ಬೆಂಗಳೂರು: ಅಜಾತಶತ್ರು, ದೇಶದ ಉತ್ತಮ ರಾಜಕಾರಣಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾರದರ್ಶಕ ಆಡಳಿತ ನೀಡಿ, ಮಾದರಿ ಸರ್ಕಾರ ನೀಡುವಲ್ಲಿ ಯಶ್ವಸಿಯಾದರು ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದರು.
ಅಟಲ್ ಬಿಹಾರಿ ವಾಜಪೇಯಿರವರ ಸುರ್ವಣ ಆಡಳಿತವನ್ನು ಇಂದಿನ ಪ್ರಧಾನಿ ನರೇಂದ್ರಮೋದಿಯವರ ಆಡಳಿತದಲ್ಲಿ ನೋಡಬಹುದು. ವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಕೃಷಿ, ಶ್ರಮಿಕ ವರ್ಗಕ್ಕೆ ಅಟಲ್ ಅವರ ಆಡಳಿತದಲ್ಲಿ ಹೆಚ್ಚು ಆದ್ಯತೆ ನೀಡಿದ್ದರು. ಅಟಲ್ ಅವರ ಹೆಸರಿನಲ್ಲಿ ಡೊಡ್ಡ ಶಕ್ತಿ ಇದೆ, ಅಟಲ್ ಅವರ ಆರ್ದಶ ಜೀವನ ಇಂದಿನ ಯುವಕರಿಗೆ ಮಾರ್ಗದರ್ಶಕವಾಗಿದೆ ಎಂದರು.
ಪಿ.ಸಿ.ಮೋಹನ್ ಮಾತನಾಡಿ ಸೇವೆ, ಸಮರ್ಪಣೆ ಮತ್ತು ದೇಶ ಅಭಿವೃದ್ದಿಯತ್ತ ತಂದ ಮಹಾನ್ ನಾಯಕ ಎಂದರೆ ಅಟಲ್ ಬಿಹಾರಿ ವಾಜಪೇಯಿ. ವಿರೋಧ ಪಕ್ಷದವರು ಸಹ ಅಟಲ್ ಅವರ ಬಗೆಗೆ ಉತ್ತಮ ಭಾವನೆ ಹೊಂದಿದ್ದರು. ಒಬ್ಬ ರಾಜಕಾರಣಿ ಯಶ್ವಸಿಯಾಗಬೇಕಾದರೆ ಅಟಲ್ ಬಿಹಾರಿ ವಾಜಪೇಯಿ ರವರ ನಡೆದ ಹಾದಿಯಲ್ಲಿ ನಾವು ಸಾಗಬೇಕು ಎಂದರು.
ಮಾಜಿ ಮಹಾನಗರ ಪಾಲಿಕೆ ಸದಸ್ಯ ಮುನಿರಾಜು ಮಾತನಾಡಿ, ಅಜಾತಶತ್ರು, ಯುವಕರ ಆಶಾಕಿರಣ ಅಟಲ್ ಬಿಹಾರಿ ವಾಜಪೇಯಿಯವರು ಆದರ್ಶ ರಾಜಕಾರಣಿ ಮತ್ತು ದಯಾನಂದನಗರ್ ವಾರ್ಡ್ ನಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ ಮಹನೀಯರುಗಳ ಹೆಸರಿನಲ್ಲಿ ಯೋಜನೆಗಳನ್ನು ಲೋಕರ್ಪಣೆ ಮಾಡಲಾಗಿದೆ. ಇಂದು ನಾವು ಸುಖ, ಶಾಂತಿ, ನೆಮ್ಮದಿಯ ಬದುಕಿಗೆ ಅಡಿಪಾಯ ಹಾಕಿಕೊಟ್ಟವರು. ಅಂತಹ ಮಹನೀಯರುಗಳನ್ನು ಮುಂದಿನ ಪೀಳಿಗೆ ಸ್ಮರಿಸಲು ಪ್ರತಿಯೊಂದು ಕಾಮಗಾರಿ ಕೆಲಸಗಳಿಗೆ ಹೆಸರಾಂತ ಗಣ್ಯರ ಹೆಸರುಗಳಲ್ಲಿ ನಾಮಕರಣ ಮಾಡಲಾಗಿದೆ ಎಂದರು.
ಶಾಸಕರ ಅನುದಾನ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಎಸ್.ಸಿ/ಎಸ್.ಟಿ.ವಿಚಾರ ವೇದಿಕೆ ವತಿಯಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ 97ನೇ ಹುಟ್ಟುಹಬ್ಬದ ಪ್ರಯುಕ್ತ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ದಯಾನಂದ್ ನಗರ ವಾರ್ಡ್ ನಲ್ಲಿ ವಿವಿಧ ಯೋಜನೆಗಳ ಲೋಕರ್ಪಣೆ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಲೋಕರ್ಪಣೆ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನವನ ಉದ್ಘಾಟನೆ, ಸುಧಾಮೂರ್ತಿ ಫೌಂಡೇಷನ್ ಸಂಸ್ಥಾಪಕಿ ಸುಧಾಮೂರ್ತಿಯವರ ಹೆಸರಿನಲ್ಲಿ ಉಚಿತ ಟೈಲರಿಂಗ್ ತರಬೇತಿ ಕೇಂದ್ರ ಉದ್ಘಾಟನೆ ಮಾಡಲಾಯಿತು. ಜೊತೆಗೆ, 20 ಲೀಟರ್ ಸಾಮ್ಯರ್ಥ ಕುಡಿಯುವ ನೀರಿನ 2000 ಕ್ಯಾನ್ ವಿತರಣೆ ಮಾಡಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್, ಮಾಜಿ ರಾಷ್ಟಪತಿ ಅಬ್ದುಲ್ ಕಲಾಂ, ನಾಡಪ್ರಭು ಕೆಂಪೇಗೌಡ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ ಅವರ ಸ್ಮರಣೆಯಲ್ಲಿ ಏಳು ಕಡೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಉದ್ಘಾಟಿಸಲಾಯಿತು.
ಕೂಲಿ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ ಲೇಬರ್ ಕಾರ್ಡ್ ವಿತರಣೆಯನ್ನು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮತ್ತು ಸಂಸದ ಪಿ.ಸಿ.ಮೋಹನ್, ಮಾಜಿ ಪಾಲಿಕೆ ಸದಸ್ಯರಾದ ಎಂ.ಮುನಿರಾಜು, ಶಕೀಲಾ ಮುನಿರಾಜು, ಬಿ.ಜೆ.ಪಿ. ಯುವ ಮೋರ್ಚಾ ರಾಜಾಜಿನಗರ ಘಟಕದ ಅಧ್ಯಕ್ಷ ಸಂಜಯ್ ನೆರವೇರಿಸಿದರು. ಸ್ಥಳೀಯ ಬಿ.ಜೆ.ಪಿ.ಮುಖಂಡರುಗಳು ಉಪಸ್ಥಿತರಿದ್ದರು.



