ಸರಕಾರಿ ಶಾಲೆಗಳ ಬಲವರ್ಧನೆ, ಸರಕಾರಿ ಶಾಲೆಗಳ ವಸ್ತುಸ್ಥಿತಿ ಕುರಿತು ಚಿಂತನ, ಮಂಥನ
ಬೆಂಗಳೂರು: ರಾಜಾಜಿನಗರ ವಿಧಾನಸಭಾ ಕ್ಷೇತ್ರ: ಎ.ಪಿ.ಜೆ.ಅಬ್ದುಲ್ ಕಲಾಂ ಸಭಾಂಗಣದಲ್ಲಿ ಸರಕಾರಿ ಶಾಲೆಯ ಬಲವರ್ಧನೆ ಹಾಗೂ ಹಾಲಿ ಸರಕಾರಿ ಶಾಲೆಗಳ ವಸ್ತುಸ್ಥಿತಿಯ ಬಗ್ಗೆ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಪದಾಧಿಕಾರಿಗಳ ಜೊತೆಯಲ್ಲಿ ವಿಚಾರ ವಿನಿಮಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
- ಭಾರತ ಕಲ್ಯಾಣ ರಾಷ್ಟ್ರವಾಗಲು ಅಂಬೇಡ್ಕರರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು: ಕೆ.ವೈ.ನಾರಾಯಣಸ್ವಾಮಿ
- Modi is confident that he can capture the Delimitation Commission too: Rahul Gandhi
- ಅಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ
- ಬದುಕುವ ದಾರಿ ಮಾತ್ರ ಶಿಕ್ಷಣವಲ್ಲ, ಮಾನವೀಯತೆಯೇ ನಿಜವಾದ ವಿದ್ಯೆ: ಸಿದ್ದರಾಮಯ್ಯ
- ಮರಾಠಿ ಕಡ್ಡಾಯಗೊಳಿಸಿದ ಮಹಾರಾಷ್ಟ್ರ ಮಾದರಿ ಕರ್ನಾಟಕಕ್ಕೂ ಬರಲಿ: ಟಿ.ಎ. ನಾರಾಯಣಗೌಡ
ಮಾಜಿ ಶಿಕ್ಷಣ ಸಚಿವ, ಶಾಸಕ ಎಸ್.ಸುರೇಶ್ ಕುಮಾರ್ ರವರು ವಿವಿಧ ಜಿಲ್ಲೆಗಳ 80ಕ್ಕೂ ಹೆಚ್ಚು ಶಾಲೆಯ ಎಸ್ಡಿಎಂಸಿಯ ಮುಖ್ಯಸ್ಥರು ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಸುರೇಶ್ ಕುಮಾರ್, ಸರಕಾರಿ ಶಾಲೆಗಳ ಸಬಲೀಕರಣಕ್ಕಾಗಿ ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದೆ, ಬೆಳಗಾವಿ ಅಧಿವೇಶನದಲ್ಲಿ ಇದರ ಕುರಿತು ಹೆಚ್ಚಿನ ಚರ್ಚೆ ಮಾಡಲು ಸಭಾಪತಿಗಳು ಅನುಮತಿ ನೀಡಿದ್ದಾರೆ ಎಂದರು.
ನಮ್ಮ ತಾಯಿಯವರು ಶಿಕ್ಷಕಿಯಾಗಿದ್ದರು. ಶಿಕ್ಷಣ ಇಲಾಖೆಯ ಋಣವಿದೆ. ಓಬನಹಳ್ಳಿ ಸರಕಾರಿ ಶಾಲೆಯಲ್ಲಿ ಇಡಿ ಶಾಲೆಗೆ ಒಂದು ವಿದ್ಯಾರ್ಥಿನಿ ಮಾತ್ರ ಇದ್ದು ಶೋಚನಿಯ ಸ್ಥಿತಿಯಲ್ಲಿ ಇತ್ತು. ಸರಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣ ಮೂಲಭೂತ ಸೌಕರ್ಯ ಒದಗಿಸದರೆ ಮಾತ್ರ ಸರಕಾರಿ ಶಾಲೆ ಉಳಿಯುತ್ತದೆ ಎಂದರು.
ಶಿಕ್ಷಣ ಒಂದು ವ್ಯಾಪಾರೀಕರಣವಾಗಿದೆ. ಕುಟುಂಬದ ಅದಾಯದಲ್ಲಿ ಶೇಕಡ 20ರಷ್ಟು ಶಾಲೆಯ ಮಕ್ಕಳ ಶಿಕ್ಷಣ ವ್ಯಯ ಮಾಡಬೇಕಾಗುತ್ತದೆ. ಸರಕಾರಿ ಶಾಲೆಯಲ್ಲಿ ಸಮವಸ್ತ್ರ, ಮಧ್ಯಾಹ್ನ ಊಟ ನೀಡಿದರೂ ಸರಕಾರಿ ಶಾಲೆಗಳಿಗೆ ಮಕ್ಕಳು ಬರುವುದಿಲ್ಲ. ಸರ್ಕಾರ ನೀರಾವರಿಗೆ ನೀಡುವ ಆದ್ಯತೆ, ಸರ್ಕಾರಿ ಶಾಲೆಗಳಿಗೆ ನೀಡುವುದಿಲ್ಲ ಎಂದರು.
ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರು ಪ್ರತಿವಾರ ಒಂದು ಬಾರಿ ಸರಕಾರಿ ಶಾಲೆಗೆ ಭೇಟಿ ಮಾಡಿಬೇಕು. ಇದರಿಂದ ಸರ್ಕಾರಿ ಶಾಲೆಗಳ ಸುಧಾರಣೆ ಸಾಧ್ಯ. ಕೂಲಿ ಮಾಡುವ ಹುಡುಗನಿಗೆ ಉತ್ತಮ ಶಿಕ್ಷಕಿಯ ನಿರ್ಮಲಾರವರ ಮಾರ್ಗದರ್ಶನದಿಂದ ಶೇಕಡ 82ರಷ್ಟು ಅಂಕ ಗಳಿಸಿದ. ನಂತರ ಉನ್ನತ ಹುದ್ದೆ ಗಳಿಸಿದ. ಸರಕಾರಿ ಶಾಲೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂದರು.
ಅತಿಥಿ ಶಿಕ್ಷಕರಿಗೆ ಸಂಬಳಕ್ಕಿಂತ ಖೈದಿಗಳಿಗೆ ಸಂಬಳ ಹೆಚ್ಚು. ಆದರೆ ಖೈದಿಗಳಿಗೆ ಸಂಬಳವಾದರು ಕೊಡಿ. ಗ್ರಾಮೀಣ ಭಾಗದಲ್ಲಿ ಸರಕಾರಿ ಶಾಲೆಗಳಿಗೆ ಉತ್ತಮ ಜಾಗಗಳು ಇವೆ ಮತ್ತು ಶಿಕ್ಷಕರ ನೇಮಕಾತಿ ಕಡಿಮೆ ಇದೆ ಹಾಗೂ ಸರಕಾರಿ ಶಾಲೆಯಲ್ಲಿ ಸಿಗುವ ಅವಕಾಶ ಏನು? ಹಲವಾರು ಸವಾಲುಗಳನ್ನು ಸ್ವೀಕರಿಸಿ, ಗೆಲ್ಲಬೇಕು. ಕೇರಳದಲ್ಲಿ ಸರಕಾರಿ ಶಾಲೆಗಳಿಗೆ ಪ್ರಥಮ ಆದ್ಯತೆ ನೀಡಿ ಅವರ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸುತ್ತಾರೆ. ಸರಕಾರಿ ಶಾಲೆಗಳು ಉಳಿಯಬೇಕು ಈ ನಿಟ್ಟಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.




