ದೆಹಲಿ: ಯಾವುದೇ ಸಮಸ್ಯೆಯಿಲ್ಲದೆ ಮನೆಯಲ್ಲೇ ಕುಳಿತು ಆರಾಮಾವಾಗಿ ತಮಗಿಷ್ಟ ಬಂದ ವಸ್ತುಗಳನ್ನು ಕೊಂಡು ಸಮಯ, ಹಣ ಉಳಿಸುತ್ತಿದ್ದ ಜನರಿಗೆ ತುಸು ಕೆಟ್ಟ ಸುದ್ದಿಯೊಂದು ಎದುರಾಗಿದೆ.
ಜೊಮ್ಯಾಟೊ ಮತ್ತು ಸ್ವಿಗ್ಗಿಯಂತಹ ಆನ್ ಲೈನ್ ಖರೀದಿ ವೇದಿಕೆಗಳಿಗೆ ಇನ್ನುಮುಂದೆ ಜಿ.ಎಸ್.ಟಿ ವಿಧಿಸುವ ಸಾಧ್ಯತೆಗಳು ದಟ್ಟವಾಗಿವೆ. ಜೊತೆಗೆ, ಆ್ಯಪ್ ಆಧಾರಿತ ಇ-ಕಾಮರ್ಸ್ ಆಪರೇಟರ್ ಗಳು (ECOs ) ಒದಗಿಸುವ ಆಹಾರ ವಿತರಣಾ ಸೇವೆಗಳ ಮೇಲೆ ಕೇಂದ್ರ ಸರ್ಕಾರ GST ವಿಧಿಸಬಹುದು.
ಕೊರೊನಾ ನಂತರ ಇದೇ ಮೊದಲ ಬಾರಿ ದೈಹಿಕವಾಗಿ ಸೆ.17 ರಂದು ಲಖ್ನೋದಲ್ಲಿ ಸಭೆ ನಡೆಸಲಿರುವ GST ಕೌನ್ಸಿಲ್ ಸಭೆಯಲ್ಲಿ ಚರ್ಚಿಸಬೇಕಾದ ಪ್ರಸ್ತಾವನೆಗಳಲ್ಲಿ ಆನ್ ಲೈನ್ ಸೇವೆ ನೀಡುವ ರೆಸ್ಟೋರೆಂಟ್ ವಿತರಣಾ ಸೇವೆಗಳ ಮೇಲೆ GST ವಿಧಿಸುವ ವಿಷಯವೂ ಸೇರಿಕೊಂಡಿದೆ.



