ಬೆಂಗಳೂರು: ಸೇವಾ ಭದ್ರತೆ ಮತ್ತು ಕಾಯಮಾತಿಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು ಡಿಸೆಂಬರ್ 10ರಿಂದ ನಡೆಸುತ್ತಿರುವ ಮುಷ್ಕರ ಮುಂದುವರೆದಿದೆ.
ಸರ್ಕಾರದ ಕಣ್ತೆರೆಸುವ ಸಲುವಾಗಿ ಉಪನ್ಯಾಸಕರು ನಿನ್ನೆ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಮಲ್ಲಿಕಾರ್ಜುನ ಗೌಡರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಈ ಪಾದಯಾತ್ರೆಗೆ ಉನ್ನತ ಶಿಕ್ಷಣ ಸಚಿವರ ಕುರ್ಚಿ ಮಾತ್ರವಲ್ಲ ಸರಕಾರವನ್ನು ನಡುಗಿಸುವ ತಾಕತ್ತು ಇದೆ. ಮಂಡಗದ್ದೆಯಿಂದ ಬಾಗಲಕೋಟೆ ಜಿಲ್ಲೆಯವರು ಸೇರಿಕೊಳ್ಳುತ್ತೇವೆ. ಶರಾವತಿ ನದಿ ಹುಟ್ಟುವ ಸ್ಥಳದಲ್ಲಿ ಹುಟ್ಟಿದ ಪಾದಯಾತ್ರೆ ಹೋರಾಟ ಬೆಂಗಳೂರು ಹತ್ತಿರ ಬರುವ ಹೊತ್ತಿಗೆ ಸಾಗರವಾಗುತ್ತೆ ಎಂದಿದ್ದಾರೆ.




