿದ್ಯಾರ್ಥಿಗಳಲ್ಲಿ ಸೂಕ್ತ ವ್ಯವಸ್ಥೆಯೇ ಇಲ್ಲ.
6) ಪಾಠವಿಲ್ಲದೇ ಪರೀಕ್ಷೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ವಿದ್ಯಾರ್ಥಿಗಳೇ ಒಪ್ಪಲ್ಲ. (ಈಗಾಗಲೇ ತುಮಕೂರು ವಿ.ವಿ ಪರೀಕ್ಷೆ fee ಅನೌನ್ಸ್ ಮಾಡಿದ ಆದೇಶವನ್ನೇ ಹಿಂದೆ ಪಡೆದಿದೆ.
7) KEA ಗೊಂದಲದಿಂದ 1250 ಸ.ಪ್ರಾಧ್ಯಾಪಕರ ಪರೀಕ್ಷೆ ಮಾಡಲು ಮುಂದಾದರೂ ಪರೀಕ್ಷೆ ಬರೆವ ಅಭ್ಯರ್ಥಿಗಳೇ ಸಿದ್ದವಿಲ್ಲ.
8) ನಮ್ಮ ಮೇಲೆ ಕ್ರಮ ಕೈಗೊಳ್ಳಲು ಅಸಾಧ್ಯ ಹಾಗೂ ಮುಂದಾದರೆ ಅಧಿಕೃತವಾಗಿ ನಮ್ಮನ್ನೆಲ್ಲ ಕಾಲೇಜು ಶಿಕ್ಷಣ ಇಲಾಖೆಯ ನೌಕರರು ಎಂದು ಅದೇ ಒಪ್ಪಿದ ಹಾಗೆ ಆಗಿ, ಅದು ನಮಗೆ ಕೋರ್ಟ್ ಗೆ ಸಲ್ಲಿಸಲು ದಾಖಲೆಯಾಗುತ್ತೆ.
9) ವೇತನ ಹೆಚ್ಚಳ ಹಾಗೂ ಮುಂದುವರಿಕೆ ಆದೇಶ ಬಿಟ್ಟು ಬೇರೆ ಲಿಖಿತ ಆದೇಶ ಸೇವಾಭದ್ರತೆ ಬಗ್ಗೆ ಬರುವವರೆಗೂ ತರಗತಿಯ ಬಹಿಷ್ಕಾರ ಹೀಗೆ ಮುಂದುವರಿದರೆ ರಾಷ್ಟ್ರಮಟ್ಟದ ಸುದ್ದಿಯಾಗಿ UGC ಹಾಗೂ ಸುಪ್ರೀಂಕೋರ್ಟ್ ಖಂಡಿತವಾಗಿ ಮದ್ಯಪ್ರವೇಶ ಮಾಡುತ್ತದೆ.
10) NEP ಜಾರಿ ಮಾಡಿ ವಿದ್ಯಾರ್ಥಿಗಳಿಗೆ ಸೂಕ್ತ ಪಾಠ ಮಾಡದೇ ಡಿಗ್ರಿ ಪ್ರಮೋಷನ್ ಮಾಡಿದರೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಛೀಮಾರಿ ಹಾಕಿ ಉನ್ನತ ಶಿಕ್ಷಣ ಸಚಿವರ ತಲೆದಂಡವಾಗುತ್ತದೆ. NEP ಜಾರಿಯ ಉದ್ದೇಶದಿಂದ ಕೇಂದ್ರಕ್ಕೆ ಕೆಟ್ಟ ಹೆಸರು ಬರುತ್ತೆ. ಹಾಗಾಗಿ ಕೇಂದ್ರ ಸರ್ಕಾರ ನಮಗೆ ಭದ್ರತೆ ಕೊಡಲು ಆದೇಶ ಮಾಡುತ್ತದೆ. 2020ರಲ್ಲಿ UGC ಸಹ ನಮ್ಮನ್ನೆಲ್ಲ ಕೋವಿಡ್ ವಾರಿಯರ್ಸ್ ಎಂದು ಪರಿಗಣಿಸಿ ರಾಜ್ಯಸರ್ಕಾರಕ್ಕೆ ಆದೇಶ ಮಾಡಿ 5 ತಿಂಗಳ ವೇತನ ಕೊಡಲು ನಮ್ಮ ಹೋರಾಟವೇ ಕಾರಣ ಎಂಬುದು ನೆನಪಿರಲಿ.
11) ಈ ಬಾರೀ ಪಿಯುಸಿಯಲ್ಲಿ ಎಲ್ಲರನ್ನೂ ಸಾಮೂಹಿಕವಾಗಿ ತೇರ್ಗಡೆ ಮಾಡಿರುವುದರಿಂದ ಅತಿಹೆಚ್ಚು ವಿದ್ಯಾರ್ಥಿಗಳು ಡಿಗ್ರಿಗೆ ಅಡ್ಮಿಶನ್ ಆಗಿರುವುದರಿಂದ ಅವರುಗಳು ಸೂಕ್ತ ಅಭ್ಯಾಸ ಹಾಗೂ ಪಾಠ ಕೇಳದೆ NEPಯ ಮಾದರಿ ಬಗ್ಗೆ ನಯಾಪೈಸೆ ಜ್ಞಾನ ಇಲ್ಲ. ಹಾಗಾಗಿ ಈ ಸೆಮಿಸ್ಟರ್ ನಲ್ಲಿ ಯಾರೂ ಪಾಠ ಕೇಳದೆ ಪರೀಕ್ಷೆ ಬರೆಯಲು ಸಿದ್ದವಿಲ್ಲ.
12) ಖಾಯಂ ಮಾಡಲು ಅಸಾದ್ಯವೆನ್ನಲು ನಾವ್ಯಾರು ಅರ್ಹತೆ ಇಲ್ಲದೇ ಪ್ರತಿವರ್ಷ UGC ಮಾದರಿಯಲ್ಲೇ ಆಯ್ಕೆಯಾಗಿ 15/16 ವರ್ಷದಿಂದ ಕಸ ಗುಡಿಸಿಲ್ಲ. ಖಾಯಂನವರಂತೆ ಪಾಠ ಮಾಡಿ ಭಿಕ್ಷೆ ಪಡೆದು ನೂರಾರು ಕೋಟಿ ಉಳಿಸಿದ್ದೇವೆ. ಹಾಗಾಗಿ ಯಾರೂ ಗಾಬರಿಯಾಗುವ ಅವಶ್ಯಕತೆ ಇಲ್ಲ.
ನಮ್ಮ ಹೋರಾಟ ಸರಿಯಾದ ಮಾರ್ಗದಲ್ಲಿದೆ. ಆದರೆ ಯಾರೂ ತಾಳ್ಮೆ ಕಳಕೊಂಡು ಅನ್ಯ ದಾರಿ ಹಿಡಿಯೋಕೆ ಹೋಗಬೇಡಿ.
– ಪುಲಿ.ಮಂಜುನಾಥಜೋಗಿ, ರಾಜ್ಯಶಾಸ್ತ್ರ ಉಪನ್ಯಾಸಕರು, ಪೀಣ್ಯ, ಬೆಂಗಳೂರು

Leave a Reply